ಕೂಡಿಗೆ, ಆ. ೨೩: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಸೂಚನೆಯಂತೆ ಕುಶಾಲನಗರ ತಾಲೂಕು ಮಟ್ಟದ ಕಾರ್ಯಕ್ರಮವು ತಹಶೀಲ್ದಾರ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಮೊದಲಿಗೆ ಕಣಿವೆ, ಹುಲುಸೆ ಹಕ್ಕೆ ಗ್ರಾಮಗಳಲ್ಲಿ ಕಳೆದ ೨೫ ವರ್ಷಗಳಿಂದ ವಾಸಿಸುತ್ತಿರುವ ನಿವೇಶನ ರಹಿತ ಕುಟುಂಬಸ್ಥರಿಗೆ ನಿವೇಶನವನ್ನು ನೀಡುವಂತೆ, ಮತ್ತು ಈಗಾಗಲೇ ಕಳೆದ ೫ ವರ್ಷಗಳ ಹಿಂದೆ ದಿಡ್ಡಳ್ಳಿ ನಿರಾಶ್ರಿತರಿಗೆ ಕಣಿವೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಗುರುತಿಸಲಾದ ಜಾಗದಲ್ಲಿ ಮನೆಗಳ ನಿರ್ಮಾಣ ವ್ಯವಸ್ಥೆ ಮಾಡಬೇಕೆಂದು ಮೂರು ಗ್ರಾಮಗಳ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು.

ನಂತರ ಗ್ರಾಮಸ್ಥರು ಕಣಿವೆಯ ಗ್ರಾಮವು ಶೀತಪ್ರದೇಶವಾಗಿದ್ದು, ಮೇಲ್ಭಾಗದಲ್ಲಿ ಎರಡೂ ಕಡೆ ಹಾರಂಗಿ ನಾಲೆಯ ನೀರು, ಮತ್ತೊಂದೆಡೆ ಕಾವೇರಿ ನದಿಯ ನೀರು ಈಗಾಗಿ ಗ್ರಾಮದಲ್ಲಿ ಪೈಸಾರಿ ಜಾಗವಿದರೂ ಸ್ಮಶಾನ ಕ್ಕೆ ಜಾಗವಿಲ್ಲದೆ ಪರದಾಡುವಂತಹ ಪ್ರಸಂಗ ಎದುರಾಗುತ್ತಿದೆ. ಅಲ್ಲದೆ ಈಗಾಗಲೇ ಕಾಯ್ದಿರಿಸಿಕೊಂಡಿರುವ ೧/೧ ಹತ್ತು ಎಕರೆಗಳಷ್ಟು ಜಾಗದಲ್ಲಿ ನಿವೇಶನ ರಹಿತ ಮನೆಗಳ ನಿರ್ಮಾಣದ ಹಕ್ಕುಗಳನ್ನು ಕಂದಾಯ ಇಲಾಖೆಯ ವತಿಯಿಂದ ನೀಡಬೇಕೆಂದು ಗ್ರಾಮಸ್ಥರುಗಳಾದ ಭಾರತ್ ಧ್ವಜ್, ವೆಂಕಟೇಶ, ಪ್ರಕಾಶ್ ಮಂಜುನಾಥ ಕಿರಣ್ ಲೋಕೇಶ್, ಮಹದೇವ ಸೇರಿದಂತೆ ಈ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಸದಾಶಿವ ಸೇರಿದಂತೆ ರೈತರು ಮನವಿ ಪತ್ರವನ್ನು ಸಲ್ಲಿಸಿದರು.

