ಮಡಿಕೇರಿ, ಆ. ೨೦: ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ವೇಳೆ ಮಡಿಕೇರಿಯಲ್ಲಿ ತಾ. ೧೮ ರಂದು ನಡೆದ ಪ್ರಕರಣಕ್ಕೆ ಸಂಬAಧಿಸಿದAತೆ ಬಿಜೆಪಿಯ ೯ ಮಂದಿ ವಿರುದ್ಧ ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಎಂಬAತೆ ನಗರಸಭಾ ಅಧ್ಯಕ್ಷರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ಅಧ್ಯಕ್ಷೆ ಅನಿತಾ ಪೂವಯ್ಯ ನಗರ ಠಾಣೆಯಲ್ಲಿ ದೂರು ನೀಡಿದ ಮೇರೆ ಕಾಂಗ್ರೆಸ್ನ ಹಲವು ಪ್ರಮುಖರ ಮೇಲೂ ನಗರಠಾಣೆಯಲ್ಲಿ ದೂರು ದಾಖಲಾಗಿದೆ.
ಎ.ಎಸ್. ಪೊನ್ನಣ್ಣ, ವೀಣಾ ಅಚ್ಚಯ್ಯ, ಮಂಥರ್ಗೌಡ, ಚಂದ್ರಶೇಖರ್, ತೆನ್ನಿರ ಮೈನಾ, ಸೂರಜ್ ಹೊಸೂರು, ಪ್ರಕಾಶ್ ಆಚಾರ್ಯ, ಖಾಲಿದ್, ಶಫಿ, ಮೋಹನ್ದಾಸ್, ಸುರಯ್ಯ ಅಬ್ರಾರ್, ಮೀನಾಝ್, ತೆರೆಸಾ ವಿಕ್ಟರ್ ಹಾಗೂ ಇತರರ ವಿರುದ್ಧ ದೂರು ದಾಖಲಾಗಿದೆ.