ಮಡಿಕೇರಿ, ಆ. ೨೬: ಹಲವು ವರ್ಷಗಳಿಂದ ಕೊಡಗು ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯ ಬೇಕೆನ್ನುವ ಕನಸು ಇದೀಗ ನನಸಾಗಿದೆ. ರಾಜ್ಯ ಸರ್ಕಾರವು ನಿನ್ನೆ ದಿನ ಇದಕ್ಕೆ ಅಂತಿಮ ಅಂಗೀಕಾರ ನೀಡಿದೆ. ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೊಡಗು ಜ್ಞಾನ ಕಾವೇರಿ ವಿಶ್ವ ವಿದ್ಯಾಲಯಕ್ಕೆ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ದೊರಕಿರುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಮಾಹಿತಿಯಿತ್ತಿದ್ದಾರೆ.
ಈ ಹಿಂದೆ ಬಜೆಟ್‌ನಲ್ಲಿ ಯೋಜನೆಯು ಘೋಷಿಸಲ್ಪಟ್ಟಿತ್ತು. ರಾಜ್ಯದ ಎಂಟು ಜಿಲ್ಲೆಗಳಲ್ಲಿ ನೂತನ ವಿಶ್ವವಿದ್ಯಾಲಯ ಸ್ಥಾಪನೆಯ ಪ್ರಸ್ತಾಪವಿದ್ದುದು ಇದೀಗ ಅಧಿಕೃತವಾಗಿ ಘೋಷಿಸಲ್ಪಟ್ಟಿದೆ. ಇದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್‌ನಾರಾಯಣ್ ಇವರುಗಳಿಗೆ ಕೊಡಗಿನ ಜನತೆಯ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ಈ ಯೋಜನೆಗೆ ಸತತ ಪ್ರಯತ್ನ ನಡೆಸಿದ್ದ ಶಾಸಕ ರಂಜನ್ ತಿಳಿಸಿದ್ದಾರೆ.
ಪ್ರಾರಂಭಿಕವಾಗಿ ರೂ. ೧೦ ಕೋಟಿ ಯೋಜನೆ ಇದಾಗಿದ್ದು, ಈಗಾಗಲೇ ಕುಶಾಲನಗರ ಸನಿಹ ಚಿಕ್ಕಅಳುವಾರದಲ್ಲಿ ಅಸ್ತಿತ್ವದಲ್ಲಿರುವ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿವೇಶನದಲ್ಲಿಯೇ ಕಾರ್ಯಾರಂಭಗೊಳ್ಳಲಿದೆ. ತಾತ್ಕಾಲಿಕವಾಗಿ ಸರಕಾರವು ವಿಶೇಷ ಅಧಿಕಾರಿಯೊಬ್ಬರನ್ನು ನೇಮಿಸಲಿದೆ. ಸುಮಾರು ಎರಡು ವರ್ಷಗಳ ಕಾಲ ಪ್ರಾಯೋಗಿಕವಾಗಿ ವಿ.ವಿ. ಆಡಳಿತವು ಮಂಗಳೂರು ವಿವಿ ಸಹಯೋಗದೊಂದಿಗೆ ನಡೆಯಲಿದೆ. ಬಳಿಕ ಪ್ರತ್ಯೇಕ ಅಸ್ತಿತ್ವದೊಂದಿಗೆ ನೂತನ ಉಪಕುಲಪತಿ, ರಿಜಿಸ್ಟಾçರ್‌ಗಳ ನೇಮಕಾತಿಯೊಂದಿಗೆ ಕೊಡಗು ಜ್ಞಾನಕಾವೇರಿ ವಿ.ವಿ. (ಕೆಜೆಕೆಯು) ಚಾಲನೆಗೊಳ್ಳಲಿದೆ ಎಂದು ಅವರು ನುಡಿದರು.
‘ಶಕ್ತಿ’ಗೆ ತಿಳಿದು ಬಂದAತೆ ಜಿಲ್ಲೆಯಲ್ಲಿ ಚಾಲನೆಯಲ್ಲಿರುವ ೨೨ ಕಾಲೇಜುಗಳು ಹೊಸ ಕೊಡಗು ಜ್ಞಾನಕಾವೇರಿ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡುತ್ತವೆ. ಈ ಪೈಕಿ ೫ ಸರ್ಕಾರಿ ಕಾಲೇಜುಗಳಾಗಿದ್ದರೆ, ಉಳಿದ ೧೭ ಖಾಸಗಿ ಕಾಲೇಜುಗಳಾಗಿವೆ.
