ಮಡಿಕೇರಿ, ಆ. ೨೮: ೧೮೩೭ರ ಪ್ರಪ್ರಥಮ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿದ್ದ, ಬ್ರಿಟಿಷರಿಂದ ಗಲ್ಲಿಗೇರಿ ಹುತಾತ್ಮರಾದ, ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಗೆ ಜಿಲ್ಲೆಯಲ್ಲಿ ಭಾವಪೂರ್ಣ ಸ್ವಾಗತ ಕೋರಲಾಯಿತು. ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಪ್ರತಿಷ್ಠಾಪನೆ ಗೊಳ್ಳಲಿರುವ ಕಂಚಿನ ಪ್ರತಿಮೆ ಮಡಿಕೇರಿ, ಆ. ೨೮: ೧೮೩೭ರ ಪ್ರಪ್ರಥಮ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗಿದ್ದ, ಬ್ರಿಟಿಷರಿಂದ ಗಲ್ಲಿಗೇರಿ ಹುತಾತ್ಮರಾದ, ಕೆದಂಬಾಡಿ ರಾಮಯ್ಯಗೌಡರ ಕಂಚಿನ ಪ್ರತಿಮೆಗೆ ಜಿಲ್ಲೆಯಲ್ಲಿ ಭಾವಪೂರ್ಣ ಸ್ವಾಗತ ಕೋರಲಾಯಿತು. ಮಂಗಳೂರಿನ ಬಾವುಟ ಗುಡ್ಡೆಯಲ್ಲಿ ಪ್ರತಿಷ್ಠಾಪನೆ ಗೊಳ್ಳಲಿರುವ ಕಂಚಿನ ಪ್ರತಿಮೆ ಕೋರಿದರು.
ಜಿಲ್ಲಾ ಕೇಂದ್ರ ಮಡಿಕೇರಿಯ ಸುದರ್ಶನ ವೃತ್ತದಲ್ಲಿ ಗೌಡ ಸಮುದಾ ಯದವರು, ಕೆದಂಬಾಡಿ ಕುಟುಂಬ ಸ್ಥರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಬರಮಾಡಿ ಕೊಂಡರು. ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಮಂಗಳಾರತಿ ಬೆಳಗಿ ಸ್ವಾಗತ ಕೋರಲಾಯಿತು.
(ಮೊದಲ ಪುಟದಿಂದ)
ಶಾಸಕ ಕೊಂಬಾರನ ಬೋಪಯ್ಯ, ಕೊಡಗು ಗೌಡ ಒಕ್ಕೂಟಗಳ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಸ್ಮಾರಕ ಪ್ರತಿಮೆ ಉಸ್ತುವಾರಿಗಳಾದ ಪುತ್ತೂರು ಅನಂತರಾಜ ಗೌಡ, ಆನಂದ ಕರಂದ್ಲಾಜೆ, ಅಂಬೆಕಲ್ ನವೀನ್ ಕುಶಾಲಪ್ಪ, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ತುಂತಜೆ ಗಣೇಶ್, ವಿವಿಧ ಸಮಾಜಗಳ ಪದಾಧಿಕಾರಿಗಳು, ಕೆದಂಬಾಡಿ ಕುಟುಂಬಸ್ಥರು ಪಾಲ್ಗೊಂಡಿದ್ದರು.
ಮಡಿಕೇರಿಯ ಮುಖ್ಯ ಬೀದಿಯಲ್ಲಿ ಸಂಚರಿಸಿದ ಪ್ರತಿಮೆಯ ಮೆರವಣಿಗೆ ಗೌಡ ಸಮಾಜದಲ್ಲಿ ತಂಗಿದ್ದು. ತಾ. ೨೯ ರಂದು (ಇಂದು) ಬೆಳಿಗ್ಗೆ ಸಂಪಾಜೆ ಮೂಲಕ ಮಂಗಳೂರಿನತ್ತ ಪಯಣ ಬೆಳೆಸಲಿದೆ.
ಕುಶಾಲನಗರ: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪನೆ ಯಾಗುವ ಸ್ವಾತಂತ್ರ‍್ಯ ಹೋರಾಟಗಾರ ಕೆದಂಬಾಡಿ ರಾಮಯ್ಯಗೌಡ ಅವರ ಕಂಚಿನ ಪ್ರತಿಮೆ ಮೆರವಣಿಗೆ ತಾ. ೨೮ರ ಸಂಜೆ ಕುಶಾಲನಗರ ತಲುಪಿತು.
