ವೀರಾಜಪೇಟೆ, ಆ. ೨೩: ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ವತಿಯಿಂದ ಸಾರ್ವಜನಿಕರಿಗೆ ಏರ್ಪಡಿಸಿದ್ದ ಚದುರಂಗ ಸ್ಪರ್ಧೆಯಲ್ಲಿ ಬೇಟೋಳಿ ಗ್ರಾಮದ ನಿವಾಸಿಯಾಗಿರುವ ಆಯುಷ್ ಪಾಲ್ಗೊಂಡಿದ್ದರು. ಇವರು ವಿಶೇಷಚೇತನರಾಗಿದ್ದು, ಕಣ್ಣು ಕಾಣುವುದಿಲ್ಲ. ಅಂಧರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಚೆಸ್ ಬೋರ್ಡ್ ಮೂಲಕ ಆಟವಾಡಿದ ಇವರು ಎಲ್ಲರ ಗಮನ ಸೆಳೆದರು. ಇವರ ಜೊತೆಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಯಾರು ಸ್ಪರ್ಧಾಳುಗಳು ಇಲ್ಲದ ಕಾರಣ ಇವರ ಕ್ರೀಡಾ ಮನೋಭಾವವನ್ನು ಪರಿಗಣಿಸಿ ಇವರಿಗೆ ಪಂಚಾಯಿತಿ ವತಿಯಿಂದ ಪ್ರೋತ್ಸಾಹದಾಯಕ ಬಹುಮಾನ ನೀಡಲಾಯಿತು.
ಈ ವಿಚಾರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಣಿ ಜಿಲ್ಲಾ ಪಂಚಾಯಿತಿ ಸಿಇಒ ಅವರ ಗಮನಕ್ಕೆ ತಂದು ಸ್ಪರ್ಧೆಯ ಮುಂದಿನ ಹಂತದಲ್ಲಿ ಜಿಲ್ಲಾಮಟ್ಟದಲ್ಲಿ ಇವರೊಂದಿಗೆ ಸ್ಪರ್ಧೆ ಮಾಡಲು ಸ್ಪರ್ಧಾಳುಗಳು ಸಿಕ್ಕಲ್ಲಿ ಮುಂದಿನ ಹಂತದಲ್ಲಿ ತಾಲೂಕುಮಟ್ಟ ಹಾಗೂ ಜಿಲ್ಲಾಮಟ್ಟದಲ್ಲಿ ಅವಕಾಶ ಕಲ್ಪಿಸುವುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ ಎಂದರು.