ಮಡಿಕೇರಿ, ಆ. ೨೪: ಕಾಫಿ ಬೆಳೆಗಾರರಿಗೆ ೧೦ಹೆಚ್‌ಪಿವರೆಗಿನ ಉಚಿತ ವಿದ್ಯುತ್ ಬಿಲ್ ಪಾವತಿಗೆ ಸಂಬAಧಿಸಿದAತೆ ಸರಕಾರ ಹೊರಡಿಸಿರುವ ಷರತ್ತುಬದ್ಧ ಸುತ್ತೋಲೆಯನ್ನು ತಿರಸ್ಕಾರ ಮಾಡುವದಾಗಿ ಹೇಳಿರುವ ಕರ್ನಾಟಕ ರೈತ ಸಂಘದ ಕೊಡಗು ಜಿಲ್ಲಾ ಘಟಕ, ಯಾವದೇ ಬೆಳೆಗಾರರು ವಿದ್ಯುತ್ ಬಿಲ್ ಪಾವತಿ ಮಾಡದಂತೆ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಬೆಳೆಗಾರರಲ್ಲಿ ಮನವಿ ಮಾಡಿಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಹೊರ ಜಿಲ್ಲೆಗಳಲ್ಲಿ ಭತ್ತ, ರಾಗಿ, ಜೋಳ ಮುಂತಾದ ಬೆಳೆಗಳನ್ನು ಬೆಳೆಯುವ ರೈತರಿಗೆ ಎಲ್‌ಟಿ ೪ಎ ಅಧಿನಿಯಮದಡಿ ನೇರವಾಗಿ ವಿದ್ಯುತ್ ಕಂಬದಿAದಲೇ ಮೀಟರ್ ರಹಿತವಾಗಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲೇ ರಫ್ತು ವಹಿವಾಟಿನಲ್ಲಿ ಅತಿ ಹೆಚ್ಚು ಲಾಭಾಂಶ ತಂದುಕೊಡುತ್ತಿರುವ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ಒದಗಿಸುವಂತೆ ರೈತ ಸಂಘದಿAದ ಹಲವಾರು ಬಾರಿ ಹೋರಾಟ ಮಾಡಿದ್ದಲ್ಲದೆ, ಬೆಂಗಳೂರು ಚಲೋ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲಾಗಿತ್ತು. ಅಧಿವೇಶನದಲ್ಲಿ ಬೇಡಿಕೆ ಈಡೇರಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದರು. ಅಧಿವೇಶನ ಕಳೆದು ಕೆಲವು ತಿಂಗಳುಗಳ ಬಳಿಕ ರೈತರ ಬೇಡಿಕೆಗೆ ಸರಕಾರ ಸ್ಪಂದಿಸಿದೆ. ಆದರೆ ಸರಕಾರ ಹೊರಡಿಸಿರುವ ಸುತ್ತೋಲೆ ಮಾತ್ರ ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಬೆಳೆಗಾರರು ಉಪಯೋಗಿಸಿದ ವಿದ್ಯುತ್ ಬಿಲ್‌ಅನ್ನು ಬೆಳೆಗಾರರೇ ಪಾವತಿಸಬೇಕಿದ್ದು, ನಂತರದಲ್ಲಿ ಬೆಳೆಗಾರರ ಖಾತೆಗೆ ಮರು ಪಾವತಿ ಮಾಡಲಾಗುವದು ಎಂದು ತಿಳಿಸಲಾಗಿದೆ. ಪ್ರಸ್ತುತ ಕೋವಿಡ್ ಲಸಿಕೆಗಾಗಿ ಹಣ ವೆಚ್ಚವಾಗಿರುವದರಿಂದ ನಂತರದಲ್ಲಿ ಬೆಳೆಗಾರರ ಖಾತೆಗೆ ಮರು ಪಾವತಿ ಮಾಡಲಾಗುವದು ಎಂದು ಕಾರಣ ನೀಡಲಾಗಿದೆ. ಇದನ್ನು ನಂಬಲು ಸಾಧ್ಯವಿಲ್ಲ, ಈಗಾಗಲೇ ಪಿಂಚಣಿ, ಸಹಾಯಧನದ ಘೋಷಣೆಗಳು ಸದ್ದಿಲ್ಲದೆ ರದ್ದಾಗಿವೆ. ಹಾಗಾಗಿ ವಿಎಸ್‌ಎಸ್‌ಎನ್‌ಗಳ ಮೂಲಕ ಸರಕಾರ ಶೂನ್ಯ ಬಡ್ಡಿ ಆಧಾರದಲ್ಲಿ ಸಾಲ ನೀಡುತ್ತಿರುವಂತೆಯೇ ಬೆಳೆಗಾರರಿಗೂ ಉಚಿತ ವಿದ್ಯುತ್ ಒದಗಿಸಬಹುದಾಗಿದೆ. ಬೆಳೆಗಾರರು ವರ್ಷದಲ್ಲಿ ಎರಡು ತಿಂಗಳುಗಳ ಕಾಲ ಮಾತ್ರ ನೀರು ಹಾಯಿಸಲು ವಿದ್ಯುತ್ ಉಪಯೋಗಿಸುತ್ತಾರೆ. ಅಂದಾಜು ೩ಕೋಟಿಯಷ್ಟು ಮಾತ್ರ ವೆಚ್ಚವಾಗಲಿದ್ದು, ಇದು ಸರಕಾರಕ್ಕೆ ದೊಡ್ಡ ಹೊರೆಯಾಗಲಾರದೆಂದು ಪ್ರತಿಪಾದಿಸಿದರು.

ಹಾಗಾಗಿ ಸರಕಾರ ಹೊರಡಿ ಸಲಾಗಿರುವ ಸುತ್ತೋಲೆಯನ್ನು ತಿರಸ್ಕಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಸಂಬAಧ ಕಾಫಿ ಬೇಳೆಯುವ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತ ಮುಖಂಡರುಗಳೊAದಿಗೆ ಮಾತುಕತೆ ನಡೆಸಲಾಗಿದೆ. ಯಾವದೇ ಬೆಳೆಗಾರರು ವಿದ್ಯುತ್ ಬಿಲ್ ಪಾವತಿ ಮಾಡಬಾರದೆಂದು ಮನವಿ ಮಾಡಿಕೊಂಡ ಮನು ಸೋಮಯ್ಯ, ಬೆಳೆಗಾರರಿಗೆ ಮೀಟರ್‌ರಹಿತ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಚೆಟ್ರುಮಾಡ ಸುಜಯ್ ಬೋಪಯ್ಯ ಇದ್ದರು.