ಸುಂಟಿಕೊಪ್ಪ, ಆ. ೨೮: ಇಲ್ಲಿನ ಮಲೆಯಾಳಿ ಸಮಾಜದ ೨೦೨೨-೨೦೨೩ನೇ ವಾರ್ಷಿಕ ಮಹಾ ಸಭೆಯು ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ವಿ.ಎ. ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿ.ಎ. ಸಂತೋಷ್ ಅವರನ್ನು ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಲಾಯಿತು. ಉಪಾಧÀ್ಯಕ್ಷರಾಗಿ ರಾಮಕೃಷ್ಣನ್, ಖಜಾಂಚಿಯಾಗಿ ರಾಜು, ಕಾರ್ಯದರ್ಶಿಯಾಗಿ ವಿನು, ಜಂಟಿ ಕಾರ್ಯದರ್ಶಿಯಾಗಿ ಸುಬ್ರಮಣಿ, ಸುದೀರ್, ಕುಂಞರಾಮನ್, ಸಂಘಟಣಾ ಕಾರ್ಯದರ್ಶಿಯಾಗಿ ಕಮಲಾಹಾಸನ್, ರಾಜೇಶ್, ಗೌರವ ಅಧ್ಯಕ್ಷರಾಗಿ ಭಾಸ್ಕರನ್, ಪ್ರಕಾಶ್ ಇ.ಇ., ಸಲಹಾ ಸಮಿತಿ ಸದಸ್ಯರಾಗಿ ಪಿ.ಸಿ. ಮೋಹನ್, ರಮೇಶ್ ಪಿಳ್ಳೆ, ರಂಜಿತ್ ಕುಮಾರ್, ಕೆ.ಎಸ್. ಅನಿಲ್, ಶಶಿ, ಸುರೇಶ್, ಚಂದು, ಅನೀಲ್ ಜಿ.ಪಿ., ಬಾಲಕೃಷ್ಣ, ಪಿ.ಕೆ. ಪ್ರಕಾಶ್, ಕೆ.ಕೆ. ಪ್ರಕಾಶ್, ಸುನೀಲ್ ಕುಮಾರ್, ವೇಲಾಯುಧನ್, ಶಿವಮಣಿ, ಮೋಹನ್ ಕೃಷ್ಣ, ಆಯ್ಕೆಯಾದರು. ನಂತರ ನಡೆದ ಸಭೆಯಲ್ಲಿ ಈ ವರ್ಷ ಓಣಂ ಹಬ್ಬದ ಆಚರಣೆಯನ್ನು ಅಕ್ಟೋಬರ್ ೧೭ ರಂದು ವಿವಿಧ ಆಟೋಟ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಸಲಿದ್ದು ಹಾಗೂ ೨೦೨೧-೨೦೨೨ರ ಸಾಲಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅಂಕಗಳಿಸಿದ ಸಮಾಜದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ಮತ್ತು ಸಮಾಜದ ನಾನಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸತ್ಕರಿಸಲು ತೀರ್ಮಾನಿಸಲಾಯಿತು.