ಗೋಣಿಕೊಪ್ಪ ವರದಿ: ಕೈಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮವಸ್ತç ವಿತರಣೆ, ಲೇಖನಿ ಸಾಮಗ್ರಿ ವಿತರಣೆ ನಡೆಯಿತು. ಶರ್ಮಿಲಿ ಅಪ್ಪಚ್ಚು ವಿದ್ಯಾರ್ಥಿಗಳಿಗೆ ಸಮವಸ್ತç ವಿತರಿಸಿದರು.
ಮುಖ್ಯಶಿಕ್ಷಕಿ ಎ.ಎ. ಜಯಂತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪಿ.ಆರ್. ಚಿತ್ರಾ, ಭಗವತಿ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಜಮ್ಮಡ ಪೂಣಚ್ಚ, ಹಾತೂರು ಗ್ರಾ.ಪಂ. ಸದಸ್ಯ ಕುಪ್ಪಂಡ ಪೂವಣ್ಣ, ಕೊಕ್ಕಂಡ ಲವ, ಕೊಕ್ಕಂಡ ನಮಿತ, ವಿಷ್ಮ, ದಾನಿ ಬಿದ್ದಂಡ ಮಾದಪ್ಪ, ಗೋಣಿಕೊಪ್ಪ ಆಟೋ ಚಾಲಕರ ಸಂಘದ ಅಧ್ಯಕ್ಷ ಮಲ್ಲಂಡ ಪ್ರಕಾಶ್ ಲೇಖನಿ ಸಾಮಗ್ರಿ ನೀಡಿದರು.ಮೂರ್ನಾಡು: ಮೂರ್ನಾಡಿನ ಕಿಗ್ಗಾಲಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಡಿಕೇರಿ ವುಡ್ಸ್ನಿಂದ ‘ವಿದ್ಯಾಸಿರಿ’ ಯೋಜನೆಯಡಿಯಲ್ಲಿ ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳು, ನೋಟ್ ಪುಸ್ತಕಗಳು ಮತ್ತು ಇತರ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ರೋಟರಿ ವುಡ್ಸ್ ಅಧ್ಯಕ್ಷ ಸಂಪತ್ ಕುಮಾರ್ ಅವರು ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಸರಕಾರಿ ಶಾಲೆಗಳಿಗೆ ಪ್ರವೇಶ ಪಡೆದುಕೊಂಡು ಅಲ್ಲಿ ಸಿಗುವಂತಹ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳುವುದರ ಮೂಲಕ, ತಮ್ಮ ಆಸುಪಾಸಿನಲ್ಲಿರುವ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರುವಂತೆ ಪ್ರೆರೇಪಿಸಬೇಕು ಎಂದು ಕರೆಕೊಟ್ಟರು. ಈ ನಿಟ್ಟಿನಲ್ಲಿ ಪೋಷಕರು ಕೂಡ ಕೆಲಸ ಮಾಡಬೇಕಾಗಿರುವುದು ಅಗತ್ಯ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಅವರು ಮಾತನಾಡಿ ಕಿಗ್ಗಾಲಿನಂತಹ ಗ್ರಾಮೀಣ ಭಾಗಕ್ಕೆ ಬಂದು ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿರುವ ರೋಟರಿ ವುಡ್ಸ್ ಕಾರ್ಯವನ್ನು ಶ್ಲಾಘಿಸಿದರು. ಈ ಸಂದರ್ಭ ವುಡ್ಸ್ ಕಾರ್ಯದರ್ಶಿ ವಸಂತ್ ಕುಮಾರ್, ಜಂಟಿ ಕಾರ್ಯದರ್ಶಿ ಹರೀಶ್ ಕಿಗ್ಗಾಲು, ರಂಜಿತ್ ಕಿಗ್ಗಾಲು, ಸದಸ್ಯರಾದ ಕಶ್ಯಪ್, ಶಾಲೆಯ ಸಹ ಅಧ್ಯಾಪಕಿ ಹೇಮಲತಾ ಹಾಜರಿದ್ದರು.ಕೂಡಿಗೆ: ಕುಶಾಲನಗರ ರೋಟರಿ ಕ್ಲಬ್ ವತಿಯಿಂದ ಕೂಡಿಗೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ಸಿರಿ, ವನಸಿರಿ ಯೋಜನೆ ಅಡಿಯಲ್ಲಿ ಉಚಿತವಾಗಿ ಸ್ವೆಟರ್ ಮತ್ತು ಕುಡಿಯುವ ನೀರಿನ ಫಿಲ್ಟರ್ ಅನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕುಶಾಲನಗರ ರೋಟರಿ ಸಂಸ್ಥೆಯ ಸಹಾಯಕ ರಾಜ್ಯಪಾಲ ಎಸ್.