ವೀರಾಜಪೇಟೆ, ಆ. ೨೫: ಹೃದಯ ಹಾಗೂ ಇನ್ನಿತರ ಗಂಭೀರ ಕಾಯಿಲೆಗಳಿಗೆ ಸಂಬAಧಿಸಿದ ಚಿಕಿತ್ಸೆಗಳು ಜಿಲ್ಲೆಯಲ್ಲಿ ಲಭ್ಯ ಇಲ್ಲದ ಕಾರಣ ರೋಗಿಗಳು ಹೊರ ಜಿಲ್ಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಎದರಾಗಿದೆ. ಮೈಸೂರಿನ ನಾರಾಯಣ ಹೆಲ್ತ್ ಘಟಕದ ವತಿಯಿಂದ ವೀರಾಜಪೇಟೆ ಮಲ್ಟಿ ಸ್ಪೇಷಾಲಿಟಿ ಆರೋಗ್ಯ ಘಟಕವನ್ನು ಪ್ರಾರಂಭಿಸಿರುವುದು ಶ್ಲಾಘನೀಯ ಹಾಗೂ ಉಪಯೋಗಕರ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ವೆಂಕಟೇಶ್ ಹೇಳಿದರು. ಕೊಡಗು ದಂತ ಮಹಾ ವಿದ್ಯಾಲಯದಲ್ಲಿ ಮೈಸೂರಿನ ನಾರಾಯಣ ಹೆಲ್ತ್ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಮೆಡಿಕಲ್ ಸೆಂಟರ್ನ ಕ್ಲಿನಿಕಲ್ ನಿರ್ದೇಶಕ ಡಾ. ಎಂ.ಎನ್. ರವಿ ಮಾತನಾಡಿ, ಮಧುಮೇಹ, ಅಧಿಕ ರಕ್ತದ ಒತ್ತಡ, ಹೃದಯ, ನರ ವೈಜ್ಞಾನಿಕ ಪರಿಸ್ಥಿತಿಗಳೂ, ಮೂತ್ರಪಿಂಡ ಕಾಯಿಲೆ ಮತ್ತು ಕಾನ್ಸ್ರ್ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಹಿರಿಯ ತಜ್ಞ ವೈದ್ಯರು ಈ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ತುರ್ತು ಸಂದರ್ಭ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಗಂಭೀರ ಸಮಸ್ಯೆಗಳನ್ನು ಮೈಸೂರು ಘಟಕದಲ್ಲಿ ನಿರ್ವಹಿಸಲಾಗುವುದು. ದಿನದ ೨೪ ಗಂಟೆ ನುರಿತ ವೈದ್ಯರು ಲಭ್ಯ ಇರುತ್ತಾರೆ. ಗಂಭೀರ ಸಮಸ್ಯೆಗಳ ರೋಗಿಗಳಿಗೆ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ನೀಡಲಾಗುವುದು ಎಂದು ಹೇಳಿದರು. ನಾರಾಯಣ ಹೆಲ್ತ್ ಗ್ರೂಪ್ನ ಮುಖ್ಯ ವೈದ್ಯಕಿಯ ನಿರ್ದೇಶಕ ಡಾ. ಪುಚ್ಚಿಮಾಡ ಎಂ. ಉತ್ತಪ್ಪ ಮಾತನಾಡಿ, ನಾರಾಯಣ ಹೆಲ್ತ್ ರೋಗಿಗಳಿಗೆ ಸುರಕ್ಷಿತ ಹಾಗೂ ಗುಣಮಟ್ಟದ ಆರೈಕೆಯನ್ನು ನೀಡುವ ವಿಶ್ವಾಸಾರ್ಹ ಆರೋಗ್ಯ ಸಂಸ್ಥೆಯಾಗಿದೆ ಎಂದರು.
ಕೊಡಗು ದಂತ ಮಹಾ ವಿದ್ಯಾಲಯದ ಮ್ಯಾನೇಜಿಂಗ್ ಟ್ರಸ್ಟಿ ಕಂಜಿತAಡ ಸುನಿಲ್ ಮುದ್ದಯ್ಯ ಮಾತನಾಡಿ, ೧೯೯೯ ರಲ್ಲಿ ದಂತ ವೈದ್ಯಕೀಯ ವಿದ್ಯಾಲಯ ಅಂರ್ರಾಷ್ಟಿçÃಯ ಮಟ್ಟದಲ್ಲಿ ಪ್ರಗತಿ ಸಾಧಿಸಿದೆ ಎಂದರು. ವೇದಿಕೆಯಲ್ಲಿ ತಜ್ಞ ವೈದ್ಯರಾದ ಡಾ. ವಿಜಯಸಿಂಗ್, ಡಾ. ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.