ಗೋಣಿಕೊಪ್ಪ ವರದಿ, ಆ. ೨೪: ವೀರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ತಾಲೂಕಿನ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರಿಗೆ ತಾ. ೨೭ ರಂದು ಗೋಣಿಕೊಪ್ಪ ಅನುದಾನಿತ ಪ್ರೌಢಶಾಲಾ ಮೈದಾನದಲ್ಲಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ.

ಪ್ರಾಥಮಿಕ ವಿಭಾಗದ ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ, ಶಾಟ್‌ಪುಟ್, ೧೦೦ ಮೀ ಓಟ, ಮಹಿಳೆಯರಿಗೆ ಥ್ರೋಬಾಲ್, ಪಾಸಿಂಗ್ ಬಾಲ್, ಹಗ್ಗಜಗ್ಗಾಟ, ಶಾಟ್‌ಪುಟ್, ಡಿಸ್ಕಸ್ ಥ್ರೋ, ೧೦೦ ಮೀ ಓಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಸ ಪ್ರಶ್ನೆ, ಅಭಿನಯ ಗೀತೆ, ಭಾವಗೀತೆ, ನೆನಪಿನ ಶಕ್ತಿ ಆಟ ನಡೆಯಲಿದೆ.

ಪ್ರೌಢ ವಿಭಾಗ ಪುರುಷರಿಗೆ ವಾಲಿಬಾಲ್, ಬಾಂಬ್ ಇನ್ ದ ಸಿಟಿ, ಮಹಿಳೆಯರಿಗೆ ಥ್ರೋಬಾಲ್, ವಿಷದ ಚೆಂಡು, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಆಶೂಭಾಷಣ, ಜಾನಪದ ಗೀತೆ, ಭಾವಗೀತೆ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ ೧೦ ಗಂಟೆಯಿAದ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ವೀರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಕಟಣೆ ತಿಳಿಸಿದೆ.