ನಾಪೋಕ್ಲು, ಆ. ೨೭: ಸ್ಥಳೀಯ ಭಗವತಿ ಯುವಕ ಸಂಘದ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆಟದ ಮೈದಾನದಲ್ಲಿ ಕೈಲು ಮುಹೂರ್ತ ಹಬ್ಬದ ಪ್ರಯುಕ್ತ ತಾ. ೨೮ ರಂದು (ಇಂದು) ಕ್ರೀಡಾಕೂಟ ನಡೆಯಲಿದೆ. ಅಪರಾಹ್ನ ೧.೩೦ ಗಂಟೆಗೆ ನಡೆಯುವ ಆಟೋಟ ಸ್ಪರ್ಧೆಯ ಅಧ್ಯಕ್ಷತೆಯನ್ನು ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟಿರ ದೇವಯ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಡಿಪಿ ಸದಸ್ಯ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ವಿಎಸ್‌ಎಸ್‌ಎನ್ ಮಾಜಿ ಉಪಾಧ್ಯಕ್ಷೆ ಕೇಲೆಟಿರ ಮಾಲಾ ಬೋಪಯ್ಯ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕ ಮಹಿಳೆಯರಿಗೆ ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ಅದೃಷ್ಟದ ಆಟ, ಬಿಸ್ಕೆಟ್ ತಿನ್ನುವ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡುಹೊಡೆಯುವುದು, ಭಾರದ ಕಲ್ಲು ಎಸೆತ, ರಸ್ತೆ ಓಟದ ಸ್ಪರ್ಧೆಗಳು, ಪುರುಷರ ಹಾಗೂ ಮಹಿಳೆಯರ ಹಗ್ಗಜಗ್ಗಾಟದ ಸ್ಪರ್ಧೆಗಳು ನಡೆಯಲಿವೆ ಎಂದು ಭಗವತಿ ಯುವಕ ಸಂಘದ ಕಾರ್ಯದರ್ಶಿ ಶಿವಚಾಳಿಯಂಡ ಕಿಶೋರ್ ಬೋಪಣ್ಣ ಪತ್ರಿಕೆಗೆ ತಿಳಿಸಿದ್ದಾರೆ.