ಗ್ರಾಮಸ್ಥರ ಚರ್ಚೆಗಳ ನಂತರ ಪ್ರಕಾಶ್ ಅವರು ದಿಡ್ಡಳ್ಳಿ ನಿರಾಶ್ರಿತರಿಗೆ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗವನ್ನು ನೀಡಲಾಗಿದೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಮನವಿ ಮೇರೆಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪ್ರಸ್ತಾವನೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈಗಾಗಲೇ ಕಣಿವೆ ಹಕ್ಕೆ ಹುಲುಸೆ ವ್ಯಾಪ್ತಿಯಲ್ಲಿ ಪೈಸಾರಿ ಜಾಗದಲ್ಲಿರುವ ಕೆಲ ಮನೆಗಳಿಗೆ ಹಕ್ಕು ಪತ್ರವನ್ನು ನೀಡಲಾಗಿದೆ. ಬಾಕಿ ಇರುವ ಮನೆಗಳಿಗೆ ಹಕ್ಕು ಪತ್ರವನ್ನು ನೀಡುವಂತೆ ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ಒತ್ತಾಯ ಮಾಡಿದರು. ಇದಕ್ಕೆ ಪ್ರಕ್ರಿಯೆ ನೀಡಿದ ತಹಶಿಲ್ದಾರ ಪ್ರಕಾಶ್‌ನವರು ಕೆಲ ಪ್ರದೇಶದ ೭೪/೭ರಲ್ಲಿ ಗೋಮಾಳ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಳ್ಳಲಾಗಿದೆ ಇದಕ್ಕೆ ಸಂಬAಧಿಸಿದAತೆ ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಹಕ್ಕು ಪತ್ರವನ್ನು ನೀಡುವ ಭರವಸೆಯನ್ನು ನೀಡಿದರು.ಅಲ್ಲದೆ ಸ್ಮಶಾನ ಜಾಗಕ್ಕೆ ಪೈಸಾರಿ ಜಾಗವನ್ನು ಗುರುತಿಸಿ ನಂತರ ವ್ಯವಸ್ಥೆ ಮಾಡಲಾಗುವುದು ಎಂದರು.

ಸಭೆಯಲ್ಲಿ ಕಂದಾಯ ಇಲಾಖೆಯ ವತಿಯಿಂದ ಆಗಬಹುದಾದ ಅನೇಕ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಈ ಸಂದರ್ಭದಲ್ಲಿ ಸರ್ವೆ ಇಲಾಖೆಯ ಕೃಷಿ, ತೋಟಗಾರಿಕೆ, ಅಹಾರ ಇಲಾಖೆ ಅರೋಗ್ಯ, ಅರಣ್ಯ ಇಲಾಖೆ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು. ಸಭೆಯಲ್ಲಿ ಹಾಜರಿದ್ದ ಗ್ರಾಮಸ್ಥರು ತಮ್ಮ ತಮ್ಮ ಗ್ರಾಮದ ಸಮಸ್ಯೆಗಳನ್ನು ತಿಳಿಸಿ ಅನೇಕ ಮನವಿ ಪತ್ರಗಳನ್ನು ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನದ ಪತ್ರವನ್ನು ೩೦ ಮಂದಿಗೆ ನೀಡಿದರು. ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬAಧಿಸಿದ ಅನೇಕ ವಿಷಯಗಳ ಬಗ್ಗೆ ಹಾಜರಿದ್ದ ಅಧಿಕಾರಿಗಳ ಗಮನಕ್ಕೆ ಗ್ರಾಮಸ್ಥರು ತಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಎಸ್. ಮಂಜುನಾಥ ನೆರವೇರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅರುಣಕುಮಾರಿ, ಉಪತಹಶೀಲ್ದಾರ ಮಧುಸೂದನ್, ತಾಲೂಕು ಸಹಾಯಕ ನಿರ್ದೇಶಕ ರವೀಶ್, ಭೂಮಾಪನಾ ಇಲಾಖೆಯ ಮಹೇಶ್, ಅಭಿವೃದ್ಧಿ ಅಧಿಕಾರಿ ಅರುಣ್ ಬಾಸ್ಕರ್, ಕಂದಾಯ ನಿರೀಕ್ಷಕ ಸಂತೋಷ್ ಲೆಕ್ಕಾಧಿಕಾರಿ ಫೀರ್ ಮಹಮದ್ ಸೇರಿದಂತೆ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಸೇರಿದಂತೆ ಮೂರು ಗ್ರಾಮಗಳ ನೂರಾರು ಗ್ರಾಮಸ್ಥರು ಹಾಜರಿದ್ದರು.