ಮಡಿಕೇರಿ, ಆ. ೨೪: ಸಿದ್ದರಾಮಯ್ಯ ಅವರ ಮೇಲೆ ಮೊಟ್ಟೆ ಎಸೆತ ಖಂಡಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿದ್ದ ‘ಮಡಿಕೇರಿ ಚಲೋ’ ಹಾಗೂ ಕಾಂಗ್ರೆಸ್ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ ಎಂದು ದೂರಿ ಬಿಜೆಪಿ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶದಿಂದ ಜಿಲ್ಲೆಯಲ್ಲಿ ಅಹಿತಕರ ಘಟನೆ ಸಂಭವಿಸಬಹುದು ಎಂಬ ಗುಪ್ತಚರ ಇಲಾಖೆಯ ವರದಿಯ ಹಿನ್ನೆಲೆ ತಾ. ೨೪ ರ ಬೆಳಿಗ್ಗೆ ೬ ರಿಂದ ತಾ. ೨೭ರ ಸಂಜೆ ೬ ಗಂಟೆಯ ತನಕ ಜಾರಿ ಮಾಡಿದ್ದ ನಿಷೇಧಾಜ್ಞೆಯಿಂದ ಜಿಲ್ಲೆಯಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.

ಜಿಲ್ಲೆಯ ಎಲ್ಲೆಡೆ ಕೆ.ಎಸ್.ಆರ್.ಪಿ. ತುಕಡಿಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಯಂತೂ ಖಾಕಿ ಪಡೆ ಸುತ್ತುವರೆದಿತ್ತು. ಶಿವಮೊಗ್ಗ, ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಸೇರಿದಂತೆ ವಿವಿಧೆಡೆ ಗಳಿಂದ ೧೫ ಕೆ.ಎಸ್.ಆರ್.ಪಿ. ತುಕಡಿ ಯನ್ನು ಜಿಲ್ಲೆಯ ವಿವಿಧೆಡೆ ನಿಯೋಜನೆ ಮಾಡಲಾಗಿದೆ. ಸ್ಥಳೀಯ ಪೊಲೀಸರ ಕಣ್ಗಾವಲು ಇದೆ.

(ಮೊದಲ ಪುಟದಿಂದ) ತಲಾ ಒಂದು ಕೆ.ಎಸ್.ಆರ್.ಪಿ. ತುಕಡಿಯಲ್ಲಿ ೨೫ ಪೊಲೀಸರಿದ್ದು ಒಟ್ಟು ೩೭೫ ಪೊಲೀಸರು, ೬೦ ಸಿವಿಲ್, ೯೦ ಡಿಎಆರ್ ಸಿಬ್ಬಂದಿಗಳು, ೧ ಡಿವೈಎಸ್‌ಪಿ, ೮ ವೃತ್ತ ನಿರೀಕ್ಷಕರು ಗಳನ್ನು, ೨೦ ಉಪನಿರೀಕ್ಷಕರುಗಳನ್ನು ನಿಯೋಜಿಸಲಾಗಿದೆ. ಇವರನ್ನು ವಿಂಗಡಿಸಿ ಜಿಲ್ಲೆಯ ವಿವಿಧೆಡೆ ಭದ್ರತಾ ಕಾರ್ಯಕ್ಕೆ ನೇಮಿಸಲಾಗುತ್ತದೆ.

ನಗರದಲ್ಲಿ ಪೊಲೀಸರು ಧ್ವನಿವರ್ಧಕದ ಮೂಲಕ ಗುಂಪುಗೂಡದAತೆ ಎಚ್ಚರಿಕೆ ನೀಡುತ್ತಿದ್ದಾರೆ. ನಿಷೇಧಾಜ್ಞೆಯಿಂದ ಯಾವುದೇ ಸಮಸ್ಯೆ ಜನಜೀವನದ ಮೇಲೆ ಉಂಟಾಗಿಲ್ಲ. ವಾಹನ ಸಂಚಾರ ಹಾಗೂ ಅಂಗಡಿ ಮಳಿಗೆಗಳು ಎಂದಿನAತೆ ತೆರೆದಿವೆ, ಸಾರಿಗೆ ಸೇವೆಗಳು ಎಂದಿನAತೆ ಇವೆ.

