ಸೋಮವಾರಪೇಟೆ, ಆ.೨೯: ಸ್ನೇಹಿತರೊಂದಿಗೆ ಬೇಟೆಗೆ ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡೇಟು ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿ ರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಯಡವಾರೆ ಗ್ರಾಮದ ಶಿವಕುಮಾರ್ (೫೮) ಎಂಬವರೇ ಸಾವನ್ನಪ್ಪಿದವರಾಗಿದ್ದು, ನಿನ್ನೆ ರಾತ್ರಿ ಬೇಟೆಗೆ ತೆರಳಿದ್ದ ಸಂದರ್ಭ ಕೃತ್ಯ ನಡೆದಿದೆ.
ಯಡವಾರೆಯ ಶಿವಕುಮಾರ್ ಸೇರಿದಂತೆ ಇತರ ಐವರು ಗರ್ವಾಲೆ ವ್ಯಾಪ್ತಿಯಲ್ಲಿ ಬೇಟೆಗೆ ತೆರಳಿದ್ದು, ಈ ಸಂದರ್ಭ ಬಂದೂಕಿನಿAದ ಹಾರಿದ ಗುಂಡು ನೇರವಾಗಿ ಶಿವಕುಮಾರ್ ಅವರ ಕುತ್ತಿಗೆಗೆ ತಗುಲಿದೆ.
ಕುಸಿದು ಬಿದ್ದ ಅವರನ್ನು ಸಹಚರರು ಕರೆತಂದು ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸುವ ಸಂದರ್ಭ ಪ್ರಾಣ ಹೋಗಿದೆ ಎನ್ನಲಾಗಿದೆ. ಇಂದು ಸಂಜೆ ವೇಳೆಗೆ ಬೇಳೂರು ಬಾಣೆಯ ಹತ್ತಿರ ಮಾರುತಿ ವ್ಯಾನಿನಲ್ಲಿ ಮೃತದೇಹವನ್ನು ಇಟ್ಟುಕೊಂಡಿದ್ದ ಸಂದರ್ಭ ಘಟನೆಯ ಬಗ್ಗೆ ಮಾಹಿತಿ ಹೊರಬಂದಿದ್ದು, ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಐವರು ಓಡಿ ಪರಾರಿಯಾಗಿದ್ದಾರೆ.
ನಂತರ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರು ಆರೋಪಿ ಗಳಾದ ಐಗೂರಿನ ಚನ್ನಕೇಶವ, ಚೇತನ್, ತಾಕೇರಿ ಗ್ರಾಮದ ನಂದೀಶ, ಮಂಜುನಾಥ್ ಅವರುಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೋರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.
ಆರಂಭದಲ್ಲಿ ಮೈಸೂರು ವ್ಯಾಪ್ತಿಯಲ್ಲಿ ಬೇಟೆಗೆ ತೆರಳಿದ ಸಂದರ್ಭ ಆಕಸ್ಮಿಕವಾಗಿ ಗುಂಡೇಟು ಬಿದ್ದಿದೆ ಎಂದು ಹೇಳಲಾಗಿತ್ತು. ನಂತರ ಗರ್ವಾಲೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದು ಎನ್ನಲಾಗಿದೆ. ಒಟ್ಟಾರೆ ಪೊಲೀಸರ ಸಮಗ್ರ ತನಿಖೆಯಿಂದಷ್ಟೇ ಪ್ರಕರಣದ ನೈಜಾಂಶ ಬೆಳಕಿಗೆ ಬರಬೇಕಿದೆ. ಸ್ಥಳಕ್ಕೆ ಡಿವೈಎಸ್‌ಪಿ ಗಂಗಾಧರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.