ಸೋಮವಾರಪೇಟೆ, ಆ. ೨೩: ಇಲ್ಲಿನ ತಾಲೂಕು ಆಸ್ಪತ್ರೆ ರಕ್ಷಾ ಸಮಿತಿಯ ಲೆಕ್ಕಪತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ರಂಜನ್ ಸಂಬAಧಿಸಿದ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

ತಾಲೂಕು ಸರ್ಕಾರಿ ಆಸ್ಪತ್ರೆ ರಕ್ಷಾ ಸಮಿತಿಯ ಅಧ್ಯಕ್ಷತೆ ವಹಿಸಿದ್ದ ರಂಜನ್ ಒಂದು ವರ್ಷದ ಲೆಕ್ಕಪತ್ರ ಪರಿಶೀಲಿಸಿ ದರು. ಒಂದು ವರ್ಷದ ಅವಧಿಯಲ್ಲಿ ಕೋಟ್ಯಾಂತರ ರೂ. ಖರ್ಚಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ಖರ್ಚಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ಸಂಬAಧಿಸಿದ ಸಿಬ್ಬಂದಿಗೆ ಎಚ್ಚರಿಕೆ ನೀಡಿ, ವಾಸ್ತವಾಂಶದ ವರದಿ ನೀಡುವಂತೆ ಸೂಚಿಸಿದರು.ಮುಂದಿನ ದಿನದಲ್ಲಿ ಪ್ರತಿ ತಿಂಗಳು ಸಭೆ ನಡೆಸು ವಂತೆ ಮತ್ತು ಐವತ್ತು ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಖರ್ಚಿಗೆ ಸಭೆಯ ಅನುಮೋದನೆ ಪಡೆಯುವಂತೆ ಆಡಳಿತಾಧಿಕಾರಿಗೆ ನಿರ್ದೇಶನ ನೀಡಿದರು.

ಆಸ್ಪತ್ರೆ ಕಟ್ಟಡ ಮೇಲ್ಬಾಗ ಸೋರುತಿದ್ದು ಈಗಾಗಲೇ ಅರ್ಧ ಕಟ್ಟಡಕ್ಕೆ ಶೀಟ್ ಅಳವಡಿಸಲಾಗಿದೆ. ಉಳಿದ ಭಾಗಕ್ಕೂ ಅಳವಡಿಸುವಂತೆ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಕೋರಿಕೆಗೆ ಸ್ಪಂದಿಸಿದ ಶಾಸಕರು, ತಕ್ಷಣವೇ ಶೀಟ್ ಅಳವಡಿಸಲು ಕ್ರಮಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಹೊರ ರೋಗಿಗಳ ಚೀಟಿ ಕೊಡುವ ವಿಭಾಗದಲ್ಲಿ ಶುಶ್ರೂಷಕಿ ಯರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ರೋಗಿಗಳ ಉಪಚಾರದಲ್ಲಿ ತೊಂದರೆ ಆಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು. ಆಸ್ಪತ್ರೆ ಆವರಣದಲ್ಲಿ ಎಲ್ಲೆಂದರಲ್ಲಿ ಖಾಸಗಿ ವಾಹನ ನಿಲ್ಲಿಸಿ ಹೋಗುತ್ತಿರುವುದ ರಿಂದ ಆಂಬ್ಯುಲೆನ್ಸ್ ಸೇರಿದಂತೆ ಆಸ್ಪತ್ರೆಗೆ ಬರುವವರಿಗೆ ತೊಂದರೆ ಆಗುತ್ತಿದೆ ಎಂದು ರಕ್ಷಾ ಸಮಿತಿ ಸದಸ್ಯರು ಗಮನ ಸೆಳೆದ ಹಿನ್ನಲೆ ಇಬ್ಬರು ಡೇಟಾ ಎಂಟ್ರಿ ಆಪರೇಟರ್ ಗಳನ್ನು ತಕ್ಷಣಕ್ಕೆ ನೇಮಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಅವರಿಗೆ ಸೂಚಿಸಿದ ಶಾಸಕರು ರಕ್ಷಾ ಸಮಿತಿಯಿಂದಲೇ ಇಬ್ಬರು ವಾಚ್ ಮ್ಯಾನ್‌ಗಳನ್ನು ನೇಮಿಸಿಕೊಂಡು ಗೇಟ್ ಬಳಿಯಲ್ಲಿ ಆಸ್ಪತ್ರೆಗೆ ಬರುವ ವಾಹನಗಳಿಗೆ ಮಾತ್ರ ಅವಕಾಶ ನೀಡಿ ಅನಾವಶ್ಯಕ ವಾಹನ ನಿಲುಗಡೆಗೆ ಕಡಿವಾಣ ಹಾಕುವಂತೆ ಆದೇಶಿಸಿದರು.

