ಹೆಚ್.ಕೆ. ಜಗದೀಶ್

ಗೋಣಿಕೊಪ್ಪಲು.ಆ.೨೬: ನಾಡಹಬ್ಬ ದಸರಾ ಸಮೀಪಿಸುತ್ತಿದೆ. ಸಂಭ್ರಮ ಮನೆ ಮಾಡುತ್ತಿದೆ. ಜಿಲ್ಲೆಯ ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಗೋಣಿಕೊಪ್ಪಕ್ಕೆ ಈಗಾಗಲೇ ಹಿಂದೆAದೂ ದೊರೆಯದ ಅನುದಾನವೂ ಸರಕಾರದಿಂದ ಲಭ್ಯವಾಗಿದ್ದು, ‘ಜನೋತ್ಸವ’ ಎಂದು ಕರೆಸಿಕೊಳ್ಳುವ ಗೋಣಿಕೊಪ್ಪ ದಸರಾವನ್ನು ವೈಭವಯುತವಾಗಿ ಹಾಗೂ ಹೊಸತನದೊಂದಿಗೆ ಆಚರಿಸುವ ಇಂಗಿತವನ್ನು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್. ಪ್ರಕಾಶ್ ವ್ಯಕ್ತಪಡಿಸಿದ್ದಾರೆ.

ಮಡಿಕೇರಿ ದಸರಾಕ್ಕೆ ಪೈಪೋಟಿ ನೀಡುವಂತೆ ಗೋಣಿಕೊಪ್ಪದಲ್ಲಿಯೂ ಆಚರಣೆ ಮಾಡಲಾಗುತ್ತದೆ. ದಕ್ಷಿಣ ಕೊಡಗಿನ ಜನರು ದಸರಾಕ್ಕೆ ಹರಿದು ಬರುತ್ತಾರೆ. ದಶಮಂಟಪ, ಸ್ತಬ್ಧಚಿತ್ರ, ನವರಾತ್ರಿಯೂ ಸಾಂಸ್ಕೃತಿಕ ಕಲರವ, ಕವಿಗೋಷ್ಠಿ, ಮಕ್ಕಳ ಹಾಗೂ ಮಹಿಳಾ ದಸರಾ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜನಮನ ಸೆಳೆಯುತ್ತವೆ. ಇಡೀ ಪಟ್ಟಣ ದಸರಾದ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಪ್ರಾಕೃತಿಕ ವಿಕೋಪ ಹಾಗೂ ಕೊರೊನಾ ಪರಿಸ್ಥಿತಿಯಿಂದ ಕಳೆಗುಂದಿದ್ದ ದಸರಾ ಜನೋತ್ಸವಕ್ಕೆ ಈ ಬಾರಿ ರಂಗು ದೊರೆತಿದೆ. ರೂ. ೫೦ ಲಕ್ಷ ಅನುದಾನದಲ್ಲಿ ೪೪ನೇ ವರ್ಷದ ದಸರಾ ಕಾರ್ಯಕ್ರಮಕ್ಕೆ ದಸರಾ ಸಮಿತಿ ಉತ್ಸಾಹದೊಂದಿಗೆ ಸಿದ್ಧಗೊಳ್ಳುತ್ತಿದೆ.

ಯೋಜನೆ ತಯಾರಿ

ಕಳೆದ ನಾಲ್ಕು ವರ್ಷಗಳಿಂದ ಅದ್ಧೂರಿ ದಸರಾ ಉತ್ಸವ ಇಲ್ಲದೆ ಈ ಭಾಗದ ಜನರಿಗೆ ಯಾವುದೇ ರೀತಿಯ

(ಮೊದಲ ಪುಟದಿಂದ) ಮನರಂಜನೆ ಕಾರ್ಯಕ್ರಮಗಳು ಪಟ್ಟಣದಲ್ಲಿ ನಡೆದಿಲ್ಲ. ಈ ಬಾರಿ ಹೊಸತನದೊಂದಿಗೆ ದಸರಾ ಉತ್ಸವ ನಡೆಸಲು ಯೋಜನೆ ನಡೆಯುತ್ತಿದೆ. ಈಗಾಗಲೇ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಕಾವೇರಿ ದಸರಾ ಸಮಿತಿಯ ನಿಯೋಗವನ್ನು ಮುಖ್ಯಮಂತ್ರಿ ಬಳಿಗೆ ಕರೆದೊಯ್ದು ರೂ. ೫೦ ಲಕ್ಷ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಈ ಬಾರಿಯ ಗೋಣಿಕೊಪ್ಪ ದಸರಾವು ಅತ್ಯಂತ ಯಶಸ್ವಿಯಾಗಿ ನಡೆಯಲಿದೆ ಎಂದು ಅಧ್ಯಕ್ಷ ಬಿ.ಎನ್.ಪ್ರಕಾಶ್ ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಸಭೆಗಳ ಮೂಲಕ ಎಲ್ಲರ ಸಲಹೆ ಪಡೆಯಲಾಗುವುದು. ಆಚರಣೆಯ ಯಶಸ್ವಿಗೆ ಶ್ರಮಿಸಲಾಗುವುದು. ಪ್ರತಿಯೊಬ್ಬರ ಸಹಕಾರವೂ ಕೂಡ ಮುಖ್ಯ ಎಂದು ಹೇಳಿದ್ದಾರೆ.

