ಮಡಿಕೇರಿ, ಆ. ೨೬: ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಂಸ ಸೇವಿಸಿ ಕೊಡ್ಲಿಪೇಟೆಯ ಶ್ರೀ ಬಸವೇಶ್ವರ ದೇವಾಲಯಕ್ಕೆ ಪ್ರವೇಶಿಸಿದ್ದಾರೆ ಎಂಬ ಆರೋಪ ವ್ಯಕ್ತಗೊಂಡಿರುವ ಹಿನ್ನೆಲೆಯಲ್ಲಿ ದೇವಾಲಯವನ್ನು ಶುದ್ಧಗೊಳಸಲು ತೀರ್ಮಾನಿಸಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವರಪ್ರಸಾದ್ ತಿಳಿಸಿದ್ದಾರೆ.

ಬಸವೇಶ್ವರ ದೇವಾಲಯಕ್ಕೆ ತನ್ನದೇ ಆದ ಇತಿಹಾಸವಿದ್ದು, ಇಲ್ಲಿಗೆ ಯಾರೂ ಕೂಡ ಮಾಂಸ ಸೇವಿಸಿ ಬರುವುದಿಲ್ಲ. ಹೀಗಿರುವಾಗ ಸಿದ್ದರಾಮಯ್ಯ ಅವರು ಮಾಂಸ ಸೇವಿಸಿ ದೇವಾಲಯಕ್ಕೆ ಬಂದಿದ್ದಾರೆ ಎಂಬ ಆರೋಪ ಎಲ್ಲೆಡೆ ಹರಿದಾಡುತ್ತಿದ್ದು, ಈ ಬಗ್ಗೆ ನಾವು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ತಪ್ಪು ಮಡಿದರೆ ದೇವರು ನೋಡಿಕೊಳ್ಳುತ್ತಾರೆ. ಆದರೆ ಇದೀಗ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ದೇವಾಲಯವನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ವರಪ್ರಸಾಸ್ ಮಾಹಿತಿ ನೀಡಿದ್ದಾರೆ.

ಕೊಡಗಿಗೆ ಬಂದ ದಿನ ಮಾಂಸ ಸೇವನೆ ಮಾಡಲಿಲ್ಲ. ನಾನು ಹಾಗೂ ಸಿದ್ದರಾಮಯ್ಯ ಅವರು ಸಸ್ಯಹಾರಿ ಊಟ ಮಾಡಿದ್ದೇವು ಎಂದು ಕೆಪಿಸಿಸಿ ವಕ್ತಾರರಾದ ಹೆಚ್.ಎಸ್. ಚಂದ್ರಮೌಳಿ ಹೇಳಿದ್ದಾರೆ.

ಯಾರೇ ಭಕ್ತಿಯಿಂದ ದೇವಾಲಯಕ್ಕೆ ಬಂದರೂ ಅವರಿಗೆ ತೀರ್ಥ ಪ್ರಸಾದ ನೀಡಿ ಅವರ ಹೆಸರಿನಲ್ಲಿ ಪೂಜೆ ಸಲ್ಲಿಸಿ ಕಳುಹಿಸುತ್ತೇನೆೆ. ಅದರೆಂತೆ ಸಿದ್ದರಾಮಯ್ಯ ಅವರು ಕೊಡ್ಲಿಪೇಟೆ ಬಸವೇಶ್ವರ ದೇವಾಲಯಕ್ಕೆ ಬಂದ ಸಂದರ್ಭವೂ ಪೂಜೆ ಸಲ್ಲಿಸಿ ತೀರ್ಥ ಪ್ರಸಾದವನ್ನು ನೀಡಿದ್ದೇನೆ. ಭಕ್ತಿಯಿಂದಲೆ ಅವರು ಅದನ್ನು ಸ್ವೀಕರಿಸಿದರು ಎಂದು ದೇವಾಲಯ ಅರ್ಚಕ ಮೃತ್ಯುಂಜಯ ತಳಿಸಿದ್ದಾರೆ. ಯಾವುದೇ ವ್ಯಕ್ತಿ ಮಾಂಸ ತಿನ್ನುವುದು ಅವರವರ ಆಹಾರ ಪದ್ಧತಿಯಾಗಿ ರುತ್ತದೆ. ಆದರೆ ದೇವಾಲಯಕ್ಕೆ ಅದರಲ್ಲೂ ಬಸವೇಶ್ವರ ದೇವಾಲಯ ಗಳಿಗೆ ಯಾರೂ ಸಹ ಮಾಂಸ ತಿಂದು ಹೋಗುವುದಿಲ್ಲ. ಹಿಂದೂ ಸಂಪ್ರದಾಯದAತೆ ದೇವಾಲಯಗಳ ಪಾವಿತ್ರö್ಯತೆಯನ್ನು ಕಾಪಾಡಬೇಕಾಗಿ ರುವುದು ಎಲ್ಲರ ಜವಾಬ್ದಾರಿ ಯಾಗಿತ್ತದೆ. ಕೊಡ್ಲಿಪೇಟೆ ಬಸವೇಶ್ವರ ದೇವಾಲಯಕ್ಕೆ ಮಾಂಸ ಆಹಾರ ತಿಂದು ಪೂಜೆ ಸಲ್ಲಿಸಿದ್ದರೆ ದೇವಾಲ ಯದ ಪಾವಿತ್ರö್ಯತೆ ಹಾಳಾದಂತೆ ಆದರೆ ಸಿದ್ದರಾಮಯ್ಯ ಅವರು ಮಾಂಸ ಆಹಾರ ತಿಂದು ತೆರಳಿಲ್ಲ ಎಂದಿದ್ದಾರೆ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಪ್ರಕ್ರಿಯಿಸಿದ್ದಾರೆ.