ಗೋಣಿಕೊಪ್ಪಲು, ಆ. ೨೫: ಗೋಣಿಕೊಪ್ಪ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ಬಿ.ಎನ್. ಪ್ರಕಾಶ್ ಆಯ್ಕೆಯಾದರು. ಗ್ರಾ.ಪಂ. ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

೪೫ನೇ ವರ್ಷದ ದಸರಾ ಆಚರಣೆಗೆ ಗೋಣಿಕೊಪ್ಪಲು ದಸರಾ ಇತಿಹಾಸದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರದಿಂದ ರೂ. ೫೦ ಲಕ್ಷ ಬಿಡುಗಡೆಯಾಗಿದ್ದು, ಉತ್ತಮ ನವರಾತ್ರಿ ಕಾರ್ಯಕ್ರಮ ಆಯೋಜನೆಗೆ ಪ್ರಯತ್ನ ಮಾಡಲಾಗುವುದು. ಸರ್ವರ ಸಹಕಾರ ಕೋರಿದರು.