ಹೇಗಿರುತ್ತೆ ಗೋಣಿಕೊಪ್ಪ ದಸರಾ?

ಸಾಂಸ್ಕೃತಿಕ ಹಾಗೂ ಧಾರ್ಮಿಕ ಭಾವನೆಗಳು ಮೂಡಲಿ ಎಂದು ಗೋಣಿಕೊಪ್ಪದ ಹಿರಿಯರು ೪೪ ವರ್ಷಗಳ ಹಿಂದೆ ದಸರಾ ಆಚರಣೆಗೆ ಮುಂದಾದರು. ಪೂಜೆ, ಹೋಮ, ಹವನ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದ್ದ ಆಚರಣೆ ಕಾಲಕ್ರಮೇಣ ಸ್ವರೂಪ ಬದಲಿಸಿಕೊಂಡು ಜನೋತ್ಸವವಾಗಿ ಮಾರ್ಪಟ್ಟಿತ್ತು. ಜನರ ಆರ್ಥಿಕ ನೆರವಿನೊಂದಿಗೆ ನಡೆಯುತ್ತಿದ್ದ ಉತ್ಸವಕ್ಕೆ ಆನಂತರ ಸರಕಾರದ ಅನುದಾನವೂ ಲಭ್ಯವಾಗುತ್ತಿದೆ.

ಮೈಸೂರಿನಿಂದ ತಂದ ಮರದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಮೂಲಕ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ. ಬಳಿಕ ೯ ದಿನಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸುತ್ತವೆ. ವಿಜಯ ದಶಮಿಯಂದು ಮಧ್ಯಾಹ್ನದ ವೇಳೆ ನಾಡ ಹಬ್ಬ ದಸರಾ ಸಮಿತಿ ವತಿಯಿಂದ ಆಯೋಜನೆಗೊಳ್ಳುವ ಸ್ತಬ್ಧ ಚಿತ್ರ ಮೆರವಣಿಗೆಗೆ ಸಾವಿರಾರು ಸಂಖ್ಯೆಯಲ್ಲಿ ಜನಸಾಗರ ನಗರದಲ್ಲಿ ಬಂದು ಸೇರುತ್ತದೆ. ಸಂಜೆ ಆಗುತ್ತಿದ್ದಂತೆಯೆ ದಶಮಂಟಪಗಳು ವಿವಿಧ ಭಾಗದಿಂದ ತೆರಳಿ ಉಮಾಮಹೇಶ್ವರಿ ದೇವಾಲಯದಿಂದ ರಾಜಬೀದಿಯಲ್ಲಿ ಅತ್ಯುತ್ತಮ ದೀಪಾಲಂಕೃತದೊAದಿಗೆ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತವೆ. ದಶಮಂಟಪಗಳನ್ನು ವೀಕ್ಷಿಸಲು ಜನರು ನಗರದಲ್ಲಿ ಕಿಕ್ಕಿರಿದು ಸೇರುತ್ತಾರೆ. ಶಾಲಾ ಮೈದಾನದಲ್ಲಿ ಸಾವಿರಾರು ಮಂದಿ ಕುಳಿತುಕೊಂಡು ಹತ್ತು ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸವಿಯುತ್ತಿದ್ದರು. ಕಾವೇರಿ ದಸರಾ ಸಮಿತಿ ವತಿಯಿಂದ ಗೋಣಿಕೊಪ್ಪಲುವಿನ ಶಾಲಾ ಮೈದಾನದಲ್ಲಿ ಬೃಹತ್ ಪ್ರಮಾಣದ ವೇದಿಕೆ ನಿರ್ಮಿಸಿ ಪ್ರತಿ ದಿನ ಸ್ಥಳೀಯ ಕಾರ್ಯಕ್ರಮ ಸೇರಿದಂತೆ ರಾಜ್ಯ ಹಾಗೂ ರಾಷ್ಟç ಮಟ್ಟದ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ನೀಡಲಾಗುತ್ತಿತ್ತು. ಕಾರ್ಯಕ್ರಮ ವೀಕ್ಷಣೆಗೆ ಜನಸಾಗರ ಮೈದಾನದತ್ತ ಹರಿದು ಬರುತ್ತಿತ್ತು.

