ಮಡಿಕೇರಿ, ಆ. ೨೭: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪೊನ್ನಂಪೇಟೆ ವಲಯದ, ಪೊನ್ನಂಪೇಟೆ ಕಾರ್ಯಕ್ಷೇತ್ರದ, ಪೊನ್ನಂಪೇಟೆ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ನಲ್ಲಿ ಆಯುಷ್ಮಾನ್ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು.
೨೦೦ ಆಯುಷ್ಮಾನ್ ಕಾರ್ಡು ನೋಂದಾವಣೆ ಮಾಡಿದ್ದು, ೭೫ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಈ ಸುಸಂದರ್ಭದಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆಯನ್ನು ಪೊನ್ನಂಪೇಟೆ ವಲಯದ ಮೇಲ್ವಿಚಾರಕರಾದ ನರಸಿಂಹ ಮೂರ್ತಿ ಪಾಲುದಾರರಾದ ಅಸ್ಮಾ, ಪ್ರೇಮಾ ಮತ್ತು ತಂಗಮಣಿಯವರಿಗೆ ಅವರಿಗೆ ವಿತರಿಸಿದರು, ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಸೇವಾ-ಪ್ರತಿನಿಧಿ ರೋಹಿಣಿ ಜೀವಿತಾ, ಗೌರಿ, ಅರುಣ್ ಉಪಸ್ಥಿತರಿದ್ದರು.