ಗೋಣಿಕೊಪ್ಪ ವರದಿ, ಆ. ೨೬: ಕುಟ್ಟಂದಿ ಕುಂದಚಪ್ಪ ದೇವಸ್ಥಾನ ಆವರಣದಲ್ಲಿ ಮಾಜಿ ಸೈನಿಕ ಕೊಲ್ಲೀರ ಸುಬ್ರಮಣಿ ಅವರನ್ನು ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷ ಮದ್ರೀರ ಗಿರೀಶ್, ಪಿಡಿಒ ಪರಮೇಶ್ವರ, ಸದಸ್ಯ ಕೊಲ್ಲೀರ ಯು. ಬೋಪಣ್ಣ, ಕಾವೇರಮ್ಮ, ಲಕ್ಷಿö್ಮ, ಮಾಜಿ ಸೈನಿಕ ಚಂದೂರ ಪೊನ್ನಪ್ಪ, ಸ್ಥಳೀಯರಾದ ಉಮೇಶ್ ಕೇಚಮಯ್ಯ ಇದ್ದರು.