ಮಡಿಕೇರಿ, ಆ. ೨೫: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತರ ಖಾತೆಗೆ ಸಹಾಯಧನ ಜಮೆ ಮಾಡಲು ಹಾಗೂ ಇನ್ನಿತರ ಆರ್ಥಿಕ ನೆರವುಗಳು ಸಂದಾಯವಾಗಬೇಕಾದರೆ ಫಲಾನುಭವಿ ರೈತರು ತಮ್ಮ ಖಾತೆಗಳಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ರೈತರು ಹತ್ತಿರದ ಒಟಿಪಿ ಆಧಾರಿತ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ಕೋರಿದ್ದಾರೆ.
ರೈತರು hಣಣಠಿ://ಠಿmಞissಚಿಟಿ.gov.iಟಿ ಪೋರ್ಟಲ್ನ ಫಾಮರ್ಸ್ ಕಾರ್ನರ್ನ ಇ-ಕೆವೈಸಿ ಅವಕಾಶದಡಿ ಈಗಾಗಲೇ ಪಿಎಂ ಕಿಸಾನ್ ಯೋಜನೆಯಡಿಯ ಫಲಾನುಭವಿಯಾಗಿರುವ ಪ್ರತಿಯೊಬ್ಬ ರೈತರು ತಮ್ಮ ಆಧಾರ್ ಸಂಖ್ಯೆಯನ್ನು ಮತ್ತು ಆಧಾರ್ ಸಂಖ್ಯೆಯೊAದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆ ದಾಖಲಿಸಬೇಕು. ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊAದಿಗೆ ಜೋಡಣೆಯಾಗುವುದಿಲ್ಲವೋ ಅಥವಾ ಯಾರ ಮೊಬೈಲ್ ಇ-ಕೆವೈಸಿಗಾಗಿ ಕಳುಹಿಸಿದ ಒಟಿಪಿಯು ಸ್ವೀಕೃತವಾಗುವುದಿಲ್ಲವೋ ಅವರು ಸಿಎಸ್ಸಿಗೆ ತೆರಳಿ ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ ಮಾಡಬಹುದು.
ಜಿಲ್ಲೆಯಲ್ಲಿ ಸುಮಾರು ೪೯,೫೮೨ ರೈತರು ಪಿಎಂ ಕಿಸಾನ್ ಯೋಜನೆಯಡಿ ನೋಂದಣಿಯಾಗಿದ್ದು, ಇದರಲ್ಲಿ ೧೯೮೫೨ ರೈತರು ಈಗಾಗಲೇ ಇ-ಕೆವೈಸಿ ಮಾಡಿಕೊಂಡಿರುತ್ತಾರೆ. ಆದ್ದರಿಂದ ಉಳಿದಿರುವ ರೈತರು ಆಗಸ್ಟ್, ೩೧ ರೊಳಗೆ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಕೋರಿದ್ದಾರೆ.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ತಮ್ಮ ಗ್ರಾಮದ ಅಂಚೆ ಕಚೇರಿಯ ಪೋಸ್ಟ್ಮ್ಯಾನ್ಗಳನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.