ನಾಪೋಕ್ಲು, ಆ. ೨೮: ಹುಚ್ಚು ನಾಯಿ ಕಡಿತಕ್ಕೆ ಎರಡು ಗಬ್ಬದ ಹಸುಗಳು ಸಾವನ್ನಪ್ಪಿರುವ ಘಟನೆ ಸಮೀಪದ ಬೇತು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಐರೀರ ಪೂಣಚ್ಚ ಎಂಬವರಿಗೆ ಸೇರಿದ ೮ ತಿಂಗಳ ಗಬ್ಬದ ಹಸು ಹುಚ್ಚು ನಾಯಿ ಕಚ್ಚಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ. ಇವರು ಹಸುವನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ನಾಯಿ ಕಚ್ಚಿರುವ ಶಂಕೆ ವ್ಯಕ್ತವಾಗಿದೆ. ಹಸು ಏಕಾಏಕಿ ಚೀರಾಡುತ್ತಾ ಬಾಯಿಯಲ್ಲಿ ನೊರೆ ಹಾಗೂ ರಕ್ತ ಬರುತ್ತಿರುವದನ್ನು ಕಚ್ಚಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ. ಇವರು ಹಸುವನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ನಾಯಿ ಕಚ್ಚಿರುವ ಶಂಕೆ ವ್ಯಕ್ತವಾಗಿದೆ. ಹಸು ಏಕಾಏಕಿ ಚೀರಾಡುತ್ತಾ ಬಾಯಿಯಲ್ಲಿ ನೊರೆ ಹಾಗೂ ರಕ್ತ ಬರುತ್ತಿರುವದನ್ನು ನಾಯಿ ಕಚ್ಚಿದ್ದು, ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಹಸು ಸಾವನ್ನಪ್ಪಿದೆ.

ಹುಚ್ಚು ನಾಯಿ ಕಾಟದಿಂದ ಈ ವ್ಯಾಪ್ತಿಯಲ್ಲಿ ಭೀತಿಯ ವಾತಾವರಣ ಕಂಡು ಬಂದಿದ್ದು, ಸಂಬAಧಿಸಿದವರು ಕೂಡಲೇ ಹಸು ಕಳೆದುಕೊಂಡವರಿಗೆ ಪರಿಹಾರ ನೀಡುವದರೊಂದಿಗೆ ಹುಚ್ಚು ನಾಯಿ ತಡೆಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ಜನ ಆಗ್ರಹಿಸಿದ್ದಾರೆ.