ಕಣಿವೆ, ಆ. ೨೫: ಕೋಳಿಗಳ ಹಿಂಡು ಕಂಡ ಎರಡು ನವಿಲುಗಳು ಗರಿ ಬಿಚ್ಚಿ ನರ್ತನ ಮಾಡುತ್ತಿದ್ದ ಚಿತ್ರಣ ಕೂಡಿಗೆಯಲ್ಲಿ ‘ಶಕ್ತಿ'ಗೆ ಸೆರೆಯಾಯಿತು.

ಕೂಡಿಗೆಯ ಕೂಡುಮಂಗಳೂರು ಗ್ರಾ. ಪಂ. ಮುಂಬದಿಯ ಸೈನಿಕರ ಬಡಾವಣೆಯ ರಸ್ತೆಯಲ್ಲಿ ಕೋಳಿಗಳ ಹಿಂಡೊAದು ಮನೆಯೊಡತಿ ಚೆಲ್ಲುತ್ತಿದ್ದ ಅಕ್ಕಿ ಕಾಳನ್ನು ತಿನ್ನುತ್ತಾ ಹರಟುತ್ತಿದ್ದವು. ಇದನ್ನು ಕಂಡ ನವಿಲುಗಳು ಕೋಳಿ ಹಿಂಡಿನ ಬಳಿ ಬಂದವು. ಒಂದು ನವಿಲು ಕೋಳಿಗಳ ಸಂಗಡ ಅಕ್ಕಿ ಕಾಳು ಆಯ್ದು ತಿಂದರೆ, ಜೊತೆಯಲ್ಲಿದ್ದ ಮತ್ತೊಂದು ನವಿಲು ಕೋಳಿಯೊಂದನ್ನು ಕಂಡು ಗರಿ ಬಿಚ್ಚಿ ನರ್ತಿಸುತ್ತಿದ್ದ ಚಿತ್ರಣ ನೋಡಲು ಬಡಾವಣೆಯ ಮನೆಯೊಳಗಿದ್ದ ಮಹಿಳೆಯರೆಲ್ಲಾ ಹೊರ ಬಂದು ಕಣ್ತುಂಬಿಕೊಳ್ಳುತ್ತಿದ್ದುದು ಕಂಡು ಬಂತು. ಕಾಡು ಪ್ರದೇಶದಲ್ಲಿನ ನವಿಲುಗಳು ಜನವಸತಿ ಪ್ರದೇಶದತ್ತ ಬಂದದ್ದಾದರು ಹೇಗೆ ಎಂದು ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದರು.