ಕಣಿವೆ, ಆ. ೨೮: ಕುಶಾಲನಗರದ ಜಂಪ್ ಸ್ಮಾಶ್ ಕ್ಲಬ್ ವತಿಯಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಷಟಲ್ ಬ್ಯಾಡ್ಮಿಂಟನ್ ಕ್ರೀಡಾ ಕೂಟಕ್ಕೆ ನಗರದ ಹಿರಿಯ ಆಟಗಾರ ಜಿ.ಎಲ್.ಸತ್ಯನಾರಾಯಣ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕ್ರೀಡೆ ಯುವ ಜನರಲ್ಲಿ ಸ್ನೇಹ - ಸಾಮರಸ್ಯ ಹಾಗೂ ಸಹಬಾಳ್ವೆಯನ್ನು ಬೆಸೆಯುವ ಪ್ರಮುಖ ಸಾಧನವಾಗಿದೆ ಎಂದರು.
ಜAಪ್ ಸ್ಮಾಶ್ ಕ್ಲಬ್ಬಿನ ಮಾಲೀಕ ಶರತ್, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ವಿವಿಧ ತಂಡಗಳ ಮಾಲೀಕರಾದ ಶೈಜನ್ ಪೀಟರ್, ವಿಜೇತ ಹರೀಶ್, ಎನ್.ಅರುಣ, ಪಿಡಿಒ ಶ್ರೀನಿವಾಸ್, ವಿ.ಜಿ.ಲೋಕೇಶ್, ಎಎಸ್‌ಐ ದಿನೇಶ್ ಇದ್ದರು. ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿವಿಧ ಏಳು ತಂಡಗಳ ಒಟ್ಟು ೮೪ ಆಟಗಾರರು ಪಾಲ್ಗೊಂಡಿದ್ದಾರೆ.