ಮಡಿಕೇರಿ, ಆ. ೨೬: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ೨೦೨೧-೨೨ ನೇ ಆರ್ಥಿಕ ವರ್ಷದಲ್ಲಿ ೬೬.೬೧ ಕೋಟಿ ರೂ. ನಿವ್ವಳ ಲಾಭ ಹಾಗೂ ತೆರಿಗೆ ಪೂರ್ವ ೧೦೭.೩೩ ಕೋಟಿ ರೂ. ದಾಖಲೆಯ ಲಾಭ ಗಳಿಸಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಂಸ್ಥೆಯ ೬೩ ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಕರೂಪ್ ಕೌರ್ ಸಂಸ್ಥೆಯ ಷೇರುದಾರರಿಗೆ ವಾರ್ಷಿಕ ವರದಿಯ ಬಗ್ಗೆ ತಿಳಿಸಿದರು.

ಸಂಸ್ಥೆಯು ೨೦೨೧-೨೨ ನೇ ಹಣಕಾಸು ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ ೪೯೩.೨೫ ಕೋಟಿ ರೂ.ಗಳ ಸಾಲ ಮಂಜೂರಾತಿ ಮಾಡಿದ್ದು, ಇದರಲ್ಲಿ ೪೩೨.೭೨ ಕೋಟಿ ರೂ. ಸೂಕ್ಷ್ಮ ಮತ್ತು ಸಣ್ಣ ಗಾತ್ರದ ಕೈಗಾರಿಕಾ ಘಟಕಗಳಿಗೆ ಮಂಜೂರಾಗಿದೆ.

೨೦೨೨ ರ ಮಾರ್ಚ್ ಅಂತ್ಯದವರೆಗೆ ೧,೭೫,೧೨೩ ಉದ್ಯಮಗಳಿಗೆ ೧೮,೭೭೯.೬೩ ಕೋಟಿ ರೂ.ಗಳ ಸಂಚಿತ ಸಾಲ ಮಂಜೂರಾತಿ ಮಾಡಲಾಗಿದೆ. ಈ ವರ್ಷದಲ್ಲಿ ೩೮೬.೪೬ ಕೋಟಿ ರೂ.ಗಳ ಸಾಲ ವಿತರಿಸಿದ್ದು, ೨೦೨೨ ರ ಮಾರ್ಚ್ ಅಂತ್ಯದವರೆಗೆ ೧೪,೭೭೬.೨೯ ಕೋಟಿ ರೂ.ಗಳಷ್ಟು ಸಂಚಿತ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು. ಪ್ರಸಕ್ತ ವರ್ಷದಲ್ಲಿ ಒಟ್ಟು ೭೪೧.೮೯ ಕೋಟಿ ರೂ.ಗಳ ವಸೂಲಾತಿ ಮಾಡಲಾಗಿದೆ. ಇದರಲ್ಲಿ ೩೧೭.೬೪ ಕೋಟಿ ರೂ.ಗಳಷ್ಟು ಮೊತ್ತವು ಬಡ್ಡಿಯ ಪಾಲಾಗಿರುತ್ತದೆ. ೨೦೨೨ ರ ಮಾರ್ಚ್ ಅಂತ್ಯದವರೆಗೆ ಸಂಚಿತ ವಸೂಲಾತಿಯ ಮೊತ್ತವು ೧೯,೨೫೯.೯೩ ಕೋಟಿ ರೂ. ಅಷ್ಟಾಗಿರುತ್ತದೆ. ಹಾಗೆಯೇ ಹಿಂದಿನ ಹಣಕಾಸು ವರ್ಷ ಶೇ.೫.೦೯ ರಷ್ಟು ಇದ್ದ ನಿವ್ವಳ ಅನುತ್ಪಾದಕ ಆಸ್ತಿಯು ಪ್ರಸಕ್ತ ವರ್ಷದಲ್ಲಿ ಶೇ.೪.೭೪ಕ್ಕೆ ಇಳಿದಿದೆ.

ರಾಜ್ಯ ಸರ್ಕಾರದ ಬೆಂಬಲದೊAದಿಗೆ ರೂಪಿತವಾದ ವಿವಿಧ ಬಡ್ಡಿ ಸಹಾಯಧನ ಯೋಜನೆಗಳಲ್ಲಿ ೩೭ ಮಹಿಳಾ ಉದ್ಯಮಿಗಳಿಗೆ ೪೨.೭೬ ಕೋಟಿ ರೂ. ಮಂಜೂರಾತಿ ಮಾಡಲಾಗಿದೆ. ೩೧ ನೇ ಮಾರ್ಚ್ ೨೦೨೨ ರ ಅಂತ್ಯದವರೆಗೆ ೯೧೭.೩೪ ಕೋಟಿ ರೂ.ಗಳ ಸಂಚಿತ ನೆರವನ್ನು ೧,೨೫೨ ಮಹಿಳಾ ಉದ್ಯಮಿಗಳಿಗೆ ಒದಗಿಸಲಾಗಿದೆ. ಹಾಗೆಯೇ ೧೭೭ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ೧೬೪.೬೧ ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಈ ಹಣಕಾಸು ವರ್ಷದ ಅಂತ್ಯದವರೆಗೆ ೧,೯೪೨.೧೯ ಕೋಟಿ ರೂ.ಗಳ ಸಂಚಿತ ನೆರವನ್ನು ೩,೪೫೬ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯಮಿಗಳಿಗೆ ನೀಡಲಾಗಿದೆ. ಸೂಕ್ಷö್ಮ ಮತ್ತು ಸಣ್ಣ ಗಾತ್ರದ ಘಟಕಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿ ೨೧೩ ಘಟಕಗಳಿಗೆ ೨೪೩.೦೨ ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಸದರಿ ಹಣಕಾಸು ವರ್ಷದ ಅಂತ್ಯದವರೆಗೆ, ೯೧೨ ಉದ್ಯಮಗಳಿಗೆ ೯೯೫.೨೦ ಕೋಟಿ ರೂ.ಗಳ ಸಂಚಿತ ನೆರವನ್ನು ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎ. ಕರೂಪ್ ಕೌರ್ ತಿಳಿಸಿದ್ದಾರೆ.