ಶನಿವಾಸಂತೆ, ಆ.೨೫ : ಸಮೀಪದ ಕೊಡ್ಲಿಪೇಟೆ ಹೋಬಳಿಯ ಅರ್ಕನಹಳ್ಳಿ ಸೇಂಟ್ ಆ್ಯನ್ಸ್ ಅಂಗ್ಲ ಮಾಧ್ಯಮ ಶಾಲೆಯ ಕ್ರೀಡಾ ಮೈದಾನದಲ್ಲಿ ವಲಂiÀಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಧ್ವಜಾರೋಹಣ ನೆರವೇರಿಸಿ ಚಾಲನೆ ನೀಡಿದ ದಾನಿ ಸಂಜಯ್ ಪೆರೇರಾ ಮಾತನಾಡಿ, ಕ್ರೀಡಾಕೂಟ ಗಳಲ್ಲಿ ಭಾಗವಹಿಸಿವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಂಡು ವಿಶಾಲ ಮನೋಭಾವ ಮೂಡುತ್ತದೆ. ಕ್ರೀಡೆಯಲ್ಲಿ ಸೋಲು - ಗೆಲುವು ಒಬ್ಬರಿಗೆ ಮೀಸಲಿಲ್ಲ ಎರಡನ್ನು ಸಮಾನವಾಗಿ ಕಾಣಬೇಕು ಎಂದರು.
ಮುಖAಡರಾದ ಪ್ರಸನ್ನ ಮತ್ತು ರವಿ ದೀಪ ಬೆಳಗಿಸಿದರು. ಹೋಬಳಿ ಮೊರಾಜಿ ದೇಸಾಯಿ ವಸತಿ ಶಾಲೆ, ಕಿರಿಕೊಡ್ಲಿಯ ಎಸ್.ಕೆ.ಎಸ್. ಶಾಲೆ ಕೊಡ್ಲಿಪೇಟೆ ಸರ್ಕಾರಿ ಪ್ರೌಢಶಾಲೆ ಹಂಡ್ಲಿ ಶಾಲೆ, ಅರ್ಕೆನಹಳ್ಳಿ ಸೇಂಟ್ ಆ್ಯನ್ಸ್ ಶಾಲೆ, ಬೆಸೂರಿನ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿಸಿ ೩ ದಿನಗಳ ಕ್ರೀಡಾಕೂಟದಲ್ಲಿ ಪಾಲ್ಗೊಂಡರು.
ಮುಖ್ಯಶಿಕ್ಷಕಿ ಸಿಸ್ಟರ್ ವಿಲ್ಮಾ, ವ್ಯವಸ್ಥಾಪಕಿ ಎಲಿಜಿಬೆತ್, ದಾನಿಗಳಾದ ಪ್ರಕಾಶ್ ಬೇಕರಿ ಚಂದ್ರಣ್ಣ, ನಿಶಿ, ಮಾನವ್, ದಿನೇಶ್, ಡಾ. ಉದಯಕುಮಾರ್, ಕೆ.ಆರ್. ಚಂದ್ರಶೇಖರ್, ಕೆ.ಪಿ. ಶಾಸ್ತಿç, ಹುಡುವೆಮನೆ ರವಿ, ಇಸ್ಮಾಯಿಲ್ ಅನ್ಸರ್, ಅಬ್ದುಲ್ ರಜಾಕ್, ಅಲ್ವಿನ್ ರೊಸಾರಿಯೊ, ಜಾನ್ ಫೌಲ್ ಹಾಜರಿದ್ದರು.