*ಗೋಣಿಕೊಪ್ಪ, ಆ. ೨೧ :ಪೊನ್ನಂಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಇಲ್ಲಿನ ಅಪ್ಪಚ್ಚಕವಿ ವಿಶ್ವವಿದ್ಯಾನಿಲಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಕ್ಷೇತ್ರÀ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಉಪಾಧಕ್ಷೆ ಬೊಟ್ಟಂಗಡ ದಶಮಿ ಸದಾ ಚಾಲನೆ ನೀಡಿದರು.

ಅಪ್ಪಚ್ಚಕವಿ ಸಂಸ್ಥೆಯ ಅಧ್ಯಕ್ಷÀ ಮಂಡಚAಡ ದಿನೇಶ್ ಚಿಟ್ಟಿಯಪ್ಪ, ಕಾರ್ಯದರ್ಶಿ ಮೂಕಳಮಡ ಅರಸು ನಂಜಪ್ಪ. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯತ್ರಿ ಆರ್.ಬಿ., ಪ್ರಧಾನ್‌ಮಂತ್ರಿ ಪೋಷಣ್, ಶಕ್ತಿ ನಿರ್ಮಾಣ್ ಯೋಜನೆಯ ಸಹಾಯಕ ನಿರ್ದೇಶಕ ರಾಜೇಶ್, ವೀರಾಜಪೇಟೆ ತಾಲೂಕು ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷÀ ಈ. ಸುರೇಂದ್ರ, ಅಪ್ಪಚ್ಚ ಕವಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಎಸ್.ಎಸ್. ತನುಜಾ, ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲ ಎಂ.ಯು. ಚಂಗಪ್ಪ, ಮುಖ್ಯಶಿಕ್ಷಕ ಬಿ.ಎಂ. ವಿಜಯ್, ಶಿಕ್ಷಣ ಸಂಯೋಜಕÀ ಕೆ.ಆರ್. ವಿಶಾಲಾಕ್ಷಮ್ಮ, ಮಾರ್ಗರೇಟ್, ಅಯ್ಯಪ್ಪ, ಬಿ.ಐ.ಇ.ಆರ್.ಟಿ.ಗಳಾದ ಅಜಿತಾ, ವಿಠ್ಠಲ್, ಕೇಶವಮೂರ್ತಿ, ಬಿ.ಆರ್.ಪಿ.ಗಳಾದ ಕೆ.ಸಿ. ಗೀತಾಂಜಲಿ, ಟಿ.ಕೆ. ವಾಮನ, ಕೆ.ಬಿ. ಪುಷ್ಪಾ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ತಿರುನೆಲ್ಲಿಮಾಡ ಜೀವನ್, ವಿ.ಟಿ. ವೆಂಕಟೇಶ್, ಪ್ರವೀಣ್, ಕೆ.ಕೆ. ಸುಷ, ಕೆ.ಸಿ. ಕರುಂಬಯ್ಯ, ರಾಧಾ, ಎನ್.ಆರ್. ರವಿ, ಪಿ. ಮುರುಗನ್, ಸವಿತಕುಮಾರಿ, ಎನ್.ಸಿ. ಅನಿತಾಕುಮಾರಿ ಇದ್ದರು.

