ಶನಿವಾರಸಂತೆ, ಆ. ೨೦: ದುಂಡಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ನಂಜುAಡೇಗೌಡ ಅವರ ಅಧ್ಯಕ್ಷತೆಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ, ರೈತರಿಗೆ ಸ್ಥಳದಲ್ಲೇ ಸಮಸ್ಯೆಗಳ ಪರಿಹಾರ ಸೂಚಿಸಿ, ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಬಗ್ಗೆ ಮಾಹಿತಿ ನೀಡಿದರು.
ತಾಲೂಕು ತಹಶೀಲ್ದಾರ್ ಗೋವಿಂದರಾಜ್ ಮಾತನಾಡಿ, ಪಿಂಚಣಿದಾರರಿಗೆ, ಪಿಂಚಣಿ ಆದೇಶ ಪ್ರತಿಗಳನ್ನು ವಿತರಿಸಿ ರೈತರಿಗೆ ಪಿಂಚಣಿ ತಿದ್ದುಪಡಿ ದುರಸ್ತಿ ಬಗ್ಗೆ ಮಾಹಿತಿ ನೀಡಿದರು. ದುಂಡಳ್ಳಿ, ತೋಯಳ್ಳಿ, ಹಾಲ್ಕೆನೆ ಗ್ರಾಮಗಳಿಗೆ ಸಂಬAಧಿಸಿದ ಪಹಣಿಯಲ್ಲಿನ ಲೋಪದೋಷಗಳ ತಿದ್ದುಪಡಿ, ಪೌತಿ ಖಾತೆ, ಸರಕಾರದ ಯೋಜನೆಗಳಾದ ಇಂದಿರಾಗಾAಧಿ ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ, ಅಂಗವಿಕಲರ ವೇತನ, ಅಂತ್ಯಸAಸ್ಕಾರದ ಪರಿಹಾರ ಇತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮ ಕಿರಣ್ ಹಾಗೂ ಉಪಾಧ್ಯಕ್ಷ ಎಸ್.ಸಿ. ನಿತಿನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಹಾಗೂ ರೈತರಾದ ಬೂದನೂರು ಧರ್ಮ, ಕೆ.ಟಿ. ಹರೀಶ್ ರೈತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.
ಸಭೆಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಎಂ.ಡಿ. ದೇವರಾಜ್, ಕೆ.ಎಸ್. ಜಾನಕಿ, ಕಂದಾಯ ಇಲಾಖೆಯ ಉಪತಹಶೀಲ್ದಾರ್ ಶ್ರೀದೇವಿ, ಕಂದಾಯ ಪರಿವೀಕ್ಷಕ ಮಂಜುನಾಥ, ಗ್ರಾಮ ಲೆಕ್ಕಾಧಿಕಾರಿಗಳಾದ ಕೆ.ಎಸ್. ಸಂತೋಷ್, ವಾಣಿ, ರಜಾಕ್, ಪೊಲೀಸ್ ಠಾಣಾಧಿಕಾರಿ ಗೋವಿಂದ್‌ರಾಜ್, ಅಬ್ಕಾರಿ ಇನ್ಸ್ಪೆಕ್ಟರ್ ಕೆ.ವಿ. ಸುಮತಿ ಇತರರು ಉಪಸ್ಥಿತರಿದ್ದರು.