ನವದೆಹಲಿ, ಆ. ೧೮: ವಿವಿಧ ಕಾರಣಗಳಿಂದ ಸ್ಥಗಿತಗೊಂಡಿದ್ದ ತಲಚೇರಿ-ಮೈಸೂರು ರೈಲ್ವೆ ಯೋಜನೆಯು ಕೇರಳ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜುಲೈ ೧೬ ರಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಇತರ ವಿಷಯಗಳ ಕುರಿತು ಚರ್ಚಿಸಿದ ನಂತರ ಮತ್ತೊಮ್ಮೆ ಸುದ್ದಿಯಾಗಲು ಆರಂಭಿಸಿದೆ. ಕೇರಳದ ಉತ್ತರ ಜಿಲ್ಲೆಗಳ ಮಲಬಾರ್ ಪ್ರಾಂತ್ಯದಿAದ ಮೈಸೂರು ಮೂಲಕ ಬೆಂಗಳೂರಿಗೆ ಪ್ರಯಾಣವು ಯಾವಾಗಲೂ ರಸ್ತೆ ಸಂಚಾರ ಅಡೆತಡೆಗಳೊಂದಿಗೆ ಸವಾಲಿನದ್ದಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಹೊಸ ರೈಲು ಮಾರ್ಗದ ಪ್ರಸ್ತಾವನೆ ಕೈಗೆತ್ತಿಕೊಂಡಿದೆ. ಆಗಿನ ಕಾಲದಲ್ಲೇ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ಧೂರ್ ಶಾಸ್ತಿç ಕೂಡ ಈ ಯೋಜನೆಯನ್ನು ಶ್ಲಾಘಿಸಿದ್ದರಾದರೂ ಪರಿಸರ ಕಾಳಜಿಯ ಕಾರಣದಿಂದಾಗಿ ಈ ಯೋಜನೆ ದಶಕಗಳಷ್ಟು ವಿಳಂಬವಾಗಿದೆ.
ಕೇರಳ ರಾಜ್ಯ ಸರ್ಕಾರದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ರೂ. ೫,೦೦೦ ಕೋಟಿಗಿಂತಲೂ ಹೆಚ್ಚು ವೆಚ್ಚ ತಗುಲಲಿದ್ದು ಇದರ ಅನುಷ್ಠಾನಗೊಳಿಸಲು ಕೆಆರ್‌ಡಿಸಿಎಲ್‌ಗೆ (ಏeಡಿಚಿಟಚಿ ಖಚಿiಟ ಆeveಟoಠಿmeಟಿಣ ಅoಡಿಠಿoಡಿಚಿಣioಟಿ ಐimiಣeಜ) ವಹಿಸಿಕೊಟ್ಟಿದೆ. ನಾಗರಹೊಳೆ ರಾಷ್ಟಿçÃಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶ, ಕುಟ್ಟ, ಕಾನೂರು, ಬಾಳೆಲೆ, ಹುಲಿ ಸಂರಕ್ಷಿತ ಪ್ರದೇಶಗಳ ಮೂಲಕ ರೈಲು ಮಾರ್ಗ ಹಾದು ಹೋಗುವುದರಿಂದ ದಕ್ಷಿಣ ಕೊಡಗಿನ ಸಮೃದ್ಧ ಜೀವವೈವಿಧ್ಯವನ್ನು ಈ ಯೋಜನೆ ನಾಶಪಡಿಸುತ್ತದೆ ಎಂದು ರಾಜ್ಯ ಅರಣ್ಯ ಇಲಾಖೆ ಈ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದಕ್ಕೆ ಪರ್ಯಾಯ ಮಾರ್ಗವನ್ನೂ ಪ್ರಸ್ತಾಪಿಸಿರುವ ಕೇರಳ ಸರ್ಕಾರ ತಲಚೇರಿಯಿಂದ ಸುಲ್ತಾನ್‌ಬತೇರಿ ಮಾರ್ಗವಾಗಿ ಕಡಕೊಳ ತಲುಪುವ ಯೋಜನೆಯನ್ನು ಮುಂದೆ ತಂದಿತ್ತು. ಇದರಿಂದಾಗಿ ಅರಣ್ಯ ನಾಶ ಆಗುವುದಿಲ್ಲ.