೮ನೇ ತರಗತಿ ಇಂದ ೧೨ನೇ ತರಗತಿವರೆಗೆ ನಡೆದ ಸ್ಪರ್ಧೆಯಲ್ಲಿ ಜಾನಪದ ನೃತ್ಯ ಸಂತ ಅಂತೋಣಿ ಪ್ರೌಢಶಾಲೆಯ ವಿದ್ಯಾರ್ಥಿ ಅನುಶ್ರೀ ತಂಡ ಪ್ರಥಮ ಬಹುಮಾನ, ಕವ್ವಾಲಿ ಸ್ಪರ್ಧೆಯಲ್ಲಿ ಅಪ್ಪಚ್ಚಕವಿ ಶಾಲೆಯ ಆದಿಲ್ ಮತ್ತು ತಂಡ ಪ್ರಥಮ ಬಹುಮಾನ, ಕ್ವಿಜ್ ಸಾಯಿಶಂಕರ್ ವಿದ್ಯಾಸಂಸ್ಥೆಯ ಮಹಿಮಾ ಮತ್ತು ಪ್ರೀತಮ್ ತಂಡ ಪ್ರಥಮ ಬಹುಮಾನ, ಚಿತ್ರಕಲೆ ಸಂತ ಅಂತೋಣಿ ಪ್ರೌಢಶಾಲೆಯ ಕೆ.ಎಸ್. ಲೇಖನ ಪ್ರಥಮ ಬಹುಮಾನ, ರಂಗೋಲಿ ನಿನಾದ ಶಾಲೆಯ ಬೃಂದಾ ಪ್ರಥಮ ಬಹುಮಾನ, ಛದ್ಮ ೆÃಷ ಕರ್ನಾಟಕ ಪಬ್ಲಿಕ್ ಪ್ರೌಢ ಶಾಲೆಯ ಕೆ.ಎ. ಆಶ್ರಿತ ಪ್ರಥಮ ಬಹುಮಾನ, ಭರತನಾಟ್ಯ ಕರ್ನಾಟಕ ಪ್ರೌಢಶಾಲೆಯ ದೃತಿ ಪ್ರಥಮ, ಆಂಗ್ಲ ಭಾಷೆ ಭಾಷಣ ಸಾಯಿಶಂಕರ್ ಪ್ರೌಢಶಾಲೆಯ ಮಹಿಮ ಪ್ರಥಮ ಬಹುಮಾನ, ಭಾವಗೀತೆ ಕೆಪಿಎಸ್ ಪ್ರೌಢಶಾಲೆಯ ಬಿ.ಎನ್. ಕೀರ್ತಿ ಪ್ರಥಮ ಬಹುಮಾನ, ಜಾನಪದ ಗೀತೆ ಅಪ್ಪಚ್ಚಕವಿ ವಿದ್ಯಾಸಂಸ್ಥೆಯ ಮೌಲ್ಯ ಮಾಚಮ್ಮ ಪ್ರಥಮ ಬಹುಮಾನ, ಹಿಂದಿ ಭಾಷಣ ಕೆಪಿಎಸ್ ಪ್ರೌಢಶಾಲೆಯ ಬಬಿತ ಕೆ.ಆರ್. ಪ್ರಥಮ ಬಹುಮಾನ, ಕನ್ನಡ ಭಾಷಣ ಸಂತ ಅಂತೋಣಿ ಪ್ರೌಢಶಾಲೆಯ ಎಚ್.ಎಂ. ಪ್ರಿಯದರ್ಶಿನಿ ಪ್ರಥಮ ಬಹುಮಾನ, ಮಿಮಿಕ್ರಿ ಕೆಪಿಎಸ್ ಪ್ರೌಢ ಶಾಲೆಯ ಪಿ.ಎನ್. ಯಶ್ವಿಕ್ ಪ್ರಥಮ ಬಹುಮಾನ, ಚರ್ಚಾ ಸ್ಪರ್ಧೆ ಸಂತ ಅಂತೋಣಿ ಪ್ರೌಢಶಾಲೆಯ ಟ್ರೀಜಾ ಮೆಂತರೋ, ಧಾರ್ಮಿಕ ಪಠಣ ಸಂತ ಅಂತೋಣಿ ಪ್ರೌಢಶಾಲೆಯ ಶಹಾಲ ಪ್ರಥಮ ಬಹುಮಾನ, ಗಝಲ್ ಅಪ್ಪಚ್ಚಕವಿ ಶಾಲೆಯ ಆದಿಲ್ ಎ.ಎಸ್. ಪ್ರಥಮ, ಆಶುಭಾಷಣ ಕೆಪಿಎಸ್ ಪ್ರೌಢಶಾಲೆಯ ಎಚ್.ಎಸ್. ಅಮೃತ ಪ್ರಥಮ ಬಹುಮಾನ ಪಡೆದುಕೊಂಡರು.