ನಾಪೋಕ್ಲು, ಆ. ೨೫: ನ್ಯಾಷನಲ್ ಅಸೋಸಿಯೇಶನ್ ಆಫ್ ಇಂಡಿಯಾ(ರಿ) ವತಿಯಿಂದ ಮೈಸೂರಿನ ಚಾಮುಂಡಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟçಮಟ್ಟದ ಮುಕ್ತ ಕರಾಟೆ ಸ್ಪರ್ಧೆಯ ಬ್ಲಾಕ್ಬೆಲ್ಟ್ ಕುಮಿಟಿ ವಿಭಾಗದಲ್ಲಿ ಮೂರ್ನಾಡು ಪ್ರೌಢಶಾಲೆಯ ೯ನೇ ತರಗತಿ ವಿದ್ಯಾರ್ಥಿ ಚೆಟ್ಟಿಯಾರಂಡ ಧೀರಜ್ ಕಾರ್ಯಪ್ಪ ಪ್ರಶಸ್ತಿ ಗಳಿಸಿದ್ದಾರೆ.
ಇವರು ನ್ಯಾಷನಲ್ ರೆಫ್ರೀ ಸೆನ್ಸಾಯಿ ನಾಗೇಂದ್ರಪ್ಪ ಅವರ ಶಿಷ್ಯರಾಗಿದ್ದು, ನೆಲಜಿ ಗ್ರಾಮದ ಚೆಟ್ಟಿಯಾರಂಡ ಮನು ಮತ್ತು ಪವಿತಾ ದಂಪತಿಗಳ ಪುತ್ರರಾಗಿದ್ದಾರೆ.