ಮಡಿಕೇರಿ, ಆ. ೧೮: ಕಡಗದಾಳು ಅಂಗನವಾಡಿ ಕೇಂದ್ರಕ್ಕೆ ಮಡಿಕೇರಿ ಇನ್ನರ್ ವೀಲ್ ವತಿಯಿಂದ ಪೀಠೋಪಕರಣಗಳನ್ನು ನೀಡಲಾಯಿತು.

ಕಡಗದಾಳು ಅಂಗನವಾಡಿ ಕೇಂದ್ರಕ್ಕೆ ಅಗತ್ಯವಾಗಿದ್ದ ೩ ಡೆಸ್ಕ್ಗಳನ್ನು ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್ ನೀಡಿದರು. ಇನ್ನರ್ ವೀಲ್ ಪ್ರಧಾನ ಕಾರ್ಯದರ್ಶಿ ಲಲಿತಾ ರಾಘವನ್, ನಿರ್ದೇಶಕರಾದ ಶಫಾಲಿ ರೈ, ಉಮಾಗೌರಿ, ಮಲ್ಲಿಗೆ ಪೈ, ಬೊಳ್ಳು ಮಾದಪ್ಪ, ಶಮ್ಮಿ ಪ್ರಭು ಪಾಲ್ಗೊಂಡಿದ್ದರು. ಮಕ್ಕಳಿಗೆ ಸಿಹಿ ವಿತರಿಸಲಾಯಿತು.