ಬೆಳವಣಿಗೆಯ ಹಾದಿಯಲ್ಲಿ ಸ್ನಾತಕೋತ್ತರ ಕೇಂದ್ರ
ಸಣ್ಣ ಜಿಲ್ಲೆ ಕೊಡಗಿಗೆ ಪ್ರತ್ಯೇಕ ವಿವಿ ಸ್ಥಾಪನೆಗೊಳ್ಳಲು ಅನುಮತಿ ದೊರಕಬೇಕಾದರೆ ಅದರ ಹಿನ್ನೆಲೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಸ್ನಾತಕೋತ್ತರ ಕೇಂದ್ರ ಪ್ರಮುಖ ಪಾತ್ರ ವಹಿಸಿದೆ. ಚಿಕ್ಕ ಅಳುವಾರದಲ್ಲಿ ಯಶಸ್ವಿಯಾಗಿ ಬೆಳವಣಿಗೆ ಹಾದಿಯಲ್ಲಿರುವ ಜ್ಞಾನಕಾವೇರಿ ಸ್ನಾತಕೋತ್ತರ ಕೇಂದ್ರ (ಜೆಕೆಪಿಜಿಸಿ) ಕುರಿತಾಗಿ ನಿರ್ದೇಶಕರಾದ ಡಾ. ಕೆ.ಎಸ್. ಚಂದ್ರಶೇಖರಯ್ಯ ಅವರು ವಿವರ ಮಾಹಿತಿ ನೀಡಿದರು. ಪ್ರಸ್ತುತ ಸ್ನಾತಕೋತ್ತರ ಕೇಂದ್ರದಲ್ಲಿ ೧೨ ಅಧ್ಯಯನ ವಿಭಾಗಗಳಿವೆ. ಮುಖ್ಯವಾಗಿ ಎಂಎಸ್ಸಿ, ಎಂಕಾA, ಎಂಎಸ್‌ಡಬ್ಲುö್ಯ ವಿಭಾಗಗಳಿವೆ. ಎಂಎಸ್ಸಿಯಲ್ಲಿ ಬಯೋಕೆಮಿಸ್ಟಿçÃ, ಮೈಕ್ರೊ ಬಯಾಲಜಿ, ಕೆಮಿಸ್ಟಿç, ಬಾಟನಿ ಜೊತೆಗೆ ವಿಶೇಷ ವಿಷಯವಾದ ಯೋಗವಿಜ್ಞಾನದಲ್ಲಿ ಎಂಎಸ್ಸಿ ಹಾಗೂ ಪರಿಸರ ವಿಜ್ಞಾನದಲ್ಲಿ ಎಂ.ಎಸ್ಸಿ. ಕಲಿಕೆಗೂ ಅವಕಾಶವಿದೆ. ಕನ್ನಡದಲ್ಲಿ ಎಂ.ಎ, ಇತಿಹಾಸದಲ್ಲಿ ಎಂಎ, ರಾಜ್ಯ ಶಾಸ್ತçದಲ್ಲಿ ಎಂಎ ಕಲಿಕೆಗೂ ಅವಕಾಶವಿದೆ. ಇದಲ್ಲದೆ ಬಯೊ ಕೆಮಿಸ್ಟಿç, ಮೈಕ್ರೊ ಬಯೋಸೈನ್ಸ್ ಹಾಗೂ ಯೋಗ ವಿಭಾಗದಲ್ಲಿ ಪಿಹೆಚ್‌ಡಿ ಮಾಡಲು ಅವಕಾಶವಿದೆ. ಇತ್ತೀಚೆಗಷ್ಟೆ ಮಾಧ್ಯಮ ವಿಭಾಗಕ್ಕೆ ಸಂಬAಧಿಸಿದAತೆ ಸಮೂಹ ಮಾಧ್ಯಮ ಎಂಬ ಕಲಿಕೆಗೂ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಸದ್ಯದಲ್ಲಿಯೇ ಕೊಡವ ಅಧ್ಯಯನದಲ್ಲಿಯೂ ಎಂಎ ಮಾಡಲು ಪ್ರವೇಶಾವಕಾಶ ನೀಡಲಾಗುತ್ತಿದೆ. ಪ್ರಸಕ್ತ ೪೫೦ ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಈ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡುತ್ತಿದ್ದು, ಇನ್ನೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆಯಿದೆ.