ಮಡಿಕೇರಿ, ಆ. ೧೯ : ಶ್ರೀಕೃಷ್ಣ ಜನ್ಮಾಷ್ಟಮಿ ದಿನವಾದ ಇಂದು ಜಿಲ್ಲೆಯ ವಿವಿಧೆಡೆ ಜನ್ಮಾಷ್ಟಮಿ ಆಚರಿಸಲಾಯಿತು.

ದೇವಾಲಯಗಳಲ್ಲಿ ವಿಶೇಷ ಪೂಜೆ - ಪುನಸ್ಕಾರಗಳು ನೆರವೇರಿದರೆ ಮನೆಗಳಲ್ಲಿ, ಶಾಲೆಗಳಲ್ಲಿ ಸಂಘ - ಸಂಸ್ಥೆಗಳಲ್ಲಿ ಕೂಡ ಆಚರಣೆ ಮಾಡಲಾಯಿತು. ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ-ರಾಧೆಯರ ವೇಷ ತೊಡಿಸಿ ಸಂಭ್ರಮಿಸಿದರು.

*ಗೋಣಿಕೊಪ್ಪ: ತಿತಿಮತಿ ನೊಕ್ಯ ಆಚರಿಸಲಾಯಿತು.

ದೇವಾಲಯಗಳಲ್ಲಿ ವಿಶೇಷ ಪೂಜೆ - ಪುನಸ್ಕಾರಗಳು ನೆರವೇರಿದರೆ ಮನೆಗಳಲ್ಲಿ, ಶಾಲೆಗಳಲ್ಲಿ ಸಂಘ - ಸಂಸ್ಥೆಗಳಲ್ಲಿ ಕೂಡ ಆಚರಣೆ ಮಾಡಲಾಯಿತು. ಪುಟಾಣಿ ಮಕ್ಕಳಿಗೆ ಶ್ರೀ ಕೃಷ್ಣ-ರಾಧೆಯರ ವೇಷ ತೊಡಿಸಿ ಸಂಭ್ರಮಿಸಿದರು.

*ಗೋಣಿಕೊಪ್ಪ: ತಿತಿಮತಿ ನೊಕ್ಯ (ಮೊದಲ ಪುಟದಿಂದ) ಓಲೆ ಕಡುಬು, ಅಂಬಟೆ ಸಾರು, ಅವಲಕ್ಕಿ, ಮೊಸರು ಅವಲಕ್ಕಿ, ಚಕ್ಕುಲಿ ಇದನ್ನು ಕೃಷ್ಣನಿಗೆ ಅರ್ಪಿಸಿದರು.

ಈ ಸಂದರ್ಭ ಚೆಪುö್ಪಡೀರ ಕಾರ್ಯಪ್ಪ ಹಾಗೂ ಕುಟುಂಬಸ್ಥರು, ಇನ್ನಿತರರು ಹಾಜರಿದ್ದರು.

ವಿ.ಹೆಚ್.ಪಿ.ವತಿಯಿಂದ ಜನ್ಮಾಷ್ಟಮಿ

ಗೋಣಿಕೊಪ್ಪಲು : ವಿಶ್ವ ಹಿಂದೂ ಪರಿಷದ್ ವೀರಾಜಪೇಟೆ ಪ್ರಖಂಡ ವತಿಯಿಂದ ಗೋಣಿಕೊಪ್ಪಲುವಿನ ಸ್ವರ್ಣ ಭವನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ವೀರಾಜಪೇಟೆ ಪ್ರಖಂಡ ಮಾತೃ ಮಂಡಳಿಯ ಸಂಚಾಲಕಿ ಧನಲಕ್ಷಿö್ಮ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷದ್‌ನ ವೀರಾಜಪೇಟೆ ತಾಲೂಕಿನ ಕಾರ್ಯದರ್ಶಿ ಕೆ.ಯತೀಶ್ ನಂಜಪ್ಪ, ತಾಲೂಕು ಪ್ರಮುಖ್, ಡಾ. ಮಹಾಭಲೇಶ್ವರಭಟ್, ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ವಿವೇಕ್ ರಾಯ್ಕರ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಶ್ವಹಿಂದೂ ಪರಿಷದ್‌ನ ಪೊನ್ನಂಪೇಟೆ ತಾಲೂಕು ಅಧ್ಯಕ್ಷÀ ಪಂದ್ಯAಡ ಹರೀಶ್, ಸರ್ವದೈವತ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಶೀಲಾ ಬೋಪಣ್ಣ, ಮುಂತಾದವರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ತೀರ್ಪುಗಾರರಾಗಿ ಗೋಣಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ಚೈತ್ರ ಬಿ. ಚೇತನ್, ಸದಸ್ಯೆ ಕೊಣಿಯಂಡ ಬೋಜಮ್ಮ ಮುಂತಾದವರು ಹಾಜರಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕಾರ್ಯಕ್ರಮದಲ್ಲಿ ಕೃಷ್ಣ, ರಾಧೆಯ ವೇಷದಾರಿಗಳಾಗಿ ಭಾಗವಹಿಸಿದ್ದರು. ಪ್ರಥಮ ಸ್ಥಾನವನ್ನು ಪೌಶಿಕ, ದ್ವಿತೀಯ ನಿಹಾರಿಕ ಹಾಗೂ ತೃತೀಯ ಬಹುಮಾನವನ್ನು ರಿತ್ವಿನ್ ತಮ್ಮದಾಗಿಸಿಕೊಂಡರು

