ಪೆರಾಜೆ, ಆ. ೨೪: ಯುವಸ್ಪೂರ್ತಿ ಸಂಘ ಪುತ್ಯಪೆರಾಜೆ ಕರಂಟಡ್ಕ ಇದರ ವತಿಯಿಂದ ೧೯ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸ.ಕಿ.ಪ್ರಾ. ಪುತ್ಯ ಪೆರಾಜೆ ಶಾಲಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಪರಮೇಶ್ವರ ಪೆರಂಗಾಜೆ ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುನೀತ್ ನಿಡ್ಯಮಲೆ ಅವರು ವಹಿಸಿದ್ದರು. ಧಾರ್ಮಿಕ ಉಪನ್ಯಾಸವನ್ನು ಅರಂತೋಡು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮರ್ಕಂಜ ನೀಡಿದರು.

ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯ ಪದ್ಮಯ್ಯ ಮಾಸ್ತರ್ ಅಡ್ಕ ಉಪಸ್ಥಿತರಿದ್ದರು. ನೋಹಿತ್ ನಿಡ್ಯಮಲೆ ಸ್ವಾಗತಿಸಿದರೆ, ಯುವಾನಂದ ಪೆರಂಗಾಜೆ ವಂದಿಸಿದರು. ರಾಮಚಂದ್ರ ಪೆರುಮುಂಡ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಮೋಹನ್ ಪಡ್ಪು ಕಾರ್ಯಕ್ರಮ ನಿರೂಪಿಸಿದರು.

ಜಾರುಕಂಬ ಸ್ಪರ್ಧೆಯಲ್ಲಿ ಅಕ್ಷಿತ್ ನಾಯ್ಕ್ ನಿಡ್ಯಮಲೆ ಪ್ರಥಮ ಸ್ಥಾನ ಮತ್ತು ಸಾರ್ವಜನಿಕ ಪುರುಷರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚಿಗುರು ಯುವಕ ಮಂಡಲ ಪೆರಾಜೆ ಪ್ರಥಮ, ದ್ವಿತೀಯ ಸ್ಥಾನವನ್ನು ಮಿತ್ರ ಬಳಗ ಕಾಯರ್ತೊಡಿ ಸುಳ್ಯ ಇವರು ಪಡೆದÀÄಕೊಂಡವು.

ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನಾಗಶ್ರೀ ಫ್ರೆಂಡ್ಸ್ ಸುಳ್ಯ ಹಾಗೂ ದ್ವಿತೀಯ ಬಹುಮಾನವನ್ನು ಶ್ರೀವಿಷ್ಣು ನಿಡ್ಯಮಲೆ ತಂಡ ಪಡೆದುಕೊಂಡವು.

ಅAಗನವಾಡಿ, ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.