ಸೋಮವಾರಪೇಟೆ, ಆ. ೧೯: ಕಳೆದ ಒಂದು ತಿಂಗಳಿನಿAದ ಪಟ್ಟಣದ ಶ್ರೀಮುತ್ತಪ್ಪಸ್ವಾಮಿ ಮತ್ತು ಶ್ರೀಅಯ್ಯಪ್ಪಸ್ವಾಮಿ ದೇವಾಲಯದ ಭುವನೇಶ್ವರಿ ಸನ್ನಿಧಿಯಲ್ಲಿ ಜರುಗಿದ ಕರ್ಕಾಟಕ (ಆಟಿ)ಮಾಸದ ವಿಶೇಷ ಪೂಜೆ ಹಲವು ಪೂಜಾ ಕೈಂಕರ್ಯಗಳೊAದಿಗೆ ಸಂಪನ್ನಗೊAಡಿತು.
ತ್ರಿಶಕ್ತಿಸ್ವರೂಪಿಣಿಯಾಗಿ ನೆಲೆನಿಂತಿರುವ ಭುವನೇಶ್ವರಿ ದೇವಿಗೆ ಕಳೆದ ಜುಲೈ ೧೭ರಿಂದ ಆಟಿ ಮಾಸದ ದುರ್ಗಾದೀಪ ನಮಸ್ಕಾರ ಪೂಜೆಯು ಪ್ರತಿನಿತ್ಯ ಶ್ರದ್ಧಾಭಕ್ತಿಪೂರ್ವಕವಾಗಿ ಜರುಗಿತು. ಕೊನೆಯ ದಿವಸದ ಪೂಜೆಯು ಗಣಪತಿ ಹೋಮದೊಂದಿಗೆ ಆರಂಭವಾಗಿ, ನಂತರ ದೇವಿಗೆ ಶ್ರೀಸೂಕ್ತ ಹೋಮವನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಮಣಿಕಂಠನ್ ನಂಬೂದರಿ ಮತ್ತು ಜಗದೀಶ್ ಉಡುಪ ಅವರುಗಳು ನೆರವೇರಿಸಿದರು.
ಅರ್ಚಕ ಪರಮೇಶ್ವರ್‌ಭಟ್ ನೇತೃತ್ವದಲ್ಲಿ ಸುಹಾಸಿನಿ ಪೂಜೆ ನಡೆಯಿತು. ಪೂಜಾ ಕೈಂಕರ್ಯಗಳಿಗೆ ಅರ್ಚಕರುಗಳಾದ ಕೋಲಾರದ ಮುಳಬಾಗಿಲಿನ ಶ್ರೀರಂಗಭಟ್, ಪ್ರಸಾದ್‌ಭಟ್, ಚಂದ್ರಹಾಸಭಟ್, ವೆಂಕಟೇಶ್ ಅಯ್ಯರ್, ಬಜೆಗುಂಡಿ ಮಣಿ ಮತ್ತಿತರರು ಸಹಕರಿಸಿದರು.
ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್, ಪ್ರಧಾನ ಕಾರ್ಯದರ್ಶಿ ಕೆ.ಸಿ. ದಿನೇಶ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಹಲವು ವಿಶೇಷ ಪೂಜೆಗಳು ಭಕ್ತಾದಿಗಳ ಭಜನೆ, ಲಲಿತ ಸಹಸ್ರನಾಮ ಪಠಣೆ, ಪುಷ್ಪಾಲಂಕಾರ, ವೇದಮಂತ್ರಘೋಷದೊAದಿಗೆ ಪ್ರತಿನಿತ್ಯ ನಡೆಯಿತು.
ಶತ್ರುಸಂಹಾರ ಪೂಜೆ, ನಾಗರಪಂಚಮಿ, ವರಮಹಾಲಕ್ಷಿö್ಮ ಪೂಜೆ, ಅಯ್ಯಪ್ಪಸ್ವಾಮಿಗೆ ನಿರಾಂಜನ ಸೇವೆ, ದೇವಿ ಸನ್ನಿಧಿಯಲ್ಲಿ ಶ್ರೀಸೂಕ್ತ ಹೋಮದೊಂದಿಗೆ ಪ್ರಸಕ್ತ ವರ್ಷದ ಪೂಜೆಯು ಸಂಪನ್ನಗೊAಡಿತು.