ಮಡಿಕೇರಿ, ಆ. ೨೬: ವಿಘ್ನ ನಿವಾರಕನ ಆರಾಧನೆಗೆ ಜಿಲ್ಲಾ ಕೇಂದ್ರ ಮಡಿಕೇರಿ ಸಜ್ಜಾಗುತ್ತಿದ್ದು, ಈ ಬಾರಿ ೩೧ ಕಡೆಗಳಲ್ಲಿ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ಸವ ಸಮಿತಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡುವ ಸಲುವಾಗಿ ತಾ. ೨೭ ರಂದು (ಇಂದು) ಬೆಳಿಗ್ಗೆ ೧೧ ಗಂಟೆಗೆ ನಗರ ಠಾಣೆಯಲ್ಲಿ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿದೆ.

ಎಲ್ಲೆಲ್ಲಿ ಪ್ರತಿಷ್ಠಾಪನೆ

ಈ ಬಾರಿ ರೈಫಲ್ ರೇಂಜ್ ಗಣಪತಿ, ಕಲಾನಗರ ರಾಘವೇಂದ್ರ ದೇವಾಲಯ, ಗಣಪತಿ ಬೀದಿಯ ಗಣಪತಿ ಯುವಕ ಸಂಘ, ಕನ್ನಂಡಬಾಣೆಯ ದೃಷ್ಠಿಗಣಪತಿ ಯುವಕ ಸಂಘ, ಕಾನ್ವೆಂಟ್ ಜಂಕ್ಷನ್‌ನ ಮಹಾಗಣಪತಿ ಸೇವಾ ಸಮಿತಿ, ಮಲ್ಲಿಕಾರ್ಜುನ ನಗರದ ಜ್ಯೋತಿ ಯುವಕ ಸಂಘ, ವಿದ್ಯಾನಗರದ ಶ್ರೀ ಶಕ್ತಿಗಣಪತಿ ದೇವಾಲಯ ಸೇವಾ ಸಮಿತಿ, ಜಿ.ಟಿ. ರಸ್ತೆಯ ಧಾರ್ಮಿಕ್ ಯುವ ವೇದಿಕೆ, ಭಗವತಿ ನಗರದ ಭಗವತಿ ಯುವಕ ಸಂಘ, ಹೊಸ ಬಡಾವಣೆಯ ಪ್ರಸನ್ನ ಗಣಪತಿ ಯುವಕ ಸಂಘ, ಚಾಮುಂಡೇಶ್ವರಿ ನಗರದ ಕೇಸರಿ ಯುವಕ ಸಂಘ, ಐಟಿಐ ಜಂಕ್ಷನ್‌ನ ಮೈತ್ರಿ ವಿಘ್ನೇಶ್ವರ ಯುವಕ ಸಂಘ, ಪುಟಾಣಿ ನಗರದ ಶ್ರೀ ಉದ್ಭವ ವಿನಾಯಕ ಸೇವಾ ಸಮಿತಿ, ಕೆಇಬಿ ರಸ್ತೆಯ ಮೆಸ್ಕಾಂ ಗಣೇಶೋತ್ಸವ ಸಮಿತಿ, ಗೌಳಿಬೀದಿಯ ಕಂಚಿಕಾಮಾಕ್ಷಿ ಯುವಕ ಸಂಘ, ಸುದರ್ಶನ ಬಡಾವಣೆಯ ಮುನೀಶ್ವರ ಯುವಕ ಸಂಘ, ಕೊಹಿನೂರು ರಸ್ತೆಯ ಹಿಂದೂ ಯುವಶಕ್ತಿ, ಬನ್ನಿಮಂಟಪದ ಸ್ವಸ್ತಿಕ್ ಯುವ ವೇದಿಕೆ, ಸಂಪಿಗೆ ಕಟ್ಟೆಯ ಸಂಪಿಗೆಕಟ್ಟೆ ಯುವಕ ಸಂಘ, ಜ್ಯೋತಿ ನಗರದ ಶಿವಶಕ್ತಿ ಯುವಕ ಸಂಘ, ಮಂಗಳಾದೇವಿನಗರದ ಶ್ರೀ ಆದಿಪರಾಶಕ್ತಿ ಯುವಕ ಸಂಘ, ಕೆಎಸ್‌ಆರ್‌ಟಿಸಿ ಡಿಪೋ ಗಣಪತಿ, ತ್ಯಾಗರಾಜ ಕಾಲೋನಿಯ ಅಭಿಷ್ಠಪ್ರದ ಗಣಪತಿ ಯುವಕ ಸಂಘ, ಚಾಮುಂಡೇಶ್ವರಿ ನಗರದ ಶ್ರೀ ಸಿದ್ಧಿವಿನಾಯಕ ಯುವಕ ಮಿತ್ರ ಮಂಡಳಿ, ಮಹದೇವ ಪೇಟೆಯ ವಿನಾಯಕ ಯುವಕ ಮಿತ್ರಮಂಡಳಿ, ಚೈನ್‌ಗೇಟ್‌ನ ಶ್ರೀ ವಿದ್ಯಾವಿನಾಯಕ ಯುವಕ ಮಂಡಳಿ, ಶಾಂತಿನಿಕೇತನ ಯುವಕ ಸಂಘ, ಅಶೋಕಪುರದ ಗಣಪತಿ ಸೇವಾ ಸಮಿತಿ, ದೇಚೂರಿನ ವಿದ್ಯಾವಾರಿಧಿ ಯುವಕ ಸಂಘ, ಹಳೇ ಖಾಸಗಿ ಬಸ್‌ನಿಲ್ದಾಣದ ಟ್ಯಾಕ್ಸ್ಸಿ ಹಾಗೂ ಆಟೋ ಚಾಲಕರ ಸಂಘ, ಓಂಕಾರ್ ಯುವ ವೇದಿಕೆ ಇವುಗಳ ವತಿಯಿಂದ ಗೌರಿಗಣೇಶೋತ್ಸವ ಆಚರಣೆಗೆ ಸಿದ್ಧತೆ ಕೈಗೊಳ್ಳಲಾಗಿದೆ.