ಕರಿಕೆ, ಆ. ೨೭: ಪ್ರೌಢಶಾಲಾ ವಿಭಾಗದ ವಲಯ ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಕರಿಕೆ ಪ್ರೌಢಶಾಲೆ ತಂಡ ಗೆಲುವು ಸಾಧಿಸಿದೆ. ಭಾಗಮಂಡಲ ವಾಜಪೇಯಿ ಶಾಲೆ ಹಾಗೂ ಕರಿಕೆ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿಗಳ ನಡುವೆ ನಡೆದ ಫೈನಲ್ ಕಬಡ್ಡಿ ಪಂದ್ಯಾವಳಿಯಲ್ಲಿ ವಾಜಪೇಯಿ ಶಾಲೆಯನ್ನು ಮಣಿಸಿದರು. ಗಾನವಿ, ರೇಖಾ, ಪೂಜಾ, ಗೋಪಿಕಾ, ನವ್ಯ, ಅಜಿತಾ, ಸ್ನೇಹ, ಹಿತಾಶ್ರಿ, ಹರ್ಷಿತ ವಿಜೇತ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಸಂದರ್ಭದಲ್ಲಿ ಮಾರ್ಗದರ್ಶಕರಾಗಿ ಶಿಕ್ಷಕ ಅಶೋಕ ಉಪಸ್ಥಿತರಿದ್ದರು.