ಇದೀಗ ಹೊಸದಾಗಿ ನಾಗರಹೊಳೆ ಅಭಯಾರಣ್ಯದೊಳಗೆ ಸುರಂಗ ಮಾರ್ಗದ ಮೂಲಕ ಮೈಸೂರು ಹೊರವಲಯದ ಕಡಕೊಳ ತಲುಪುವ ಯೋಜನೆಯನ್ನು ಕೇರಳ ಸರ್ಕಾರ ಮುಂದಿಟ್ಟಿದೆ. ತಿರುವಂತಪುರದಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಗೃಹ ಸಚಿವಾಲಯದ ಅಂತರ್ ರಾಜ್ಯ (ದಕ್ಷಿಣ ವಲಯ) ಪರಿಷತ್ತಿನ ಸ್ಥಾಯಿ ಸಮಿತಿ ಸಭೆಯಲ್ಲಿ ಕೇರಳ ಸರ್ಕಾರದ ಪ್ರತಿನಿಧಿಗಳು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ರೈಲ್ವೆ ಇಲಾಖೆ ಹಾಗೂ ಕೇರಳ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಯೋಜನೆಯ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಯ ಸಮೀಕ್ಷೆಗೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿತ್ತು.
ಯೋಜನೆ ಕಾರ್ಯಗತಗೊಳಿಸುವ ಕುರಿತು ಕೇರಳ ಹಾಗೂ ಕರ್ನಾಟಕ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಪ್ರಗತಿ ಕಾಣಲಿಲ್ಲ ಹೀಗಾಗಿ, ನಾಗರಹೊಳೆ ಅರಣ್ಯದ ಬಫರ್ ಝೋನ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಹೊಸ ಪ್ರಸ್ತಾಪ ಸಿದ್ಧಪಡಿಸಲಾಗಿದೆ. ಅನುಮತಿಗಾಗಿ ಕರ್ನಾಟಕ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಕೇರಳದ ಈ ಪ್ರಸ್ತಾವನೆಯನ್ನು ಪರಿಶೀಲನೆ ನಡೆಸಿ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ತಲಶ್ಶೇರಿ - ಮೈಸೂರು ಪರ್ಯಾಯ ಮಾರ್ಗವು ತಲಶ್ಶೇರಿಯಲ್ಲಿ ಆರಂಭವಾಗಿ ಮೈಸೂರು ಸಮೀಪದ ಕಡಕೋಳದಲ್ಲಿ ಕೊನೆಗೊಳ್ಳಲಿದೆ. ಈ ಮಾರ್ಗವು ಹೆಚ್.ಡಿ. ಕೋಟೆ, ಅಂತರಸAತೆ ಗಡಿ ಮೂಲಕ ಕೇರಳದ ಬಾವಲಿ ಗ್ರಾಮದ ಮೂಲಕ ಹಾದು ಹೋಗಲಿದೆ. ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದ ಅಂತರಸAತೆ ವಿಭಾಗದಲ್ಲಿ ೨೨ ಕಿ.ಮೀ. ಸುರಂಗ ನಿರ್ಮಾಣ ಮಾಡಲು ಯೋಜಿಸಲಾಗಿದೆ.
ಆದರೆ ಈ ಯೋಜನೆಗೆ ಪರಿಸರವಾದಿಗಳು ಮತ್ತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಕೂರ್ಗ್ ವೈಲ್ಡ್ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷ ನಿವೃತ್ತ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಅವರು ಈ ಯೋಜನೆ ತೆರಿಗೆ ಪಾವತಿದಾರರ ಹಣವನ್ನು ವ್ಯರ್ಥ ಮಾಡುವ ಯೋಜನೆ ಎಂದು ಹೇಳಿದರಲ್ಲದೆ ಇದನ್ನು ವಿರೋಧಿಸುವುದಾಗಿ ಹೇಳಿದರು. ಈ ಯೋಜನೆಯು ಕೊಡಗಿನ ಜನಸಂಖ್ಯಾ ಲಕ್ಷಣವನ್ನೇ (ಜemogಡಿಚಿಠಿhಥಿ) ಬದಲಾಯಿಸಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸುರಂಗ ಮಾರ್ಗ ನಿರ್ಮಾಣದಿಂದ ವನ್ಯ ಜೀವಿಗಳಿಗೆ ಯಾವುದೇ ತೊಂದರೆ ಅಥವಾ ಅಡಚಣೆ ಆಗುವುದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
- ಕೋವರ್ ಕೊಲ್ಲಿ ಇಂದ್ರೇಶ್