ಹೆಬ್ಬಾಲೆ, ಆ. ೨೮: ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸೋಮವಾರಪೇಟೆ ತಾಲೂಕು ವತಿಯಿಂದ ೨೦೨೨-೨೩ನೇ ಸಾಲಿನ ಕುಶಾಲನಗರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲ ಪ್ರೌಢಶಾಲೆಯು ಸತತ ೭ನೇ ಬಾರಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಮೇಲಾಟಗಳಲ್ಲಿ ಬಾಲಕಿಯರ ರಿಲೇ ಪ್ರಥಮ, ನೂರು ಮೀ ಓಟದಲ್ಲಿ ಅಂಕಿತ ಪ್ರಥಮ ಸ್ಥಾನ, ೧೫೦೦ ಮೀ ಓಟದಲ್ಲಿ ಪ್ರಥಮ ಹಾಗೂ ೧೦೦ ಮೀ ಓಟ ಹೊನ್ನಮ್ಮ ತೃತೀಯ ಸ್ಥಾನಗಳಿಸಿದ್ದಾರೆ. ೧೫೦೦ ಮೀ ಓಟದಲ್ಲಿ ಪ್ರಕೃತಿ ದ್ವಿತೀಯ ಹಾಗೂ ೨೦೦ ಮೀ ಓಟದಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾಳೆ. ಉದ್ದ ಜಿಗಿತದಲ್ಲಿ ಎಸ್.ಆರ್. ಅಶ್ವಿನಿ ತೃತೀಯ ಹಾಗೂ ತ್ರಿವಿಧ ಜಿಗಿತದಲ್ಲೂ ದ್ವಿತೀಯ ಸ್ಥಾನಗಳಿಸಿದ್ದಾಳೆ. ೩೦೦೦ ಮೀ ಓಟದಲ್ಲಿ ಕೌಶಲ್ಯ ಪ್ರಥಮ ಹಾಗೂ ತ್ರಿವಿಧ ಜಿಗಿತದಲ್ಲಿ ಪ್ರಥಮ ಬಹುಮಾನ ಗಳಿಸಿದರು.

ಎತ್ತರ ಜಿಗಿತದಲ್ಲಿ ಸ್ಫೂರ್ತಿ ದ್ವಿತೀಯ ಬಹುಮಾನ ಪಡೆದರು. ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ನಂದಿನಿ ಪ್ರಥಮ ಸ್ಥಾನ ಪಡೆದರು.

ಬಾಲಕರ ವಿಭಾಗದಲ್ಲಿ ಆದಿತ್ಯ ೩೦೦೦ ಮೀ ೮೦೦ ಮೀ ಓಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾನೆ. ಚಕ್ರ ಎಸೆತ ದರ್ಶನ್ ಪ್ರಥಮ ಸ್ಥಾನ, ತ್ರಿವಿಧ ಓಟದಲ್ಲಿ ರೋಹನ್ ದ್ವಿತೀಯ. ೧೫೦೦ ಮೀ ಓಟದಲ್ಲಿ ಪ್ರಥಮ ಹಾಗೂ ತ್ರಿವಿಧ ಜಿಗಿತದಲ್ಲಿ ದಿಗಂತ್ ಪ್ರಥಮ ಸ್ಥಾನಗಳಿಸಿದ್ದಾನೆ. ೧೦೦ ಮೀ ಓಟದಲ್ಲಿ ಯಶ್ವಂತ್ ದ್ವಿತೀಯ ಸ್ಥಾನಗಳಿಸಿದರು.

ಗುಂಪು ಆಟಗಳಲ್ಲಿ ಬಾಲಕಿಯರ ವಿಭಾಗದ ಹಾಕಿ ಪ್ರಥಮ, ಹ್ಯಾಂಡ್ ಬಾಲ್ ದ್ವಿತೀಯ, ಖೋ ಖೋ ದ್ವಿತೀಯ, ಕಬಡ್ಡಿ ದ್ವಿತೀಯ. ಬಾಲಕರ ವಿಭಾಗ ಖೋ-ಖೋ ದ್ವಿತೀಯ, ಹ್ಯಾಂಡ್ ಬಾಲ್ ದ್ವಿತೀಯ, ಹಾಕಿ ದ್ವಿತೀಯ ಸ್ಥಾನವನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಉಳಿಸಿಕೊಂಡಿದೆ.