ಮಡಿಕೇರಿ, ಆ. ೨೫: ಕೊಡಗು ಜಿಲ್ಲಾ ಪೊಲೀಸ್ ಅರಣ್ಯ ಸಿಐಡಿ ಘಟಕದ ವರಿಷ್ಠಾಧಿಕಾರಿಯಾಗಿ ಜಿಲ್ಲೆಯವರೇ ಆದ ಕುಕ್ಕೇಟಿ ವಿಶ್ವನಾಥ್ ಅವರು ನೇಮಕಗೊಂಡಿದ್ದಾರೆ. ಲೋಕಾಯುಕ್ತ ಎಸ್‌ಪಿ ಆಗಿದ್ದ ಕೆ.ಬಿ. ವಿಶ್ವನಾಥ್ ಅವರನ್ನು ಇದೀಗ ಅರಣ್ಯ ಸಿಐಡಿ ಘಟಕದ ಎಸ್‌ಪಿಯಾಗಿ ನೇಮಕಗೊಳಿಸಲಾಗಿದೆ.

೧೯೯೪ರಲ್ಲಿ ಉಪನಿರೀಕ್ಷಕರಾಗಿ ಆಯ್ಕೆಯಾದ ವಿಶ್ವನಾಥ್ ಕೆಪಿಎ ಮೈಸೂರಿನಲ್ಲಿ ತರಬೇತಿ ಮುಗಿಸಿ ಉಡುಪಿ ಜಿಲ್ಲೆಯಲ್ಲಿ ಪ್ರೊಬೆಷನರಿ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ದಕ್ಷಿಣ ಕನ್ನಡ ಜಿಲ್ಲಾ ಠಾಣಾಧಿಕಾರಿಯಾಗಿ ನೇಮಕಗೊಂಡರು. ನಂತರ ರಾಜ್ಯ ಗುಪ್ತಚರ ಇಲಾಖೆಯ ವೃತ್ತ ನಿರೀಕ್ಷಕರಾಗಿ ಬಡ್ತಿ ಹೊಂದಿದರು. ಆ ಬಳಿಕ ತುಮಕೂರು,

(ಮೊದಲ ಪುಟದಿಂದ) ಬೆಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸಿ ಮಂಡ್ಯ ಸಿಐಡಿ ವಿಭಾಗದ ಡಿಎಸ್‌ಪಿ ಆಗಿ ಬಡ್ತಿ ಹೊಂದಿದರು. ನಂತರ ರಾಜ್ಯ ಗುಪ್ತ ವಾರ್ತೆಯ ಎಸ್‌ಪಿಯಾಗಿ ಬಡ್ತಿ ಹೊಂದಿ ಬಳಿಕ ಲೋಕಾಯುಕ್ತ ಎಸ್ಪಿಯಾಗಿ ನೇಮಕಗೊಂಡರು.

ಇದೀಗ ಪೊಲೀಸ್ ಅರಣ್ಯ ಸಿಐಡಿ ಘಟಕದ ಎಸ್‌ಪಿಯಾಗಿ ನೇಮಕಗೊಂಡಿದ್ದಾರೆ. ಕೊಡಗು, ದ.ಕ.. ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ ಒಟ್ಟು ಒಂಭತ್ತು ಜಿಲ್ಲೆಗಳು ಇವರ ಸುಪರ್ದಿಯಲ್ಲಿ ಬರುತ್ತವೆ. ಮೂಲತಃ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಾಣಾವರ ಗ್ರಾಮದ ದಿ. ಕುಕ್ಕೇಟಿ ಬೋಜಪ್ಪ ಹಾಗೂ ಚಿಣ್ಣಮ್ಮ ಅವರುಗಳ ಪುತ್ರರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ? ಸಂತೋಷ್