ಕೆ. ಸತೀಶ್, ಕುಶಾಲನಗರ ರೋಟರಿ ಕ್ಲಬ್‌ನ ಅಧ್ಯಕ್ಷ ಉಲಾಸ್ ಕೃಷ್ಣ, ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷರಾದ ಎಂ. ಡಿ. ರಂಗಸ್ವಾಮಿ, ರಾಜಶೇಖರ್, ಮಹೇಶ್, ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಕೂಡಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಕೂಡಿಗೆ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅನುಸೂಯ, ಶಿಕ್ಷಣ ಇಲಾಖೆಯ ಬಿಆರ್‌ಪಿ ಲೋಕೇಶ್, ಸಿಆರ್‌ಪಿ ಶಿವಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಸಣ್ಣಕ್ಕ, ಸೇರಿದಂತೆ ಶಾಲಾ ಶಿಕ್ಷಕರ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಪರಿಕರಗಳನ್ನು ವಿತರಣೆ ಮಾಡಿದರು.ಸುಂಟಿಕೊಪ್ಪ: ಸಮೀಪದ ಮಾದಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಪರಿವರ್ತನಾ ಟ್ರಸ್ಟ್ ಹಾಗೂ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಟೀ ಶರ್ಟ್ಗಳನ್ನು ವಿತರಿಸಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಮಿತಿ ಅಧ್ಯಕ್ಷ ಸುನಿಲ್ ಮಾತನಾಡಿ, ಇದು ನಮ್ಮ ಶಾಲೆ ನಮ್ಮ ಶಾಲೆಗೆ ಇನ್ನು ಮುಂದೆಯೂ ಹೆಚ್ಚಿನ ಸಹಕಾರ ನೀಡುವುದಾಗಿ ಹೇಳಿದರು. ಇದಕ್ಕೆ ಸಹಕರಿಸಿದ ಸಂಘಟಣೆಯ ಪ್ರಮುಖರಿಗೆ ಧನ್ಯವಾದ ಹೇಳಿದರು.
ಈ ಸಂದರ್ಭ ಸೋಮವಾರಪೇಟೆ ತಾಲೂಕು ಸಹ ಸಂಯೋಜಕ್ ವಿನು ಸ್ಥಳೀಯ ಕಾರ್ಯಕರ್ತರಾದ ಜಯರಾಂ, ಹರೀಶ್, ಶಾಲಾ ಶಿಕ್ಷಕ ವೃಂದ ಸಿಬ್ಬಂದಿಗಳು ಹಾಜರಿದ್ದರು.ಕಡಂಗ: ಸಮೀಪದ ಎಡಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಲಿ- ಕಲಿ ಕೊಠಡಿಗೆ ರಿಯಾಜ್ ಮಕ್ಕಿ ಅವರು ಸುಮಾರು ೪೦,೦೦೦ ಮೊತ್ತದ ಟೇಬಲ್ ಮತ್ತು ಚೇರ್ ಅನ್ನು ಉದಾರವಾಗಿ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮೊಹಮ್ಮದ್, ರಾಷ್ಟçಪತಿ ಪದಕ ವಿಜೇತ ನಿವೃತ್ತ ಶಿಕ್ಷಕರಾದ ಉಮ್ಮರ್ ಮಾಸ್ಟರ್, ಹ್ಯಾರಿಸ್ ಎಡಪಲ, ರಶೀದ್, ಬಶೀರ್, ಇಸ್ಮಾಯಿಲ್, ಶಾಲಾ ಮುಖ್ಯ ಶಿಕ್ಷಕಿ ಕೆ.ಎಂ. ದೇಚಮ್ಮ, ಶಾಲಾ ಶಿಕ್ಷಕರಾದ ಮರಿಯೆಂಬಿ ಕೆ.ಯು., ಅಪ್ಪಣ್ಣ ಎನ್.ಕೆ., ಕನಕ, ಪ್ರತಾಪ್ ಮತ್ತು ಆಡಳಿತ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.