ಶ್ರೀಮAಗಲ, ಆ. ೨೫ : ಶ್ರೀಮಂಗಲ ಠಾಣಾ ವ್ಯಾಪ್ತಿಯ ಬೀರುಗ ಗ್ರಾಮದ ಹೋಮ್ ಸ್ಟೇಯೊಂದರಲ್ಲಿ ಕಳವು ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬೀರುಗ ಗ್ರಾಮದ ನಾಯಿಕಲ್ ನಿವಾಸಿಗಳಾದ ಮಂಜು, ಸಂಜು ಹಾಗೂ ಸುಧೀರ್ ಬಂಧಿತ ಆರೋಪಿಗಳು. ಕಳೆದ ಕೆಲವು ದಿನಗಳ ಹಿಂದೆ ಹೊಂಸ್ಟೇಯಲ್ಲಿದ್ದ ಬೆಲೆಬಾಳುವ ವಸ್ತುಗಳು ಕಳವಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಎಂ.ಎ.ಅಯ್ಯಪ್ಪ ಹಾಗೂ ಪೊಲೀಸ್ ಉಪಾಧಿಕ್ಷಕ ನಿರಂಜನ್ ರಾಜೇ ಅರಸ್ ಮಾರ್ಗದರ್ಶನ, ಕುಟ್ಟ ವೃತ್ತನಿರೀಕ್ಷಕ ಮಂಜಪ್ಪ ನಿರ್ದೇಶನದಂತೆ ನಡೆದ ಕಾರ್ಯಾಚರಣೆಯಲ್ಲಿ ಶ್ರೀಮಂಗಲ ಠಾಣಾಧಿಕಾರಿ ರವಿಶಂಕರ್, ಎ.ಎಸ್.ಐ. ಬೋಪಯ್ಯ, ಸಿಬ್ಬಂದಿಗಳಾದ ಎಂ.ಕೆ. ಖಾಲಿದ್, ಶಿವಪ್ಪ ಮಂಜುನಾಥ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.