ವೀರಾಜಪೇಟೆ, ಆ. ೨೬: ಚಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂಬೆಬೆಳ್ಳೂರು ದವಸ ಭಂಡಾರದ ೨೦೨೨-೨೭ ನೇ ಸಾಲಿನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಚೇಂದAಡ ನವೀನ್ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಭೀಮಯ್ಯ, ನಿರ್ದೇಶಕರಾಗಿ ಮಂಡೇಪAಡ ರವಿ, ಚಾರಿಮಂಡ ಶರಣು, ಚಾರಿಮಂಡ ಜೀವನ್, ಮಂಡೇಪAಡ ಪಾರ್ವತಿ, ಚೇಂದAಡ ಮಮತಾ, ಮಂಡೇಪAಡ ಮುತ್ತಪ್ಪ, ಚೀರಂಡ ಸೋಮಯ್ಯ, ವಿ.ಸಿ ಗಣೇಶ್, ಅಬೇಲಾ ಡಿಸೋಜಾ, ವ್ಯವಸ್ಥಾಪಕ ರಾಗಿ ಚೇಂದAಡ ಲಾಲ ಪೊನ್ನಪ್ಪ ಅವರುಗಳು ಆಯ್ಕೆಯಾಗಿದ್ದಾರೆ.
ಕೃಷಿಕರಿಗೆ ಸಾಲದ ಸೌಲಭ್ಯ ಸೇರಿದಂತೆ ಇನ್ನಿತರ ವ್ಯವಹಾರ ಗಳನ್ನು ನಡೆಸಲಾಗುತ್ತಿದೆ. ಸಂಸ್ಥೆಗೆ ೧೦೦ ವರ್ಷ ತುಂಬಿದ ಕಾರಣ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರು ಹಾಗೂ ಸಾರ್ವಜನಿಕರ ಸಹಕಾರದಿಂದ ಶತಮಾನೋತ್ಸವ ಕಾರ್ಯಕ್ರಮ ನಡೆಸಲಾಗುವುದು ಎಂದು ಚೇಂದAಡ ನವೀನ್ ಹೇಳಿದರು.