ಶ್ರೀಮಂಗಲ, ಆ. ೨೮: ಬೆಂಗಳೂರುವಿನಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಗ್ರಾಮೀಣ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಜಿಲ್ಲೆಯ ದ್ವೀಪ್ ಮೇದಪ್ಪ ೧೬ ವರ್ಷ ಒಳಗಿನ ವಿಭಾಗದ ೮೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ಪಡೆದಿದ್ದಾರೆ.

ದ್ವೀಪ್ ಮೇದಪ್ಪ ಅವರು ಹುದಿಕೇರಿ ಸಮೀಪ ಕೋಣಗೇರಿ ಗ್ರಾಮದ ಕುಂಞAಗಡ ತಮ್ಮಯ್ಯ -ಕಾವ್ಯ ಮುತ್ತಮ್ಮ (ತಾಮನೆ ಕಳ್ಳಿಚಂಡ -ಬಾಳೆಲೆ) ದಂಪತಿಯ ಪುತ್ರ ದ್ವೀಪ್ ಮೇದಪ್ಪ ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆಯಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.