ಅತ್ತೂರಿನಲ್ಲಿ

ಗುಡ್ಡೆಹೊಸೂರು : ಸಮೀಪದ ಅತ್ತೂರಿನ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಂದ ಛದ್ಮವೇಶ ಸ್ವರ್ಧೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಮಾಜಿ ಅಧ್ಯಕ್ಷ ಶ್ರೀನಿವಾಸ, ಸ್ಥಳೀಯರಾದ ನಿಡ್ಯಮಲೆ ಸಾಗರ್, ಬಾಲವಿಕಾಸ ಸಮಿತಿಯ ಅಧ್ಯಕ್ಷೆ ನಳಿನಿ, ಪವಿತ್ರ ಬಸವರಾಜ್, ನಳಿನಿ, ಜೈನಭಿ, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಆಶಾ ಕಾರ್ಯಕರ್ತೆ ನಾಗರತ್ನ, ಅವಿನ್, ರಾಜಪ್ಪ ಮುಂತಾದವರು ಹಾಜರಿದ್ದರು

ಪೊನ್ನಂಪೇಟೆ

ಪೊನ್ನAಪೇಟೆ : ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪೊನ್ನಂಪೇಟೆ ತೊರೆಬೀದಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಸಂಭ್ರಮಿಸಿದರು. ಈ ಸಂದರ್ಭ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ನರಸಿಂಹಮೂರ್ತಿ ಕೃಷ್ಣಜನ್ಮಾಷ್ಟಮಿಯ ವಿಶೇಷತೆಯ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಪುಷ್ಪಾ, ಸಹಾಯಕಿ ಶಕುಂತಲಾ, ಸ್ಥಳೀಯರಾದ ಶಂಕರ, ಶ್ರುತಿ, ದೀಪ. ಪ್ರಣವ್, ರೇಣುಕ ಮತ್ತಿತರರು ಪಾಲ್ಗೊಂಡಿದ್ದರು.

ಕೂಡಿಗೆ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರಿನ ಟೈನಿಟಾಟ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕೃಷ್ಣ ಜಯಂತಿ ಆಚರಿಸಲಾಯಿತು. ಮಕ್ಕಳು ಕೃಷ್ಣ - ರಾಧೆಯರ ವೇಷ ಧರಿಸಿ ಕಂಗೊಳಿಸಿದರು.

ಕುವೆAಪು ಸರ್ಕಾರಿ ಶಾಲೆ

ಸೋಮವಾರಪೇಟೆ ವಿಶ್ವಮಾನವ ಕುವೆಂಪು ನರ್ಸರಿ ಶಾಲೆಯಲ್ಲಿ ಕೃಷ್ಣಜನ್ಮಾಷ್ಠಮಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಪುಟಾಣಿಗಳು ಕೃಷ್ಣನ ವೇಷಭೂಷಣ ತೊಟ್ಟು ಸಂಭ್ರಮಿಸಿದರು.

ಬ್ರಹ್ಮಕುಮಾರೀಸ್ ಕುಶಾಲನಗರ ಶಾಖೆ

ಗುಡ್ಡೆಹೊಸೂರು, ಆ. ೧೯: ಇಲ್ಲಿಗೆ ಸಮೀಪದ ಕುಶಾಲನಗರದ ರಾಧಾಕೃಷ್ಣ ಬಡಾವಣೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಕುಶಾಲನಗರ ಶಾಖೆಯ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ವಿಶೇಷ ಧ್ಯಾನ ಶಿಬಿರ ಏರ್ಪಡಿಸಲಾಗಿತ್ತು. ಈ ಸಂದರ್ಭ ಸಂಸ್ಥೆಯ ಪ್ರಮುಖರಾದ ಲಲಿತಾಮಣಿ ಮತ್ತು ಕೇಂದ್ರದ ಪ್ರಮುಖರು ಹಾಗೂ ಸ್ಥಳೀಯ ಕೇಂದ್ರದ ಅಭಿಮಾನಿಗಳು ಹಾಜರಿದ್ದರು.

ಸಿದ್ದಾಪುರ : ಅಮ್ಮತ್ತಿಯ ನೆಸ್ಟ್ ಜನರೇಶನ್ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶಾಲಾ ಮಕ್ಕಳು ಶ್ರೀಕೃಷ್ಣನ ಹಾಗೂ ರಾಧೆಯ ವೇಷ ಧರಿಸಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಂಜಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕಿಯರು, ಪೋಷಕರು ಪಾಲ್ಗೊಂಡಿದ್ದರು.