ದಶಮಂಟಪ ವೈಭವ

ದಸರಾಕ್ಕೆ ರಾಜಕಳೆ ತರುವ ದಶಮಂಟಪ ಉತ್ಸವದ ಪ್ರಮುಖ ಅಕರ್ಷಣೆಯಾಗಿದೆ. ಕಾವೇರಿ ದಸರಾ ಸಮಿತಿಯ ಮಂಟಪದೊAದಿಗೆ ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ, ಯುವ ದಸರಾ ಸಮಿತಿ, ನವಚೇತನಾ, ಕಾಡ್ಲಯ್ಯಪ್ಪ, ಭಗವತಿ, ನಾಡಹಬ್ಬ, ರ‍್ವತೋಕ್ಲು ಶಾರದಾಂಭ ದಸರಾ ಸಮಿತಿ ಮಂಟಪಗಳು ಮುಖ್ಯಬೀದಿಯಲ್ಲಿ ಮುನ್ನಡೆಯುತ್ತವೆ. ಇದರೊಂದಿಗೆ ವಿವಿಧ ಕಲಾ ತಂಡಗಳ ಮೆರುಗು ಇರಲಿವೆ. ಪ್ರತಿ ಮಂಟಪದಲ್ಲಿಯೂ ಡಿಜೆ ಅಬ್ಬರ ಹಬ್ಬಕ್ಕೆ ಮತ್ತಷ್ಟು ರಂಗು ತರುತ್ತದೆ.

ಇತಿಹಾಸ ಪ್ರಸಿದ್ಧ ದಸರಾವನ್ನು ಮೈಸೂರು ಸ್ವಾಗತಿಸಿದರೆ ಗೋಣಿಕೊಪ್ಪಲು ಮುಂಜಾನೆ ವೇಳೆ ಬೀಳ್ಕೊಡುತ್ತದೆ ಎಂಬ ಜನರ ಪ್ರತೀತಿ ಇದೆ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂ ಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ ಗೋಣಿಕೊಪ್ಪ ದಸರಾವು ಮಧ್ಯಾಹ್ನದ ವೇಳೆ ಸ್ತಬ್ಧ ಚಿತ್ರ ಮೆರವಣಿಗೆಯ ಮೂಲಕ ಜನರನ್ನು ಆಕರ್ಷಿಸುತ್ತದೆ. ರಾತ್ರಿ ವೇಳೆ ದಶಮಂಟಪಗಳ ಮೆರವಣಿಗೆಯು ನಾಗರಿಕರನ್ನು ದೇವಲೋಕಕ್ಕೆ ಕರೆದೊಯ್ಯುವ ಮಟ್ಟಿಗೆ ಮಂಟಪಗಳು ಇರುತ್ತವೆ.

ನಗರದಲ್ಲಿರುವ ದಶಮಂಟಪಗಳಿಗೆ ಕಾವೇರಿ ದಸರಾ ಸಮಿತಿಯು ಅನುದಾನವನ್ನು ನೀಡುವ ಮೂಲಕ ದಶಮಂಟಪಗಳ ಯಶಸ್ವಿಗೆ ಸಹಕರಿಸುತ್ತ ಬಂದಿದೆ. ಈ ಬಾರಿಯೂ ಮಂಟಪಗಳು ಉತ್ತಮ ಅನುದಾನದ ನಿರೀಕ್ಷೆಯಲ್ಲಿವೆ.

ಸಹಜವಾಗಿಯೇ ಕಳೆದ ನಾಲ್ಕು ವರ್ಷಗಳಿಂದ ಕಳೆಗುಂದಿದ್ದ ಗೋಣಿಕೊಪ್ಪ ದಸರಾವು ಈ ಬಾರಿ ಅತಿ ವಿಜೃಂಭಣೆಯಿAದ ಅದ್ಧೂರಿಯಾಗಿ ನಡೆಯಲಿದೆ. ಗೋಣಿಕೊಪ್ಪ ದಸರಾವು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗದೆ ೯ ದಿನಗಳ ಕಾಲ ಕ್ರೀಡಾಕೂಟ, ಕವಿಗೋಷ್ಠಿ, ಮಹಿಳಾ ದಸರಾ, ಸೇರಿದಂತೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತ ಗಮನ ಸೆಳೆದಿದೆ.