(ಹೆಚ್.ಜೆ. ರಾಕೇಶ್)
ಮಡಿಕೇರಿ, ಆ. ೨೭ : ರಾಜ್ಯ ವಿಧಾನಸಭೆಗೆ ಮತ್ತೊಂದು ಕೌತುಕದ ಚುನಾವಣೆ ಸಮೀಪಿಸುತ್ತಿದೆ. ಇನ್ನೇನು ಕೆಲವು ತಿಂಗಳುಗಳಲ್ಲಿ ಈಗಿನ ಸರಕಾರದ ಅಧಿಕಾರಾವಧಿ ಮುಕ್ತಾಯಗೊಳ್ಳಲಿದ್ದು, ಚುನಾವಣೆ ಶೀಘ್ರದಲ್ಲಿ ಎದುರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಮೆಲ್ಲ ಮೆಲ್ಲನೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭಗೊಳ್ಳುತ್ತಿರುವುದು ಪ್ರಸ್ತುತದ ಬೆಳವಣಿಗೆಯಾಗಿದೆ. ಭದ್ರಕೋಟೆ ಎಂಬ ಹೆಗ್ಗಳಿಕೆ ಉಳಿಸಿಕೊಳ್ಳಲು ಬಿಜೆಪಿ ಈ ಕೋಟೆಗೆ ಲಗ್ಗೆ ಹಾಕಲು ಕಾಂಗ್ರೆಸ್ ಹಾಗೂ ಈ ಎರಡು ಪ್ರಬಲ ಪಕ್ಷಗಳೊಂದಿಗೆ ಹೊಸ ಅಸ್ತಿತ್ವದ ಕನಸಿನಲ್ಲಿ ಜೆಡಿಎಸ್‌ನ ಚಿತ್ತ ಕಂಡುಬರುತ್ತಿದೆ.
ಸುಭದ್ರ ನೆಲೆ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನವಿದ್ದರೆ, ಭಾರತೀಯ ಜನತಾ ಪಕ್ಷದ ಭದ್ರಕೋಟೆಯನ್ನು ಛಿದ್ರಗೊಳಿಸಬೇಕೆಂದು ಕಾಂಗ್ರೆಸ್ ಈಗಾಗಲೇ ‘ಫೀಲ್ಡ್’ಗಿಳಿದಂತಿದೆ. ಜಾತ್ಯತೀತ ಜನತಾದಳ ಕೂಡ ಚುನಾವಣಾ ಕಣವನ್ನು ಸುಸೂತ್ರÀಗೊಳಿಸುವ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದೆ. ಹಲವು ಕಾರ್ಯಕ್ರಮಗಳ ಮೂಲಕ ಜನರಿಗೆ ಹತ್ತಿರವಾಗುವ ಹಾಗೂ ಸಂಘಟಿತಗೊಳ್ಳುವ ಪ್ರಯತ್ನಗಳನ್ನು ನಡೆಸುತ್ತಿವೆ. ಇವೆಲ್ಲದರ ನಡುವೆ ಅಭ್ಯರ್ಥಿ ಯಾರೆಂಬ ಕುತೂಹಲ ಕೂಡ ಸಹಜವಾಗಿ ಸೃಷ್ಟಿಯಾಗಿದೆ. ಯಾವ ಪಕ್ಷಗಳು ಕೂಡ ಚುನಾವಣಾ ಕಲಿಗಳನ್ನು ಅಂತಿಮಗೊಳಿಸಿಲ್ಲ. ಪಕ್ಷಗಳ ತಂತ್ರ, ಪ್ರತಿತಂತ್ರಗಳು ಇದೀಗಾಗಲೇ ಆರಂಭಗೊAಡಿವೆ. ರಾಜಕೀಯ ಕೆಸರೆರಚಾಟವೂ ನಡೆಯುತ್ತಿದ್ದು, ಸರಕಾರದ ವೈಫಲ್ಯಗಳನ್ನು ವಿಪಕ್ಷಗಳು ಬೊಟ್ಟು ಮಾಡಿ ತೋರಿಸುವುದರಲ್ಲಿ ನಿರತವಾಗಿದ್ದು, ಬಿಜೆಪಿ ತನ್ನ ಸಾಧನೆಯ ಹಾದಿಯನ್ನು ಪ್ರದರ್ಶಿಸುತ್ತಿದೆ.

(ಮೊದಲ ಪುಟದಿಂದ) ‘ಡ್ಯಾಮೇಜ್ ಕಂಟ್ರೋಲ್’ ಮೊರೆ ಹೋಗಿವೆ.
