ಮಡಿಕೇರಿ, ಆ. ೨೫: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ೨೦೨೨ನೇ ಸಾಲಿನ ಅರೆಭಾಷೆ ಕಥೆ, ಕವನ ಮತ್ತು ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಅರೆಭಾಷೆ ಕಥಾ ಸ್ಪರ್ಧೆಯಲ್ಲಿ ಕುಕ್ಕನೂರು ರೇಷ್ಮ ಮನೋಜ್ (ಪ್ರಥಮ), ಲೀಲಾ ದಾಮೋದರ (ದ್ವಿತೀಯ), ಎ. ಸುಂದರಗೌಡ (ತೃತೀಯ), ಲೀಲಾವತಿ ಜಗನ್ನಾಥ್ ಕೂಡಕಂಡಿ ಪ್ರೋತ್ಸಾಹಕ ಬಹುಮಾನ ಪಡೆದಿದ್ದಾರೆ.

ಅರೆಭಾಷೆ ಕವನ ಸ್ಪರ್ಧೆಯಲ್ಲಿ ಕೃಪಾ ದೇವರಾಜ್ (ಪ್ರಥಮ), ಎಡಿಕೇರಿ ವಿಶ್ವನಾಥ ಜಿ. (ದ್ವಿತೀಯ), ಲೀಲಾ ದಾಮೋದರ (ದ್ವಿತೀಯ), ಕೊಟ್ಟಕೇರಿಯನ ಲೀಲಾ ದಯಾನಂದ (ತೃತೀಯ), ವಿಮಲಾರುಣ ಪಡ್ಡಂಬೈಲು, ಪ್ರಗತಿ ಕೇಡನ ಪ್ರೋತ್ಸಾಹಕ ಬಹುಮಾನ ಪಡೆದರು. ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಲೀಲಾ ದಾಮೋದರ (ಪ್ರಥಮ), ಪಿ.ಜಿ. ಅಂಬೆಕಲ್ (ದ್ವಿತೀಯ), ಕೊಟ್ಟಕೇರಿಯನ ಲೀಲಾ ದಯಾನಂದ (ತೃತೀಯ) ಬಹುಮಾನ ಪಡೆದಿದ್ದಾರೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ತಿಳಿಸಿದ್ದಾರೆ.