ಡೆಂಟಲ್, ಕಣ್ಣು, ಕಿವಿ, ಮೂಗು ವಿಭಾಗದ ವೈದ್ಯಕೀಯ ವಿಭಾಗ ಚಿಕಿತ್ಸೆಗೆ ಬೇಕಾದ ಪರಿಕರಗಳ ಬಗ್ಗೆ ಮಾಹಿತಿ ಪಡೆದ ಶಾಸಕರು ಎಲ್ಲಾ ವಸ್ತುಗಳನ್ನು ಖರೀದಿಸಲು ಸೂಚಿದರು. ಈ ಸಂದರ್ಭ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ ಮಾತನಾಡಿ, ಈ ಬಾರಿ ತಾ.ಪಂ. ಯಿಂದ ಕುಶಾಲನಗರ ಹಾಗೂ ಸೋಮವಾರಪೇಟೆ ಆಸ್ಪತ್ರೆಗಳಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ತಲಾ ಹತ್ತು ಲಕ್ಷ ರೂ. ಒದಗಿಸಲಾಗಿದೆ. ಇದಕ್ಕೆ ತಾಲೂಕು ವೈದ್ಯಾಧಿಕಾರಿ ಪಟ್ಟಿನಿ Ãಡಿದ್ದಾರೆ ಎಂದರು. ಈ ಹಣವನ್ನು ಕಣ್ಣು,ಕಿವಿ ಹಾಗೂ ಡೆಂಟಲ್ ವಿಭಾಗಕ್ಕೆ ಬೇಕಾದ ವಸ್ತುಗಳನ್ನು ಖರೀದಿಸುವಂತೆ ಸಮಿತಿ ಸದಸ್ಯರು ತಿಳಿಸಿದ ಹಿನ್ನಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ನೀಡಿರುವ ಪಟ್ಟಿಯನ್ನು ಬದಲಾಯಿ ಸುವಂತೆ ಶಾಸಕರು ಆದೇಶಿಸಿದರು.

ಇಲ್ಲಿನ ಲಯನ್ಸ್ ಸಂಸ್ಥೆಯವರು ಸಾರ್ವಜನಿಕರಿಂದ, ಶಾಸಕರಿಂದ ದೇಣಿಗೆ ಸಂಗ್ರಹಿಸಿ ಮೃತದೇಹ ಇಡುವ ವಿದ್ಯುತ್ ಚಾಲಿತ ಪೆಟ್ಟಿಗೆಯನ್ನು ಆಸ್ಪತ್ರೆಗೆ ನೀಡಿದ್ದಾರೆ. ಆದರೆ ಅದನ್ನು ಪಡೆಯಲು ಲಯನ್ಸ್ ಸಂಸ್ಥೆಯವರನ್ನೇ ಕೇಳಬೇಕು ಮತ್ತು ಸಂಸ್ಥೆಗೆ ಆರು ಸಾವಿರ ರೂ. ಕಟ್ಟಬೇಕಾಗಿದೆ. ಇದು ಬಡ ಬಗ್ಗರಿಗೆ ಹೊರೆಯಾಗುತ್ತಿದೆ. ಅಲ್ಲದೆ ಅವರು ಆಸ್ಪತ್ರೆಗೆ ನೀಡಿದ ಮೇಲೆ ಅವರನ್ನು ಯಾಕೆ ಕೇಳಬೇಕು, ಸಾರ್ವಜನಿಕ ವಂತಿಕೆ ಪಡೆದು ಖರೀದಿಸಿದ ಮೇಲೆ ಆರು ಸಾವಿರದಷ್ಟು ದುಬಾರಿ ಬಾಡಿಗೆ ನಿಗದಿಪಡಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಬಗ್ಗೆ ಮಾಹಿತಿ ಪಡೆದ ಶಾಸಕರು ಮುಂದೆ ಮೂರು ಸಾವಿರ ರೂ. ನಿಗದಿ ಪಡಿಸಿ ರಕ್ಷಾ ಸಮಿತಿಯಿಂದ ರಶೀದಿ ನೀಡುವಂತೆ ಆಸ್ಪತ್ರೆಯ ವೈದ್ಯಾಧಿಕಾರಿಗೆ ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ್ ಗೋವಿಂದರಾಜು, ರಕ್ಷಾಸಮಿತಿಯ ಸದಸ್ಯರುಗಳಾದ ಕೆ.ಜಿ. ಸುರೇಶ್, ಪ್ರಶಾಂತ್, ಮಚ್ಚಂಡ ಪ್ರಕಾಶ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಿ.ಕೆ. ಚಂದ್ರು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ, ಅಪರಾಧ ವಿಭಾಗದ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ವಿರೂಪಾಕ್ಷ ಸೇರಿದಂತೆ ಇತರರು ಉಪಸ್ಥಿತರಿದ್ದರು.