ಕಾಂಗ್ರೆಸ್‌ನಲ್ಲಿ ಹುದ್ದೆಗಾಗಿ ಕೆಲವು ನಾಯಕರ ನಡುವೆ ಸಮನ್ವಯತೆ ಇಲ್ಲದಿರುವುದು ತಿಳಿದು ಬಂದಿದೆ. ಈ ಹಿನ್ನೆಲೆ ಜಿಲ್ಲಾ ಕಾಂಗ್ರೆಸ್ ಇದರಿಂದ ಪಕ್ಷಕ್ಕೆ ಮುಜುಗರವಾಗಬಾರದು ಎಂದು ಹೆಜ್ಜೆಹೆಜ್ಜೆಗೂ ಎಚ್ಚರದ ನಡೆ ಇಡುತ್ತಿದೆ ಎನ್ನಲಾಗುತ್ತಿದೆ. ಆದರೂ ಬ್ಲಾಕ್ ಕಾಂಗ್ರೆಸ್ ಮಟ್ಟದಲ್ಲಿ ಗೊಂದಲ ಇರುವುದು ಕಾಣಬಹುದಾಗಿದೆ. ವಲಸಿಗ ನಾಯಕರ ವಿರುದ್ಧ ಅಸಮಾಧಾನ ಹೊಂದಿರುವವರನ್ನು ಬೆಸೆಯುವ ಕಾರ್ಯಕ್ಕೆ ಪಕ್ಷ ಮುಂದಾಗಿದೆ.
ಜೆಡಿಎಸ್ ಕೂಡ ಆತ್ಮವಲೋಕನದಲ್ಲಿ ತೊಡಗಿಕೊಂಡಿದ್ದು, ಜೀವಿಜಯ ಅವರು ಪಕ್ಷ ತೊರೆದ ನಂತರ ಉತ್ತರ ಕೊಡಗಿನಲ್ಲಿ ಇಳಿಮುಖವಾಗಿರುವ ಕಾರ್ಯಕರ್ತರನ್ನು ಹೆಚ್ಚಿಸಲು ಪ್ರಯತ್ನ ಮಾಡುತ್ತಿದೆ. ಬೇರೆ ಪಕ್ಷಗಳಿಂದ ಬಂದ ನಾಯಕರಿಗೆ ಮನ್ನಣೆ ದೊರಕುತ್ತಿರುವುದು ಜೆಡಿಎಸ್ ಮುಖಂಡರಲ್ಲಿ ಅತೃಪ್ತಿಯ ಬೇಗುದಿ ಸೃಷ್ಟಿಸಿದ್ದರೂ, ಪಕ್ಷದಲ್ಲಿ ಒಡಕು ಮೂಡಬಾರದೆಂಬ ನಿಟ್ಟಿನಲ್ಲಿ ಒಂದುಗೂಡಿಸುವ ಕೆಲಸ ಮಾಡಲಾಗುತ್ತಿದೆ.
ಇತ್ತೀಚಿನ ವಿದ್ಯಮಾನಗಳಿಂದ ಬೇರೆ ಜಿಲ್ಲೆಗಳಲ್ಲಿ ಬಿಜೆಪಿ ಪಕ್ಷಕ್ಕೆ ಮುಂಚೂಣಿ ಘಟಕದ ನಾಯಕರು ಹಾಗೂ ಕಾರ್ಯಕರ್ತರು ರಾಜೀನಾಮೆ ನೀಡಿದ ಘಟನೆಗಳನ್ನು ಹೋಲಿಸಿದರೆ ಜಿಲ್ಲೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಆದರೆ, ಪಕ್ಷದ ದೊಡ್ಡ ಶಕ್ತಿಯಾಗಿರುವ ಹಿಂದೂಪರ ಸಂಘಟನೆಗಳು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದನ್ನು ಸರಿಪಡಿಸುವ ಕಾರ್ಯಕ್ಕೆ ರಾಜ್ಯ ವರಿಷ್ಠರು ಜಿಲ್ಲಾ ಬಿಜೆಪಿಗೆ ಸೂಚಿಸಿದೆ. ಯಾವುದೇ ಭಿನ್ನಾಬಿಪ್ರಾಯಗಳು ತಲೆದೋರದಂತೆ ಕಮಲ ಪಾಳಯ ನಿಗಾವಹಿಸಿದೆ.
ಮೂರು ಪಕ್ಷಗಳು ವಿವಿಧ ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ. ವಿಪಕ್ಷಗಳು ತಾವು ಆಡಳಿತದಲ್ಲಿದ್ದಾಗ ಮಾಡಿದ ಸಾಧನೆಯನ್ನು ತಿಳಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡಿರುವ ಕೆಲಸವನ್ನು ಮುಟ್ಟಿಸುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಪಕ್ಷದ ಪ್ರಚಾರ ನಡೆಯುತ್ತಿವೆ. ಮೂರು ಪಕ್ಷಗಳಲ್ಲಿಯೂ ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆಂದೆ ತಂಡವನ್ನು ನೇಮಕ ಮಾಡಿವೆ.
ಒಟ್ಟಾರೆಯಾಗಿ ಚುನಾವಣಾ ಪೂರ್ವ ಪ್ರಕ್ರಿಯೆಗಳಲ್ಲಿ ಪಕ್ಷಗಳು ಬಿರುಸಿನಿಂದ ತೊಡಗಿಸಿಕೊಂಡಿದ್ದು, ಕಾರ್ಯತಂತ್ರಗಳು ಯಾವ ರೀತಿಯಲ್ಲಿ ವರದಾನವಾಗುತ್ತದೆ ಎಂದು ಕಾದುನೋಡಬೇಕಾಗಿದೆ.