ಗೋಣಿಕೊಪ್ಪಲು, ಆ. ೨೫: ಫ್ಲಾಂಟೇಷನ್ ಕೈಗಾರಿಕೆಯಲ್ಲಿ ದುಡಿಯುವವರ ಆರೋಗ್ಯ ಹಾಗೂ ರಕ್ಷಣೆ ಬಗ್ಗೆ ಆಡಳಿತ ವರ್ಗಗಳು ಕಾಳಜಿ ವಹಿಸಬೇಕೆಂದು ಆಹಾರ ಮತ್ತು ಕೃಷಿ ಕೈಗಾರಿಕೆ ಅಂರ‍್ರಾಷ್ಟಿçÃಯ ಸಂಘಟನೆಯ ಏಷ್ಯಾ ವಿಭಾಗದ ಸಂಚಾಲಕಿ ಶ್ರುತಿ ಪಾಟಿದಾರ್ ಕರೆ ನೀಡಿದರು. ಪಾಲಿಬೆಟ್ಟ ‘ಟಾಟಾ ಕಾಫಿ ಸ್ಟಾಫ್ ಕ್ಲಬ್’ನಲ್ಲಿ ತಾ. ೨೧ ರಂದು ಜರುಗಿದ ‘ದಿ ಎಸ್ಟೇಟ್ ಸ್ಟಾಫ್ ಯೂನಿಯನ್ ಆಫ್ ಸೌತ್ ಇಂಡಿಯಾ’ದ ಕೊಡಗು ಘಟಕದ ೪೪ ನೇ ಸರ್ವ ಸದಸ್ಯರ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚೆಗಿನ ವರ್ಷಗಳಲ್ಲಿ ಕೃಷಿ ಕೈಗಾರಿಕೆ ತೋಟಗಳಲ್ಲಿ ಅಗತ್ಯಕ್ಕಿಂತಲೂ ಅಧಿಕ ರಾಸಾಯನಿಕಗಳು ಹಾಗೂ ಕೀಟನಾಶಕ ಇತ್ಯಾದಿ ಔಷಧಿಗಳನ್ನು ಸಿಂಪಡಿಸುವದ ರಿಂದಾಗಿ ಭೂಮಿ ಹಾಗೂ ದುಡಿಯುವ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ನೌಕರರ ಆರೋಗ್ಯ ಕೆಡುತ್ತಿದೆ. ಇಂತಹ ಗಂಭೀರ ವಿಚಾರದ ಬಗ್ಗೆ ಸಂಬAಧಿಸಿದ ಕೈಗಾರಿಕಾ ಅಡಳಿತ ಮಂಡಳಿಗಳು ಎಚ್ಚರವಹಿಸಬೇಕಾಗಿದೆ. ಈ ಸಂಬAಧ ಟ್ರೇಡ್ ಯೂನಿಯನ್ ಗಳು ಕೂಡಾ ಮನವರಿಕೆ ಮಾಡಿಕೊಡ ಬೇಕಾದ ಅಗತ್ಯವಿದೆ ಎಂದರು.
ಸAಘದ ಕೇಂದ್ರ ಅಧ್ಯಕ್ಶ ಪಿ.ಎಸ್. ರೆಬೆಲ್ಲೋ ಕಾರ್ಯಕ್ರಮ ಉದ್ಘಾಟಿಸಿದರು. ಕೊಡಗು ಘಟಕದ ಅಧ್ಯಕ್ಷ ಪಾಣತ್ತಲೆ ಮುರುಳಿ ಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದ ಸ್ವಾಮಿ ಅವರು ಮುಂಬರುವ ದಿನಗಳಲ್ಲಿ ಫ್ಲಾಂಟೇಷನ್ ನೌಕರರ ವೇತನ ಒಪ್ಪಂದಗಳು ಹಾಗೂ ಸಂಘದ ಚಟುವಟಿಕೆ ಬಗ್ಗೆ ಮಾತನಾಡಿದರು. ಕಾರ್ಯದರ್ಶಿ ಸಿ.ಜಿ. ತಮ್ಮಯ್ಯ ಸ್ವಾಗತಿಸಿದರೆ, ಕಿರಣ್ ಮಾಧವನ್ ಪ್ರಾರ್ಥಸಿ ದರು, ಹಾಗೂ ಪಾಣತ್ತಲೆ ತುಳಸಿಮಾಲಾ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ
ವಾರ್ಷಿಕ ಮಹಾ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸಿ.ಜಿ. ತಮ್ಮಯ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕಿರಣ್ ಮಾಧವನ್, ಕೆ. ಮುರುಘನ್, ಪುರುಷೋತ್ತಮ ಶೆಟ್ಟಿ, ಕಾರ್ಯದರ್ಶಿ ಯಾಗಿ ಪಾಣತ್ತಲೆ ತುಳಸಿಮಾಲಾ ಮತ್ತು ಸಹ ಕಾರ್ಯ ದರ್ಶಿಗಳಾಗಿ ಕಿರಣ್, ರಾಜೇಶ್, ಆಶಾ, ಜಯಚಿತ್ರ, ಕೃಷ್ಣಮೂರ್ತಿ, ವಾಸುದೇವ್ ಹಾಗೂ ಮಂಜುನಾಥ್ ಅವರನ್ನು ಆಯ್ಕೆ ಮಾಡಲಾಯಿತು.