ಮಡಿಕೇರಿ, ಆ. ೨೫: ರಾಜ್ಯ ಕ್ರಿಕೆಟ್‌ನಲ್ಲಿ ಪ್ರಮುಖ ಪಂದ್ಯಾವಳಿಯಾಗಿ ನಡೆಯುತ್ತಿರುವ ಮಹಾರಾಜ ಕಪ್ ಕೆಎಸ್‌ಸಿಎ ಟಿ೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗಿನ ೮ ಆಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಫ್ರಾಂಚೈಸಿಗಳಾದ ಶಿವಮೊಗ್ಗ ಪರ ಕೆ.ಸಿ. ಕಾರ್ಯಪ್ಪ, ದಿಲನ್ ದೇವಯ್ಯ, ಉತ್ತಮ್ ಅಯ್ಯಪ್ಪ, ಗುಲ್ಬರ್ಗ ಪರ ಸಿ.ಎ. ಕಾರ್ತಿಕ್, ವಿದ್ವತ್ ಕಾವೇರಪ್ಪ , ಮಂಗಳೂರು ಪರ ಆದಿತ್ಯ ಸೋಮಣ್ಣ, ಮೈಸೂರ್ ಪರ ಲೋಚನ್ ಅಪ್ಪಣ್ಣ ಹಾಗೂ ಬೆಂಗಳೂರು ತಂಡದಲ್ಲಿ ರಿಷಿ ಬೋಪಣ್ಣ ಕೊಡಗಿನ ಆಟಗಾರರಾಗಿದ್ದಾರೆ. ಈ ಪಂದ್ಯಾವಳಿ ಇದೀಗ ನಿರ್ಣಾಯಕ ಹಂತದತ್ತ ತಲುಪಿದೆ.