ಮದೆನಾಡು, ಆ. ೨೫: ನಡುರಾತ್ರಿಯಲ್ಲಿ ಮನೆಯವರೆಲ್ಲರೂ ಗಾಢ ನಿದ್ರೆಯಲ್ಲಿದ್ದ ಸಂದರ್ಭ ಇದ್ದಕ್ಕಿದ್ದ ಹಾಗೆ ಮನೆಯ ಗೋಡೆ ಕುಸಿದ ಶಬ್ಧ.., ಶಬ್ಧ ಕೇಳಿ ಹೊರಬಂದ ಮನೆಯವರಿಗೆ ಅಂಗಳದಲ್ಲಿ ಎದುರಾಗಿದ್ದು ಎರಡು ಕಾಡಾನೆಗಳು.., ಒಡನೇ ಹಿಂತಿರುಗಿ ಮನೆ ಸೇರಿ ಬಾಗಿಲು ಹಾಕಿಕೊಂಡಿದ್ದರಿAದ ಮನೆಯವರು ಬಚಾವ್..!
ಈ ಘಟನೆ ಸಂಭವಿಸಿದ್ದು ಮದೆ ಗ್ರಾ.ಪಂ.
(ಮೊದಲ ಪುಟದಿಂದ) ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದಲ್ಲಿ.., ಬೆಟ್ಟತ್ತೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಸುಮಾರು ೧೨ ರಿಂದ ೧ ಗಂಟೆ ಸಮಯದಲ್ಲಿ ಎರಡು ಆನೆಗಳು ಅಲ್ಲಿಯ ನಿವಾಸಿ ಚೆರಿಯಮನೆ ಬೆಳ್ಯಪ್ಪ ಎಂಬವರ ಮನೆಯ ಮೇಲೆ ದಾಳಿ ನಡೆಸಿದೆ. ಏಕಾಏಕಿ ಗೋಡೆ ಬೀಳುವ ಶಬ್ಧ ಕೇಳಿ ಮಾಲೀಕರು ಹೊರ ಬಂದು ನೋಡುತ್ತಿದ್ದಂತೆ ಆನೆಗಳು ಅವರ ಕಡೆಗೆ ಬರಲಾರಂಭಿಸಿದ್ದು, ಭಯಭೀತರಾದ ಬೆಳ್ಯಪ್ಪ ಹಾಗೂ ಕುಟುಂಬದವರು ಮನೆ ಸೇರಿ ಬಾಗಿಲು ಮುಚ್ಚಿಕೊಂಡಿದ್ದಾರೆ. ಆನಂತರ ಬೊಬ್ಬೆ ಹೊಡೆದು ಕಿರುಚಾಡಿದಾಗ ಆನೆಗಳು ಅಲ್ಲಿಂದ ಕಾಲ್ಕಿತ್ತು ಸನಿಹದ ತೋಟಕ್ಕೆ ನುಗ್ಗಿ ಬೆಳೆ ಹಾನಿಪಡಿಸಿ ನಂತರ ಅರಣ್ಯಕ್ಕೆ ಮರಳಿದೆ. ಇಂದು ಸ್ಥಳಕ್ಕೆ ಮದೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ನಂಜುAಡ ಸ್ವಾಮಿ, ಪಂಚಾಯಿತಿ ಸದಸ್ಯೆ ಚೆರಿಯಮನೆ ಚಂದ್ರಾವತಿ, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ. -ಇಬ್ರಾಹಿಂ ಜಿ.ಎ.