ಪಾಲಿಬೆಟ್ಟ, ಆ. ೨೮: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ಅಮ್ಮತ್ತಿ ಒಂಟಿಯAಗಡಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ವೀರಾಜ ಪೇಟೆ ತಾಲೂಕಿನ ಕೊಂಡAಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಗಮನ ಸೆಳೆಯಿತು.
ಒಂದರಿAದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಛದ್ಮವೇಷ, ಗಾಯನ, ಸಾಮೂಹಿಕ ನೃತ್ಯ, ಕವಾಲಿ, ಜನಪದ ನೃತ್ಯ, ಗಜಲ್, ಚಿತ್ರಕಲೆ, ಕಥೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿಯAಥ ಕಾರ್ಯಕ್ರಮಗಳು ನಡೆಯುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಸ್ಪರ್ಧಾಮನೋಭಾವ ದೊಂದಿಗೆ ಕಲೆಯನ್ನು ಮೈಗೂಡಿಸಿ ಕೊಂಡು ಶಿಕ್ಷಣದೊಂದಿಗೆ ಪ್ರತಿಭಾನ್ವಿ ತರಾಗಿ ಮುಂದೆ ಬರಬೇಕೆಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಯಟ್ ಉಪನ್ಯಾಸಕ ಸಿದ್ದೇಶಿ, ಕರ್ನಾಟಕ ಜಾನಪದ ಪರಿಷತ್‌ನ ವೀರಾಜಪೇಟೆ ಘಟಕ ಅಧ್ಯಕ್ಷ ನಾ ಕನ್ನಡಿಗ ಟಾಮಿ ತೋಮಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಗೀತಾಂಜಲಿ, ಅಜಿತ, ಕರುಂಬಯ್ಯ, ಕೇಶವಮೂರ್ತಿ, ಶ್ರೀನಿವಾಸ್, ಪ್ರವೀಣ್, ಜೀವನ್, ಪುಷ್ಪಾ, ಸವಿತಾ, ರಾಧಾ, ಸಿಆರ್ ಪಿ ಸುಶಾ, ಇಸಿಒ ಮಾರ್ಗರೇಟ್, ವಿಶಾಲಾಕ್ಷಿ, ಶಿಕ್ಷಕರ ಸಂಘದ ಪದಾಧಿಕಾರಿಗಳ ಭಾರತಿ, ಪದ್ಮಾ, ಅಶ್ವತ್ಥ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ, ಶಾಲಾ ಶಿಕ್ಷಕರುಗಳಾದ ರವಿಕುಮಾರ್, ಜಯಂತಿ ಸೇರಿದಂತೆ ಮತ್ತಿತರರು ಇದ್ದರು.