ಸುಂಟಿಕೊಪ್ಪ, ಆ. ೨೮: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಮಾಧ್ಯಮದಲ್ಲಿ ಪುಸ್ತಕಗಳನ್ನು ಹೊರತರುವುದರ ಮೂಲಕ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ ಸಹಾಯ ಮತ್ತು ಮಾರ್ಗದರ್ಶನ ನೀಡಬೇಕಾಗಿದೆ ಎಂದು ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ಹೇಳಿದರು.

ಸುಂಟಿಕೊಪ್ಪ ಕಸಾಪ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ೧೯೯೫ ರಷ್ಟು ಹಿಂದೆಯೇ ಕೆ. ಶಿವರಾಮ್ ಕನ್ನಡ ಮಾಧ್ಯಮದಲ್ಲಿ ಐಎಎಸ್ ತೇರ್ಗಡೆ ಗೊಂಡಿದ್ದನ್ನು ಉಲ್ಲೇಖಿಸಿದರು. ಶತಮಾನ ಕಳೆದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕೇವಲ ೩ ಲಕ್ಷ ಸದಸ್ಯರನ್ನು ಹೊಂದಿದೆ. ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ೭ ಕೋಟಿ ತಲುಪಿದೆ. ಈ ಹಿನ್ನಲೆ ನಾವು ಆತ್ಮಾವಲೋಕನಾ ಮಾಡಿಕೊಳ್ಳಬೇಕಿದೆ ಎಂದು ಪಿ.ಎಸ್. ಜಾನ್ ಕಿವಿಮಾತು ಹೇಳಿದರು.

ದೇಶದ ೮ ಪರಿಚ್ಛೇದಗಳÀಲ್ಲಿ ಕನ್ನಡ ೪ನೇ ಸ್ಥಾನದಲ್ಲಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದು ಹೇಳಿದ ಅವರು ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲರಿಗೂ ಬಹುಮಾನವನ್ನು ನೀಡುವಂತಾಗ ಬೇಕೆಂದು ಅವರು ಸುಂಟಿಕೊಪ್ಪ, ಆ. ೨೮: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡ ಮಾಧ್ಯಮದಲ್ಲಿ ಪುಸ್ತಕಗಳನ್ನು ಹೊರತರುವುದರ ಮೂಲಕ ಕನ್ನಡಿಗರಿಗೆ ಕನ್ನಡ ಸಾಹಿತ್ಯ ಪರಿಷತ್ ಸಹಾಯ ಮತ್ತು ಮಾರ್ಗದರ್ಶನ ನೀಡಬೇಕಾಗಿದೆ ಎಂದು ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್. ಜಾನ್ ಹೇಳಿದರು.

ಸುಂಟಿಕೊಪ್ಪ ಕಸಾಪ ಹೋಬಳಿ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ೧೯೯೫ ರಷ್ಟು ಹಿಂದೆಯೇ ಕೆ. ಶಿವರಾಮ್ ಕನ್ನಡ ಮಾಧ್ಯಮದಲ್ಲಿ ಐಎಎಸ್ ತೇರ್ಗಡೆ ಗೊಂಡಿದ್ದನ್ನು ಉಲ್ಲೇಖಿಸಿದರು. ಶತಮಾನ ಕಳೆದಿರುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕೇವಲ ೩ ಲಕ್ಷ ಸದಸ್ಯರನ್ನು ಹೊಂದಿದೆ. ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ೭ ಕೋಟಿ ತಲುಪಿದೆ. ಈ ಹಿನ್ನಲೆ ನಾವು ಆತ್ಮಾವಲೋಕನಾ ಮಾಡಿಕೊಳ್ಳಬೇಕಿದೆ ಎಂದು ಪಿ.ಎಸ್. ಜಾನ್ ಕಿವಿಮಾತು ಹೇಳಿದರು.

ದೇಶದ ೮ ಪರಿಚ್ಛೇದಗಳÀಲ್ಲಿ ಕನ್ನಡ ೪ನೇ ಸ್ಥಾನದಲ್ಲಿದೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದು ಹೇಳಿದ ಅವರು ಕನ್ನಡ ಮಾಧ್ಯಮದಲ್ಲಿ ಓದಿದ ಎಲ್ಲರಿಗೂ ಬಹುಮಾನವನ್ನು ನೀಡುವಂತಾಗ ಬೇಕೆಂದು ಅವರು ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ರಾಜ್ಯಾಧ್ಯಕ್ಷರು ಸದಸ್ಯತ್ವ ಆಂದೋಲನಕ್ಕೆ ಒತ್ತು ನೀಡಿದ್ದು ‘ಮೊಬೈಲ್ ಆ್ಯಪ್’ ಮೂಲಕ ಸದಸ್ಯತ್ವವನ್ನು ಮನೆಯಿಂದಲೇ ಪಡೆಯಬಹುದಾಗಿದೆ ರೂ. ೧,೦೦೦ ಇದ್ದ ಸದಸ್ಯತ್ವ ಶುಲ್ಕವನ್ನು ರೂ. ೨೫೦ ಕ್ಕೆ ಇಳಿಸಿ ರೂ. ೧೫೦ ಹೆಚ್ಚುವರಿಯಾಗಿ ನೀಡಿದರೆ ಸ್ಮಾರ್ಟ್ ಕಾರ್ಡ್ ಕೂಡ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಪಾಲ್ಗೊಂಡಿದ್ದ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಸುನಿಲ್, ನೂತನ ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ಮೂರ್ತಿ ವಹಿಸಿದ್ದು ನೂತನ ಸಮಿತಿಗೆ ಶುಭಕೋರಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಮಹೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸ್ವಸ್ಥದ ಶಿಕ್ಷಕ ಮುರುಗೇಶ್, ರಮೇಶ್ ಅವರು ಕನ್ನಡ ಹಾಡುಗಳನ್ನು ಹಾಡಿದರು. ಇದೇ ಸಂದರ್ಭ ನಿಕಟಪೂರ್ವ ಅಧ್ಯಕ್ಷ ಎಂ.ಎಸ್. ಸುನಿಲ್ ಮತ್ತು ಹಿರಿಯ ಪತ್ರಕರ್ತ ಎಂ.ಬಿ. ವಿನ್ಸೆಂಟ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷರಾಗಿ ಪಿ.ಎಫ್. ಸಬಾಸ್ಟೀನ್, ಉಪಾಧ್ಯಕ್ಷರಾಗಿ ಲೀಲಾ ಮೇದಪ್ಪ, ಗೌರವ ಕಾರ್ಯದರ್ಶಿಗಳಾಗಿ ಕೆ.ಎಸ್. ಅನಿಲ್‌ಕುಮಾರ್, ಖಜಾಂಚಿಯಾಗಿ ಸತೀಶ್ ಶೇಟ್, ಗೀತಾ ಬಸಪ್ಪ, ಲಿಯೋನಾ ಸಬಾಸ್ಟೀನ್ ಅವರು ಸೇರಿದಂತೆ ಕಾರ್ಯಕಾರಿ ಮಂಡಳಿಯವರು, ಜಿಲ್ಲೆ ಮತ್ತು ತಾಲೂಕು ಕಸಾಪ ಘಟಕಗಳ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.