ಆದಿಚುಂಚನಗಿರಿ ಮಠದಿಂದ ಹೊರಟ ಪ್ರತಿಮೆ ಸಂಜೆ ವೇಳೆಗೆ ಕೊಡಗು ಜಿಲ್ಲೆಯ ಶಿರಂಗಾಲ ಮೂಲಕ ತೊರೆನೂರು, ಹೆಬ್ಬಾಲೆ, ಕೂಡಿಗೆ ಮಾರ್ಗವಾಗಿ ಕುಶಾಲನಗರಕ್ಕೆ ತಲುಪಿದ ಸಂದರ್ಭ ಕುಶಾಲನಗರ ಗೌಡ ಸಮಾಜ, ಗೌಡ ಯುವಕ ಸಂಘ, ಮಹಿಳಾ ಸಂಘಟನೆಗಳ ಸದಸ್ಯರು ಆರತಿ ಬೆಳಗಿ ಮತ್ತು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಪೂರ್ವಕವಾಗಿ ಬರಮಾಡಿ ಕೊಂಡರು. ಕುಶಾಲನಗರ ಮಾರುಕಟ್ಟೆ ರಸ್ತೆಯಾಗಿ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಮೆಗೆ ಸಂಘಟನೆಗಳ ಪ್ರಮುಖರು ಮಾಲಾರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಸೂದನ ಗೋಪಾಲ್, ಗೌಡ ಮಹಿಳಾ ಸಂಘಟನೆಗಳ ಪ್ರಮುಖರಾದ ಕುಲ್ಲಚ್ಚನ ಭಾಗೀರಥಿ, ಅಚ್ಚಾಂಡಿರ ಲತಾ, ಮಾಜಿ ಸೈನಿಕರ ಸಂಘದ ಪ್ರಮುಖರಾದ ದೇವಜನ ಚಿಣ್ಣಪ್ಪ, ಕುದುಪಜೆ ಭೋಜಪ್ಪ, ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಕೃಷ್ಣಪ್ಪ, ಕೊಡವ ಸಮಾಜ ಅಧ್ಯಕ್ಷ ಮಂಡೆಪAಡ ಬೋಸ್ ಮೊಣ್ಣಪ್ಪ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪ್ರಮುಖರು, ಸದಸ್ಯರು, ಸಾರ್ವಜನಿಕರು ಇದ್ದರು.
ಗುಡ್ಡೆಹೊಸೂರಿನಲ್ಲಿ ಭವ್ಯ ಸ್ವಾಗತ
ಗುಡ್ಡೆಹೊಸೂರು : ಸ್ವಾತಂತ್ರö್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಗುಡ್ಡೆಹೊಸೂರಿನಲ್ಲಿ ಸ್ವಾಗತಿಸಲಾಯಿತು. ಗುಡ್ಡೆಹೊಸೂರಿನ ವೃತ್ತದ ಬಳಿ ಸರ್ವರು ಸೇರಿ ಪುಷ್ಪ ನಮನ ಸಲ್ಲಿಸಿ ರಾಮಯ್ಯ ಪರ ಘೋಷಣೆ ಕೂಗಿ, ವಾಲಗಕ್ಕೆ ನೃತ್ಯ ಮಾಡಿ ಸಮಾಜ ಬಾಂಧವರು ಸಂಭ್ರಮಿಸಿದರು. ಈ ಸಂದರ್ಭ ಗುಡ್ಡೆಹೊಸೂರು ಗೌಡ ಸಮಾಜದ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ಸುಂಟಿಕೊಪ್ಪ : ಸ್ವಾತಂತ್ರö್ಯ ಹೋರಾಟಗಾರ ವೀರ ಸೇನಾನಿ ಕೆದಂಬಾಡಿ ರಾಮಯ್ಯಗೌಡ ಅವರ ಪ್ರತಿಮೆಗೆ ಸುಂಟಿಕೊಪ್ಪ ನಾಡು ಗೌಡ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ಪುಷ್ಪಾರ್ಚಣೆ ಮಾಡುವ ಮೂಲಕ ಇಲ್ಲಿನ ಕನ್ನಡ ವೃತ್ತದ ಬಳಿ ಬರಮಾಡಿಕೊಂಡರು.