ಮಡಿಕೇರಿ, ಆ. ೨೬: ಕೋವಿ ಹಕ್ಕು ಕುರಿತಾದ ವಿಚಾರ ನಿನ್ನೆ ಸುಪ್ರೀಂಕೋರ್ಟ್ನ ರಿಜಿಸ್ಟಾçರ್ ಎದುರು ಪರಿಶೀಲನೆಗೆ ಬಂದ ಸಂದರ್ಭ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಮೂಲಕವೂ ಅಗತ್ಯ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ಸಂಘಟನೆ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ತಿಳಿಸಿದ್ದಾರೆ.

ಸಂಘಟನೆ ಪರವಾಗಿ ವಕೀಲ ವಿಕ್ರಂ ಹೆಗ್ಡೆ ಅವರು ನಿನ್ನೆ ಅಗತ್ಯ ದಾಖಲಾತಿಗಳನ್ನು ಒದಗಿಸಿದ್ದಾರೆ. ಈ ಹಿಂದೆ ಕೋವಿ ಹಕ್ಕು ಪ್ರಶ್ನಿಸಿದ ಸಂದರ್ಭ ಸಿಎನ್‌ಸಿ ಫೆಬ್ರವರಿ ೫ ರಂದು ಕೇವಿಯಟ್ ಸಲ್ಲಿಸಿತ್ತು. ಮಾರ್ಚ್ ೨೯ ರಂದು ಈ ಬಗ್ಗೆ ಪ್ರತಿವಾದಿಗಳಿಗೆ ನೋಟೀಸ್ ಜಾರಿ ಮಾಡಿದ ಸಂದರ್ಭದಲ್ಲೂ ತಮ್ಮ ವಕೀಲರು ಹಾಜರಾಗಿದ್ದರು ಎಂದು ನಾಚಪ್ಪ ತಿಳಿಸಿದ್ದಾರೆ.