ಗಡಿಗಳಲ್ಲಿ ನಿಗಾ

ಕೇರಳದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲೆಂಬ ಉದ್ದೇಶದಿಂದ ಕೆಲವರು ಬರುತ್ತಾರೆ ಎಂಬ ವರದಿ ಇದ್ದ ಹಿನ್ನೆಲೆ ಅಂತರರಾಜ್ಯ ಗಡಿಗಳಾದ ಮಾಕುಟ್ಟ, ಪೆರುಂಬಾಡಿ, ಕರಿಕೆ, ಅಂತರ ಜಿಲ್ಲಾ ಗಡಿ ಭಾಗಗಳಾದ ಆನೆಚೌಕೂರು, ಕುಶಾಲನಗರ, ಸಂಪಾಜೆ, ಕೊಡಗು-ಹಾಸನ ಗಡಿ ಭಾಗದ ಚೆಕ್‌ಪೋಸ್ಟ್ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಓರ್ವ ಎಎಸ್‌ಐ ಸೇರಿ ೬ ಮಂದಿಯನ್ನು ಗಡಿಗಳಲ್ಲಿ ನೇಮಿಸಲಾಗಿದೆ. ಈ ಬಿಗಿ ಭದ್ರತೆ ಇನ್ನೂ ಮೂರು ದಿನಗಳ ಕಾಲ (ಮೊದಲ ಪುಟದಿಂದ) ತಲಾ ಒಂದು ಕೆ.ಎಸ್.ಆರ್.ಪಿ. ತುಕಡಿಯಲ್ಲಿ ೨೫ ಪೊಲೀಸರಿದ್ದು ಒಟ್ಟು ೩೭೫ ಪೊಲೀಸರು, ೬೦ ಸಿವಿಲ್, ೯೦ ಡಿಎಆರ್ ಸಿಬ್ಬಂದಿಗಳು, ೧ ಡಿವೈಎಸ್‌ಪಿ, ೮ ವೃತ್ತ ನಿರೀಕ್ಷಕರು ಗಳನ್ನು, ೨೦ ಉಪನಿರೀಕ್ಷಕರುಗಳನ್ನು ನಿಯೋಜಿಸಲಾಗಿದೆ. ಇವರನ್ನು ವಿಂಗಡಿಸಿ ಜಿಲ್ಲೆಯ ವಿವಿಧೆಡೆ ಭದ್ರತಾ ಕಾರ್ಯಕ್ಕೆ ನೇಮಿಸಲಾಗುತ್ತದೆ.

ನಗರದಲ್ಲಿ ಪೊಲೀಸರು ಧ್ವನಿವರ್ಧಕದ ಮೂಲಕ ಗುಂಪುಗೂಡದAತೆ ಎಚ್ಚರಿಕೆ ನೀಡುತ್ತಿದ್ದಾರೆ. ನಿಷೇಧಾಜ್ಞೆಯಿಂದ ಯಾವುದೇ ಸಮಸ್ಯೆ ಜನಜೀವನದ ಮೇಲೆ ಉಂಟಾಗಿಲ್ಲ. ವಾಹನ ಸಂಚಾರ ಹಾಗೂ ಅಂಗಡಿ ಮಳಿಗೆಗಳು ಎಂದಿನAತೆ ತೆರೆದಿವೆ, ಸಾರಿಗೆ ಸೇವೆಗಳು ಎಂದಿನAತೆ ಇವೆ.

ಗಡಿಗಳಲ್ಲಿ ನಿಗಾ

ಕೇರಳದಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲೆಂಬ ಉದ್ದೇಶದಿಂದ ಕೆಲವರು ಬರುತ್ತಾರೆ ಎಂಬ ವರದಿ ಇದ್ದ ಹಿನ್ನೆಲೆ ಅಂತರರಾಜ್ಯ ಗಡಿಗಳಾದ ಮಾಕುಟ್ಟ, ಪೆರುಂಬಾಡಿ, ಕರಿಕೆ, ಅಂತರ ಜಿಲ್ಲಾ ಗಡಿ ಭಾಗಗಳಾದ ಆನೆಚೌಕೂರು, ಕುಶಾಲನಗರ, ಸಂಪಾಜೆ, ಕೊಡಗು-ಹಾಸನ ಗಡಿ ಭಾಗದ ಚೆಕ್‌ಪೋಸ್ಟ್ಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಓರ್ವ ಎಎಸ್‌ಐ ಸೇರಿ ೬ ಮಂದಿಯನ್ನು ಗಡಿಗಳಲ್ಲಿ ನೇಮಿಸಲಾಗಿದೆ. ಈ ಬಿಗಿ ಭದ್ರತೆ ಇನ್ನೂ ಮೂರು ದಿನಗಳ ಕಾಲ