ಮಡಿಕೇರಿ, ಆ. ೨೬: ಮಂಗಳೂರಿನ ಬಾವುಟಗುಡ್ಡೆಯಲ್ಲಿ ಪ್ರತಿಷ್ಠಾಪನೆಯಾಗಲಿರುವ ಸ್ವಾತಂತ್ರö್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪುತ್ಥಳಿಯ ಮೆರವಣಿಗೆ ತಾ. ೨೮ ರ ಸಂಜೆ ಮಡಿಕೇರಿ ತಲುಪಲಿದೆ ಎಂದು ಚೆಟ್ಟಿಮಾನಿ ಕೆದಂಬಾಡಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಅಂದು ಆದಿಚುಂಚನಗಿರಿ ಮಠದಿಂದ ಹೊರಡುವ ಪುತ್ಥಳಿ ಸಂಜೆ ೪.೩೦ ಗಂಟೆಗೆ ಮಡಿಕೇರಿ ತಲುಪಲಿದ್ದು, ಸಹಸ್ರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಪುತ್ಥಳಿಯನ್ನು ಬರ ಮಾಡಿಕೊಳ್ಳಲಿದ್ದಾರೆ. ತಾ. ೨೯ ರಂದು ಬೆಳಿಗ್ಗೆ ೭ ಗಂಟೆಗೆ ಮಡಿಕೇರಿಯಿಂದ ಹೊರಟು ಸಂಪಾಜೆಯ ಮೂಲಕ ಮಂಗಳೂರಿಗೆ ತೆರಳಲಿದೆ ಎಂದು ಪ್ರಕಟಣೆ ತಿಳಿಸಿದೆ.