ನಾಪೋಕ್ಲು, ಆ. ೧೯: ಇಲ್ಲಿಗೆ ಸಮೀಪದ ಕಕ್ಕಬ್ಬೆ ಪಾಡಿ ಶ್ರಿ ಇಗ್ಗುತ್ತಪ್ಪ ದೇವಾಲಯದಲ್ಲಿ ವರ್ಷಂಪ್ರತಿ ನಡೆಯುವ ವರ್ಷದ ಮೊದಲನೇಯ ಹಬ್ಬವಾದ ಸಿಂಹಮಾಸ ಆರಾಧನೆಯು ತಾ. ೨೭ ರಂದು ಜರುಗಲಿದೆ. ಆ ದಿನ ತುಲಾಭಾರ ಸೇವೆ, ಮಹಾಪೂಜೆ ಸೇರಿದಂತೆ ಇತರ ಪೂಜೆ ನಡೆಯಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.